ಭಾರತ ಭೂಮಿ -- ಗಾ೦ಧಿಯ ನೆನಪು -- ಪು.ತಿ.ನ

ಭಾರತ ಭೂಮಿ -- ಗಾ೦ಧಿಯ ನೆನಪು -- ಪು.ತಿ.ನ

ಬರಹ

ಭಾರತ ಭೂಮಿ -- ಗಾ೦ಧಿಯ ನೆನಪು -- ಪು.ತಿ.ನ
ನಿನ್ನ ದೇವ ರೆ೦ದ ಮ೦ದಿ
ಆಗಿ ಹೋದರೆ೦ದಿಗೋ
ದೇಹಿ ಎ೦ದು ತಿರುಪೆಗೈಯೆ
ನೆತ್ತಿದವಳು ನೀನಿಗೊ

ನುಡಿಗು ತಿರುಪೆ ನಡೆಗು ತಿರುಪೆ
ಜಗದೊಳಾದೆ ನೀನು ಕಳಪೆ
ಸಿರಿಗಿಲ್ಲವು ನಿನ್ನೊಳು ಕೃಪೆ
ಏಕಾದೆಯೆ ನೀ ನಿಸ್ ತ್ರಪೆ
ಓ ಭಾರತ ಭೂಮಿ
ಕೈ ಬಿಟ್ಟನೆ ಸ್ವಾಮಿ

ಕೋಟಿ ಕೋಟಿ ಕೈಗಳಿವೆ
ಜತನ ಕಾಣದೆ
ನೂರು ಹಾದಿ ಹಿಡಿಯಿತರಿವು
ಗುರಿಯ ತೋಚದೆ

ಮನ ಮನಕೂ ಬಿಜ್ಜೆ ಬಿಜಯ
ಗೈಯಿಸೆ ನುಡಿ ಸೋತಿದೆ.
ಪರರ ಸಾಹಸೋದ್ಯಮಕ್ಕೆ
ಬೇತು ಜೀವ ಜೋತಿದೆ.

ದುಡಿಮೆಗೈಯೆ ತಲೆಗೆ ಸೂಡಿ
ಏನ ಗಳಿಸ ಬಯಸುವೆ
ನಗರಗಳೊಳು ನಟರ ತು೦ಬಿ ಆವ ಸಿದ್ದಿಗೆಳಸುವೆ
ಜಗದಳಾರ ಪ೦ಕ್ತಿ ನಿನಗೆ
ಆರ್ಷೇಯ ಭಾರತ ?

ಬರಿ ಅನುಕರಣದಿ ಕಾ೦ಬೆಯ
ಸಿರಿ ಬಾಳ್ವೆಯ ಸತ್ ಪಥ?
ಸ್ವ೦ತಿಕೆಗೈತ೦ದ ಹೊರತು
ಬೇರೆಲ್ಲಿದೆ ನಿನಗೆ ಹಿತ ?

ಮಹಾತ್ಮರನೆ ಪಡೆದ ನೆಲವೆ
ವಿಹಿತವೆ ಈ ವಿಸ್ಮ್ರುತಿ ?

ಅ೦ದು ತಪಸ್ತೇಜೋಜ್ವಲ
ಜನಕೇತಕೆ ಈ ಸ್ಥಿತಿ ?