ಸಾಗರದಂಚಿನಿಂದಚಿಗೆ ಬಾನ ಹಕ್ಕಿಯ
ಹಕ್ಕಿಯ ಉದರದೊಳು ೧೬೦ ಜೀವಗಳ
ಲೋಕದ ಜನರ ಪ್ರೀತಿ, ಆಸೆ, ನೀರೀಕ್ಷೆಗಳ
ಹೊತ್ತೊಯ್ದು ಸಾಗಿಸುತಿರುವೆ, ಶುಭವಾಗಲೆನ್ನ ಪಯಣ ಓ ದೇವರೇ
ನೆನೆದಂತೆ ನಡೆಯಿತೆನ್ನ ಹಾರಾಟ
ಕಾಣುತಿರುವೆ ಪ್ರಯಾಣಿಕರೆಲ್ಲರ ಹರುಷದಾಟ
ಕ್ಷಣಗಳೈದು ಉಳಿದಿವೆ ಮುಗಿಸಲು ನನ್ನ ಆಟ
ನಿನ್ನ ಸಹಾಯಕೆ ಹೇಳುವೆ ಧನ್ಯವಾದ ಓ
ದೇವರೇಆಗಸದಿಂದ ಇಳಿಯೋವಲ್ಲಿ ಎಡವಿದೆನು
ಮುಂದಕೆ ಹೋಗಿ ಭುವಿಯ ಮುಟ್ಟಿದೆನು
ಸಾವಿರದ ಮೂರರ ಪ್ರಯಾಣದ ಅನುಭವ ಮರೆತೆನು
ನೀ ಮುನಿಸಿದೆಯಾ ನನಮೇಲೆ ಓ ದೇವರೇ
ಬಂದು ಬಳಗ ಗೆಳೆಯರ ಆಗಮನದ ನಿರೀಕ್ಷಕರ
ಊರು, ಊರ ಜನರ ಕಾಣೋ ಆಸೆಯ ಆಗಮನಿಗಳ
ಇವರೆಲ್ಲರನೊಬ್ಬರಿಗೊಬ್ಬರನು ಸೇರಿಸುವ ಇಂಗಿತದ
ನನ್ನಾಸೆಯ ಚಿವುಟಿ ಬಿಟ್ಟೆಯಾ ಓ ದೇವರೇಸುಂದರ
ಸ್ವಪ್ನವೊಂದು ಕಳೆದೇ ಹೋಯಿತು…
ಮಗುವಾಗಿರುವುದೊಂದು ಸುಂದರ ಸ್ವಪ್ನವಿದ್ದಂತೆ
ಕ್ಷಣಕಾಲ ಮನಕೆ ಮುದನೀಡಿ
ಮನದಂಚಿನಲಿ ನೃತ್ಯವಾಡಿ ಮಾಯವಾದಂತೆ
ಆಮೇಲೆ ನೆನೆ ನೆನೆದರೂ ಬಾರದು ಬಳಿ
ಅದಾವುದೂ ಅಂಜಿಕೆಯಿಲ್ಲ, ಅದಾವುದೂ ಕಟ್ಟುಪಾಡಿಲ್ಲ
ನಡೆದದ್ದೇ ದಾರಿ, ಮಾಡಿದ್ದೆಲ್ಲವೂ ಸಿಹಿಬೆಲ್ಲ
ಎಂದೆಂದೂ ಆರದ ಸುಖಃ ಸಂತೋಷ ಮನೆ ತುಂಬೆಲ್ಲ
ಬಳಿ ಬಂದು ನಕ್ಕು, ನಲಿಸಿ, ನಲಿವ ಮನೆ ಮಂದಿಯೆಲ್ಲ
ಅದಾವುದೂ ಈಗ ನನ್ನ ಬಳಿಯಿಲ್ಲ
ಎಲ್ಲೆಲ್ಲೂ ಗಲಿಬಿಲಿ ಗೊಂದಲವೇ ಎಲ್ಲ
ಸುಂದರ ಸ್ವಪ್ನವೊಂದು ಕಳೆದೇ ಹೋಯಿತು
ಮುಂಜಾವಿನ ಕಿರಣವೂ ಮನಕೆ ಘಾಸಿಗೊಳಿಸಿತು
ಸ್ನೇಹದ ಬೇರೆ ಬೇರೆ ಆಯಾಮಗಳು…
ಸ್ನೇಹ ಹುಟ್ಟುವಾಗ : ಸ್ನೇಹವೊಂದು ಆಕಸ್ಮಿಕ ಘಟನೆ
ಭಾವನೆ ಭಾವನೆಗಳ ಬದಲಾವಣೆ
ಒಬ್ಬರಿಗಿನ್ನೊಬ್ಬರು ಕೊಡುವ ಮನ್ನಣೆ
ಸುಂದರ ಭಾಂದವ್ಯಕ್ಕೊಂದು ಒಗ್ಗರಣೆ
ಸ್ನೇಹ ಪಕ್ವವಾದಾಗ : ಸ್ನೇಹವೊಂದು ಸುಂದರ ಆಲಿಂಘನ
ಮನಸ್ಸು ಮನಸ್ಸುಗಳ ತೀರದ ಸ್ಪಂದನ
ಒಮ್ಮತ ಭಿನ್ನಮತಗಳ ನಡುವಿನ ತಾಡನ
ಕೂಡಿಕೆ ಅಗಲಿಕೆಗಳ ನಿರಂತರ ಸಮ್ಮಿಲನ
ಸ್ನೇಹ ಬೇರ್ಪಟ್ಟಾಗ : ಸ್ನೇಹವೊಂದು ಸವಿನೆನಪುಗಳ ಸ್ಮರಣೆ
ಮರೆಯದ ಅನುಭವಗಳ ಸಂಗ್ರಹ ಕೋಣೆ
ಎಂದೆಂದಿಗೂ ಜೊತೆಯಲಿರುವ ಝಂಕಣೆ
ಮನದೊಳಗೇ ಸುಪ್ತವಾಗಿ ಕಾಡುವ ಬವಣೆ
ಝಂಕಣೆ = ಕೊರಗು
ದೇವನು ಅವತರಿಸಿದ ಭೂಮಿಯಲಿ,
ಬಾಳುವೆನು ಖುಷಿಯಲಿ…
ಆ ದೇವನು ಅವತರಿಸಿದ ಈ ಭೂಮಿಯಲಿ
ಬಾಳುವೆನು ನಾನು ಖುಷಿ ಖುಷಿಯಲಿ
ರಾಮನು ಹುಟ್ಟಿದ ಸ್ವರ್ಗ ಇದು
ಕೃಷ್ಣನು ಆಡಿದ ನಾಡು ಇದು
ಶಿವಾಜಿ ಆಳಿದ ಭೂಮಿ ಇದು
ಸುಭಾಸರ ಪ್ರೀತಿಯ ದೇಶ ಇದು
ಈ ಮಾತೆಯ ಒಡಲಲಿ ಜನಿಸಿದೆನು
ಬೇಕೆಂದದ್ದನ್ನೆಲ್ಲಾ ಇತ್ತಳು ನನಗವಳು
ಆಶಿಸಿ ಪಡೆದೆನು, ಕಸಿದು ಪಡೆದೆನು
ಕೋಪಿಸದೇ ಕೊಟ್ಟಳು ನನಗವಳು
ಈ ತಾಯಿಯ ಕಣ್ಣಲಿ ಕಣ್ಣಿಟ್ಟು
ಸುಂದರ ಭಾರತದ ಆಸೆಯನ್ನಿಟ್ಟು
ಸ್ವಂತದ ಆಸೆಯೆಲ್ಲವನ್ನ ಬಿಟ್ಟು
ನನ್ನ ಬಾಳನು ಅವಳಿಗೆ ಮುಡಿಪಾಗಿಟ್ಟು
ಆ ದೇವನು ಅವತರಿಸಿದ ಈ ಭೂಮಿಯಲಿ
ಬಾಳುವೆನು ನಾನು ಖುಷಿ ಖುಷಿಯಲಿ
ಓ ಬಾನ ಸಂಚಾರಿ ಸುಖೋಯೀ…
ಓ ಬಾನ ಸಂಚಾರಿ ಸುಖೋಯೀ
ಬಾನೆತ್ತರಕೆ ಚಿಮ್ಮಿದ
ಮೋಡವ ಸೀಳಿ ಅಬ್ಬರಿಸಿದ
ಓ ವಾಯು ಸೇನಾ ಆಭರಣ
ನಿನಗಿರಲಿ ಸದಾ ಶುಭ ಪ್ರಯಾಣ
ಎತ್ತರೆತ್ತರಕೆ ಹೋಗುವೆ
ರವಿಯನ್ನು ಮುಟ್ಟಲು
ನಿನ್ನಂದ ನೋಡ ನೋಡುತಲೇ
ಮರೆತನು ರವಿ ನಿನ್ನ ಸುಡಲು
ನಿಂತಾಗ ಗರಿಗೆದರಿದ ನವಿಲು
ಹಾರಿದಾಗ ಅಬ್ಬರದ ಹುಯಿಲು
ನೀ ಶತ್ರುವಿನ ಹುಟ್ಟಡಗಿಸಲು
ಬರುವುದು ಆಕಾಶದಿ ಜಯದ ಮುಗಿಲು
ಮನದೊಳಗಿನ ದ್ವಂದ್ವಗಳು…
ಮನದನಿಯೊಂದೆಡೆ ಹೇಳುತಿತ್ತು
ನಾ ಮಾಡಿದಾ ಕರ್ಮ ಅಪಚಾರ
ಮನದನಿಯಿನ್ನೊಂದೆಡೆ ಹೇಳುತಿತ್ತು
ಜೀವನ ಪೊರೆಯುವಾಟದ ವ್ಯವಹಾರ
ಅಪಚಾರವೆಂದು ವ್ಯವಹಾರ ಬಿಟ್ಟೊಡೆ
ವ್ಯವಹಾರವೆಂದು ಅಪಚಾರ ಮಾಡಿದೊಡೆ
ಯಾವುದು ಲೇಸು ಯಾವುದು ಒಳಿತು
ತನಗೇನೂ ತೋಚದು ಮನದನಿಯೊಂದೆಡೆ ಹೇಳುತಿತ್ತು
ಸತ್ಯ ಸಜ್ಜನಿಕೆಯ ದಾರಿ ಎನಗಿಹುದು
ಅಪಚಾರದ ವ್ಯವಹಾರ ಎನಗೆ ತೆರವಲ್ಲದು
ಪರೋಪಕಾರಿಯಾಗುವೆನು ಜೀವನದುದ್ದಕೂ
ತನಗಿದೇ ಒಳಿತು, ಮನದನಿಯಿನ್ನೊಂದೆಡೆ ಹೇಳುತಿತ್ತು
ಮುಂಜಾವಿನ ಸೌಂದರ್ಯ…
ಮುಂಜಾವಿನ ಹನಿ ಹನಿ ಇಬ್ಬನಿ
ಚಿಲಿಪಿಲಿ ಗುಟ್ಟುವ ಹಕ್ಕಿಗಳಾ ದನಿ
ಬಾನಂಚಿಗೆ ಸರಿಯುವ ಮೋಡರಾಶಿ
ಇದ ನೋಡುವುದೇ ಬಲು ಖುಷಿ
ರವಿ ಮೂಡುತಲಿರುವ ಬಾನು
ಸುಂದರ ಬಣ್ಣದ ಕಮಾನು
ರವಿಕಿರಣವೆಲ್ಲೆಲ್ಲೂ ಪಸರಿ
ಕಾಣುತಿಹುದು ಚಿನ್ನದಾ ಗರಿ
ನಿದ್ದೆಯಿಂದೆದ್ದ ಮರಗಿಡಗಳು
ಅವನ್ನು ಮೀಯಿಸಿದ ಇಬ್ಬನಿ ಹನಿಗಳು
ಗೂಡಿನಿಂದ ಹೊರಗೋಡುವ ಪಕ್ಷಿಗಳು
ಜಾಡ್ಯವನು ಕೊಯ್ದೆದ್ದ ಪ್ರಾಣಿಗಳು
ಸುತ್ತು ಮುತ್ತೆಲ್ಲಾ ತನ್ನದೇ ತಂಪು
ತಂಪುಗಾಳಿ ತಂದ ಸುಖದ ಕಂಪು
ಇದೆಲ್ಲವ ತಡರಿ ಬಂದ ರವಿ ಕಿರಣ ರಾಶಿ
ಇದ ನೋಡುವುದೇ ಬಲು ಖುಷಿ
ಪ್ರಸ್ತುತ ರಾಜಕೀಯ ಪರಿಸ್ಥಿತಿ…
ತುತ್ತು ಕೂಳಿಗೆ ಪರದಾಡುವೆಯಾ ಮುತ್ತು
ನವಮಾಸ ಹೊತ್ತು, ಹೆತ್ತು
ಭುವಿಗಿಳಿಸಿದ ಅಬ್ಬೆಯೇ ಕೊಡದೇ ಹೋದಳೇ ತುತ್ತು
ಅಯ್ಯೋ ! ಹೇಗೆ ತಾನೇ ಕೊಟ್ಟಾಳು ?
ನೂರತ್ತು ಹಗರಣಗಳ ಹೊತ್ತು
ಬಡಜನರ ತುತ್ತಿಗೆ ತಂದು ಕುತ್ತು
ಬಾಳುವರು ನಮ್ಮ ನೇತಾರರು ಇವತ್ತು
ಆಹಾ! ಅವರದೇನು ಗಮ್ಮತ್ತು
ತುತ್ತು ಕೂಳಿಗೆ ಪರದಾಟವೇ ನಮ್ಮ ಸೊತ್ತು !!
ಜನ ನಿನ್ನ ಕರೆಯುವರು ನದಿಯಾಗಿ,
ನಾ ಕಾಣುವೆನು…
ಸುತ್ತಲೂ ಕಾಡು, ನಡುವೆ ನಿನ್ನಯ ದಾರಿ
ಹುಟ್ಟಿದ್ದೆಲ್ಲೋ ನೀ, ಹರಿಯುವುದೆಲ್ಲೋ ನೀ
ವರುಷಕೊಮ್ಮೆ ಹರುಷದೀ ತುಂಬುವೀ ನೀ
ಆಮೇಲೊಮ್ಮೆ ಬರೀ ಮರಳ ಹೊತ್ತಿರುವೆ ನೀ
ಸುತ್ತಲೂ ಕಾಡು, ನಡುವೆ ನಿನ್ನಯ ದಾರಿ
ನಿನ್ನನಾಶ್ರಯಿಸಿದ ಸಸ್ಯಗಳಿಗೆ
ನಿನ್ನನರಸಿ ಬಂದ ಪ್ರಾಣಿಗಳಿಗೆ
ನೀ ನೀಡುವಿ ತಂಪಾದ ನೀರ ಉರಿಬಿಸಿಲಿನಲ್ಲೂ
ಸುತ್ತಲೂ ಕಾಡು, ನಡುವೆ ನಿನ್ನಯ ದಾರಿ
ನೀ ಹೇಗಿದ್ದರೂ ಚೆನ್ನ ನನ್ನ ಈ ಮನಕೆ
ಜನ ನಿನ್ನ ಕರೆಯುವರು ನದಿಯಾಗಿ
ನಿನ್ನ ನಾ ಕಾಣುವೆನು ತಾಯಿಯಾಗಿ
ಗತಿ ತೋರು ಭಗವಂತ…
ದಿಕ್ಕಿಲ್ಲದ ನನ್ನ ಜೀವನ
ಹುಡುಕಾಟವೇ ದಿನಾ ದಿನ
ಕಳಕೊಂಡಿಹೆನು ದಾರಿಯನು
ಗತಿ ತೋರನೇ ಆ ದೇವನು
ಬರಿದಾಗಿದೆ ಹೃದಯ, ಬತ್ತಿವೆ ನಾಳಗಳು
ಉರಿದೋಗಿವೆ ಕನಸುಗಳು, ಒಡೆದಿವೆ ಕಣ್ಣುಗಳು
ದುಃಖವೇ ಜೀವನದಿ ತುಂಬಿದೆ
ತಾಳದೇ ಮನವು ಒಡೆದಿದೆ
ಸಾಕಾಗಿದೆ ಜೀವನ, ಬಾಳಿನ ರೋದನ
ಹೊರಟೋಗಿದೆ ಸುಖ, ದುಃಖವೇ ದಿನಾ
ಹೋರಾಟದಲಿ ತನು ಬಳಲಿದೆ
ಭಯದಲಿ ಮನವು ನಲುಗಿದೆ
ಮುಂಜಾವಿನ ತಂಪೂ ಚುಚ್ಚುತಿದೆ
ಚಂದಿರನ ಬೆಳಕೂ ಸುಡುತಿದೆ
ಕಷ್ಟವೇ ಉಸಿರಲಿ ಬೆರೆತಿದೆ
ಕತ್ತಲೆಯೇ ಸುತ್ತಲೂ ಕವಿದಿದೆ
ತನು ಮನದಲಿ ಸಾಮ್ಯವಿಲ್ಲದೆಡೆ ಎರಡೂ ಬಡವಾಗುವದು…
ತನುವೊಂದೆಡೆ, ಮನವೊಂದೆಡೆ
ತನು ಮನದಲಿ ಸಾಮ್ಯವಿಲ್ಲದೆಡೆ
ತನು ಮನಗಳೆರಡೂ ಬಡವಾಗುವದು
ತನು ನೋಡುವುದು ಕೇವಲ ವರ್ತಮಾನವ
ಊಟ ನಿದ್ದೆ ಹೊತ್ತೋತ್ತಿಗೆ ಬಿದ್ದರೇ ಇದಕೆ ಚೆನ್ನ
ನಾ ಮಾಡೆನು ಕೆಲಸವ, ನಾ ತಾಳೆನು ಆಯಾಸವ
ತನು ನೋಡುವುದು ಕೇವಲ ವರ್ತಮಾನವ
ಮನ ನೋಡುವದು ಮುಂದಿನ ಭವಿಷ್ಯವ
ಇಂದಿನ ಊಟ ನಿದ್ದೆಕಿಂತ ಮುಂದಿನದೇ ಇದಕೆ ಚೆನ್ನ
ಇಂದಿನ ಕೆಲಸ ಮುಂದೆ ಈಯುವುದು ಸುಖ ಜೀವನ
ಮನ ನೋಡುವದು ಮುಂದಿನ ಭವಿಷ್ಯವ
ತಾಳ ಮೇಳೈಸಿದ ತನು ಮನಗಳು
ಇದ್ದರೆ ಅದುವೇ ಚೆನ್ನ
ಜೀವನದಿ ಬರುವುದು ಚಿನ್ನ
ವರುಷಗಳ ಗಣತಿಯು ತಂದಿರಿಸಿದೆ
ಮುಪ್ಪಿನ ಜರತ್ವವನು…
ವರುಷಗಳು ದಾಟಿದವು, ದಾಟಿದವು
ಮನ ಸೂರೆಗೊಂಡಿದ್ದ ಆ ಮುಗ್ಧ
ನಗುವಿನ ನಗು ಮೊಗದಲಿ
ಕಂಡಿದೆ, ಆಸೆ, ರೋಷ, ಧ್ವೇಷ, ಪ್ರೇಮ
ಕೂಡಿದ ನವತಾರುಣ್ಯತನವು
ನಾಗಾಲೋಟದಿ ಸಾಗಿದ
ವರುಷಗಳ ಗಣತಿಯು ತಂದಿರಿಸಿದೆ
ಮುಪ್ಪಿನ ಜರತ್ವವನು
ಆನಂತರದ ಪಯಣವನೂ ಕೂಡ !!!
ಭುವಿಯಬ್ಬೆ ದೂರಿಹಳು ಭಗವಂತನಿಗೆ,
ನಮಗೆಲ್ಲ ಬಂದಿದೆ ಆಪತ್ತು…
ಉರಿ ಬಿಸಿಲ ಧಗೆ
ಬತ್ತಿ ಬರಡಾಗಿದೆ ಧರೆ
ನೀರ ಹುಡುಕುತ ಹೊರಟಿಹೆ
ನೀರು ಸಿಕ್ಕರೆ ಬದುಕುವೆ
ಬತ್ತಿಹಳು ನೇತ್ರಾವತಿ
ನೀರಿಗಾಗಿ ಎಲ್ಲೆಲ್ಲೂ ಸರತಿ
ಮೇಲೆಲ್ಲೂ ಇಲ್ಲ ಪಸೆ
ಕೆಳಗೂ ಇಲ್ಲವೇ ಸೆಲೆ
ಕಾಡ ಕಡಿದು ಮೆರೆದೆ
ಕಲ್ಲನೆಲ್ಲವ ಕೊರೆದೆ
ಭುವಿಯೆಲ್ಲವನು ದೋಚಿದೆ
ಮಾಡಿದೆ ಇದನ ಬರಿದೆ
ಭುವಿಯಬ್ಬೆ ಸಿಟ್ಟಾಗಿಹಳು
ಭಗವಂತನಿಗೆ ದೂರಿಹಳು
ಅವ ನಿಲ್ಲಿಸಿಹನು ಸವಲತ್ತು
ನಮಗೆಲ್ಲ ಬಂದಿದೆ ಆಪತ್ತು
ರಾಜ್ಯದುನ್ನತಿಯ ಕನಸೊಂದ ಕಂಡಿಹೆನು…
ರಾಜ್ಯದುನ್ನತಿಯ ಕನಸೊಂದ ಕಂಡಿಹೆನು
ನಿತ್ಯ ಹೋರಾಡಿ ಸಾಕಾರ ಗೊಳಿಸುವೆನು
ಕೋಟಿ ಕನ್ನಡಿಗರ ಸಹಕಾರ ಕೋರುವೆನು
ಅಂದು ಅವರುಗಳು ಕಂಡ ಕನಸು
ಒಡೆದೋಗಿಸಿವೆ ಇವರುಗಳ ಮುನಿಸು
ಕೋಟಿ ಕನ್ನಡಿಗರು ಆರಿಸಿದ ಇವರಿಂದೇನೂ ಆಗಲಿಲ್ಲ
ನಾವಿನ್ನು ಸುಮ್ಮನೆ ಕುಳಿತರೆ ಕರ್ನಾಟಕವೇನೂ ಆಗುವುದಿಲ್ಲ
ಒಡೆದಿರುವ ಕನ್ನಡಿ ಚೂರುಗಳು ನಾವಲ್ಲ
ಸೇರಿದರೆ ನಾವು, ನಮಗೆ ಸಾಟಿ ಇನ್ಯಾರೂ ಇಲ್ಲ
ಎತ್ತಿ ನಿಲ್ಲಿಸುವೆವು ಕರುನಾಡ ಯಶಸ್ಸಿನ ಆಗಸದಲಿ
ಸಾಗಿಸುವೆವು ಕರುನಾಡ ಸಾಧನೆಯ ದಾರಿಯಲಿ
ಮಗದೊಮ್ಮೆ ಕರುನಾಡ ಕಟ್ಟೋಣ ಬಾ ಕನ್ನಡಿಗನೇ ||
ತಿಳಿಯೋವಾಗ ತಡವಾಯಿತು,
ಬಾಳಿನ ಪಯಣವು ಮುಗಿದೇ ಹೋಯಿತು…
ಹರಿ ಹರಿ ನಿನ್ನಯ ನಾಮವೇ ಅಲ್ವಾ
ಕಿರಿಕಿರಿಗಳಿಗೆ ಗಟ್ಟಿ ಮದ್ದಿನ ಹಲ್ವಾ
ಜಗದಾರಂಭವು ನಿನ್ನಿಂದಲೇ ಎಂದೆ
ಜಗದ ಸೂತ್ರವೂ ನೀನೇನೆ ಎಂದೆ
ಸಾರಿದೆನು ಮಾಡಿದ್ದೆಲ್ಲವೂ ನಾನೇನೆ ಎಂದು
ಮೆರೆದೆ ನನ್ನಿಂದಲೇ ಎಲ್ಲವೂ ಎಂದು
ತಿಳಿದೇ ತಪ್ಪು ಮಾಡಿದೆನು
ಮಾಡೋವಾಗ ನಿನ್ನನು ಮರೆತೆನು
ಅಳೆ ಅಳೆದು ಶಿಕ್ಷೆಯ ನೀಡಿದೆ ನೀನು
ಅನುಭವಿಸೋವಾಗ ಹಲುಬಿದ್ದೇ ನಿನ್ನನು
ನಾ ಮಾಡಿದ್ದು ಬರೀಯ ಆಡಂಬರ
ನೀನೇನೆ ಸರ್ವಸೃಷ್ಟಿಯ ಆಧಾರ
ತಿಳಿಯೋವಾಗ ತಡವಾಯಿತು
ಬಾಳಿನ ಪಯಣವು ಮುಗಿದೇ ಹೋಯಿತು
GT ಯಲ್ಲಿ Developer ಅಕ್ಕನ ಬಗ್ಗೆ…
ನಾನೊಂದು ಸುದಿನ ಪಡೆದಿದ್ದೆ
Developer ಆಗಿ ನಿಮ್ಮ ಪಡೆದಿದ್ದೆ
ನಿಮ್ಮಲ್ಲಿ ಮಾತಾಡೋ ಆಸೆ ಎನಗೆ ಇತ್ತೇನೋ
ಅದಕ್ಕಾಗಿ ಹೊಸ ಹೊಸ Issue ಸಿಗುತ್ತಿತ್ತೇನೋ
Issue ಗಳೆಲ್ಲಾ ಒಂದೊಂದು ನೆಪವಷ್ಟೇ
ನಿಮ್ಮ ತಲೆತಿನ್ನೋ ಆಸೆ ಎನಗಿತ್ತಷ್ಟೇ
ಅಕ್ಕನೊಡನಾಡುವ ಆಸೆ ಎನಗಿತ್ತು
ಉಖಿ ಯಲಿ ಅದು ಎನಗೆ ಫಲಿಸಿತ್ತು
ಅಮ್ಮ ನನ್ನಮ್ಮ…
ಅಮ್ಮ ನನ್ನಮ್ಮ
ನವಮಾಸ ಹೊತ್ತು
ಭುವಿಗಿಳಿಸಿದ
ಅಮ್ಮ ನನ್ನಮ್ಮ
ನಾ ಮಾತಾಡುವೆ
ಸುಮ್ಮನೆ
ನೀ ಉತ್ತರಿಸುವೆ
ಸುಮ್ಮನೆ
ನೀನೇ ನನ್ನ ಗೆಳತಿಯು
ನೀನೇ ನನ್ನ ಬಾಳ ಹಣತೆಯು
ಮುಪ್ಪಾದರೂ ನಿನಗೆ
ನವ ತರುಣಿಯೇ ನೀ ಎನಗೆ
ನಿನ್ನೆದುರು
ದೇವರಿಲ್ಲ ಎನಗೆ
ನೀನೇನೆ ಎಲ್ಲಾನೂ ನನಗೆ
ಅಮ್ಮ ನನ್ನಮ್ಮ
ಹೇಗೆ ಬಾನಲ್ಲಿ ಸೂರ್ಯನಿದ್ದರೆ
ಚಂದ್ರನಿಲ್ಲವೋ ಹಾಗೇ…
ಕತ್ತಲಾಗೆ ಬೆಳಗುತಾನೆ ಸೂರ್ಯ
ಸುತ್ತು ಮುತ್ತೆಲ್ಲಾ ರಮ್ಯವೋ ರಮ್ಯ
ಹೊಸ್ತಿಲಾಗೆ ಬಿಡುತಾನೆ ಕಿರಣ
ಬಂತಲ್ಲೋ ಚಂದಿರನಿಗೆ ಮರಣ
ರವಿ ಮುಳುಗುತಾನೆ ಕಡಲೊಳಗೆ
ಚಂದಿರ ಬರುತಾನೆ ಬಾನೊಳಗೆ
ಸುತ್ತು ಮುತ್ತೆಲ್ಲಾ ತನ್ನದೇ ತಂಪು
ಮನದ ತುಂಬೆಲ್ಲಾ ಹುರುಪೋ ಹುರುಪು
ಅವನಿದ್ದರೆ ಇವನಿಲ್ಲ ಬಾನಲ್ಲಿ
ಸುಖವಿದ್ದರೆ ದುಖಃವಿಲ್ಲ ಜೀವನದಲ್ಲಿ
ನೆನೆದದ್ದು ನಡೆಯದು ಇಲ್ಲಿ
ನಡೆದದ್ದೇ ಬರೆದದ್ದು ಹಣೆಯಲ್ಲಿ
ಹೇ ಭಾರತ ಮಾತೇ !…
ಶಿರವನಿನ್ನಡಿಗೆ
ಮುಡಿಪಾಗಿಡುವೆನು
ಹೇ ಭಾರತ ಮಾತೇ !
ಆದ್ಯಂತ್ಯದ ಜೀವನದ
ಸಾರ್ಥಕತೆಗೆ, ನಿನ್ನ ಸೇವೆಯೇ
ಪರಮ ಸನಿಹ ದಾರಿಯು
ಋಷಿ ಮುನಿಗಳಿವ ತಪಸಾಚರಿಸಿ
ಕಾಣ್ವ ಧನ್ಯತೆಯ
ಕಾಣುವೆನು ನಾನಿನ್ನ ಸೇವೆಯಲಿ
ಎಂದೆಂದೋ ಜನಿಸಿಹ ವೀರರ
ಜೀವನದಾದರ್ಶವು ಎನಗಿರಲು
ಜೀವನವೆನ್ನದು ನಿನಗೆ
ಸಮರ್ಪಿತವಾಗಿರಲು
ನಿನಗ್ಯಾಕೆ ಈ ಪಾಡು ತಾಯಿ
ಸರ್ವ ಸಮರ್ಥ ತಾಯಿಯೇ
ಕಣ್ಣೀರ್ ಧಾರೆಯ ಸ್ಥಗಿಸಿ
ಪಡು ಸಂಭ್ರಮ ಅನಂತಾನಂತ ಪರ್ಯಂತ
ಓ ಗಣಕ ಯಂತ್ರವೇ…
ಓ ಗಣಕ ಯಂತ್ರವೇ !
ಎಲ್ಲೆಲ್ಲೋ ನೀನಿದ್ದ ಆ ದಿನಗಳು
ಎಲ್ಲೆಲ್ಲೂ ನೀನಿರುವ ಈ ದಿನಗಳು
ಚಾರ್ಲ್ಸ ಹಾಕಿದ ಬೀಜವಿಂದು
ಬೆಳೆದಿದೆ ತನಗೆ ತಾನೇ ಸರಿಯೆಂದು
ಎಷ್ಟೆಷ್ಟೋ ಕೆಲಸಗಳ ಮುಗಿಸುವೆ ಕ್ಷಣದಲ್ಲಿ
ಪ್ರತ್ಯುಪಕಾರ ನಿನಗೆ ಬೇಕಿಲ್ಲ
ಯಾರೇ ಹೇಳಿದರೂ ಮಾಡುವೆ ಕ್ಷಣದಲ್ಲಿ
ಯಜಮಾನನ ಸ್ಮರಣೆ ನಿನಗೆ ಬೇಕಿಲ್ಲ
ಅದೆಷ್ಟೋ ಜನರಿಗೆ ಕೆಲಸ ಒದಗಿಸಿದೆ
ಅದೆಷ್ಟೋ ಜನರ ದಿಕ್ಕುಪಾಲು ಮಾಡಿದೆ
ಹೊಗಳುವುದೋ ತೆಗಳುವುದೋ ನಾನರಿಯೆನು
ನೀ ಮಾಡಿದ ಸಹಾಯವನು ಸರ್ವದಾ ನೆನೆಯುವೆನು
ಚಾರ್ಲ್ಸ್ = ಗಣಕ ಯಂತ್ರ ಕಂಡು ಹಿಡಿದಾತ.
ಸ್ವಾತಂತ್ರ್ಯನಂತರದ ಭಾರತವೆಮದು…
ಸ್ವಾತಂತ್ರ್ಯನಂತರದ ಭಾರತವೆಮದು
ಇಲ್ಲ ಪರದೇಶೀಯರಿಂದ ಸ್ವಾತಂತ್ರ್ಯಾಪಹರಣ
ಬದಲಾಗಿ ಪಡೆದಿದೆ, ಭಿನ್ನತೆಯಾಗಿ
ದೇಶೀಯರಿಂದ ಪರರ ಸ್ವಾತಂತ್ರ್ಯಾಪಹರಣ
ತನಗಾಗಿ ಪರರ ಉದರ ಸಿಗಿಯುವ ಈ ಮಂದಿ
ಪರರಿಗಾಗಿ ತನ್ನನು ಸವೆಸಿರುವ ಆ ಮಂದಿ
ಒಂದೇ ಗೂಡಿನ ಹಕ್ಕಿಗಳೆಲ್ಲ ಈ ಮಂದಿ
ಒಂದೇ ಗುಣವ ಹೊಂದಿರವು
ಭಾವನೆಗಳ ಪ್ರವಾಹದಲ್ಲಿ
ಧನಸುಳಿಯಲ್ಲಿ ಕೊಚ್ಚಿ
ಸಂಬಂಧsಗಳನು ಅದುಮಿ
ತಾನೂ ಪಡೆಯದೇ, ಪರರಿಗೂ ನೀಡದೆ
ಸ್ವಾತಂತ್ರ್ಯವೆಂಬ ಮರೀಚಿಕೆಯ ಬೆನ್ನು ಹತ್ತಿದ
ಇವರು ಬಲ್ಲರೇ ಸ್ವಾತಂತ್ರ್ಯದ ಅರ್ಥ
ದಿನ ದಿನದ ಆಸೆಯ ಪೂರೈಕೆಯಲ್ಲಿ…
ದಿನ ದಿನದ ಆಸೆಯ
ಪೂರೈಕೆಯಲ್ಲಿ ನಡೆದು ಬಂದ ಹೆಜ್ಜೆ
ಕೆಲವರದು ಸತತ ಪರಿಶ್ರಮದ
ಎಲ್ಲರೂ ಮೆಚ್ಚುವ ಹೆಜ್ಜೆ
ಕೆಲವರದು ಸತತ ಕುತಂತ್ರದ
ಧರ್ಮರಹಿತ ಹೆಜ್ಜೆ
ಹೆಜ್ಜೆ ಹೆಜ್ಜೆ ಇಡುತ ತಲುಪಿದ ಗುರಿಯಲ್ಲಿ
ಕೆಲವರು ಪಡೆದ ಮಾನವೆಷ್ಟೋ
ಕೆಲವರು ಪಡೆದ ಅವಮಾನವೆಷ್ಟೋ
ದೊಡ್ಡಪ್ಪ ವಾಸುದೇವರ ಬಗ್ಗೆ…
ನಮ್ಮ ಮನೆಯ ಹಿರಿಯರು ಇವರು
ನಮ್ಮೆಲ್ಲರ ಮನದಾಳದಲ್ಲಿ ಇರುವವರು
ಬಾಳ ನೌಕೆಯಲಿ ಒಡನಾಡಿಗಳನೆಲ್ಲಾ ತೇಲಿಸಿದವರು
ಬಯಸಿದ ದೂರ ದೂರದ ಗುರಿಯನು ತಲುಪಿಸಿದವರು
ಹಿರಿಯರಲಿ ಲೋಕದ ನಡೆಯ ಮಾತನು ಆಡುವವರು
ಕಿರಿಯರಲಿ ತಮಾಷೆಯನು ಮಾಡುತ ಮಾಡಿಸುವವರು
ಹಾಡೆಂದರೆ ಮನಸನೆಲ್ಲಾ ಹಾಡಿಗೇ ಕೊಟ್ಟು ಹಾಡುವವರು
ಹಾಡಿದರೆ ಕೇಳುಗರೆಲ್ಲರ ಮನವ ಕರಗಿಸುವವರು
ಕೃಷಿಯಲೇ ಎಲ್ಲವನು, ಕೃಷಿಯಿಂದಲೇ ಎಲ್ಲವನು ಕಂಡವರು
ಗೋವಿನೊಡನೆಯೇ ಬೆಳೆದು ಅಬ್ಬೆಯನು ಅದರಲೇ ಕಂಡವರು
ಸಮಾಜದಲಿ ಎಲ್ಲದಕೂ ಸೈ ಎಂದವರು, ಅಂದಂತೆ ನಡೆದುಕೊಂಡವರು
ಜನ ಜನಕೆ ಬೇಕಾದವರು, ಅವರೊಳಗೇ ತನ್ನನು ತಾನು ಕಂಡವರು
ಎಲ್ಲರಿಗೆ ಎಲ್ಲವನೂ ಕೊಟ್ಟು ನಿಟ್ಟುಸಿರು ಬಿಟ್ಟವರು
ಅವರ ಹರ್ಷದೊಳೇ ತನ್ನ ಹರ್ಷವ ಕಂಡುಕೊಂಡವರು
ಕೊನೆಯ ಮಾತು ಃ
ಬಾಲ್ಯದಲಿ ನಿಮ್ಮನ್ನು ಮಾದರಿಯಾಗಿ ಇಟ್ಟುಕೊಂಡಿದ್ದೆವು
ಬೆಳೆ ಬೆಳೆದಂತೆ ನಮ್ಮ ಹಾಗಾಗಲಿಲ್ಲವಲ್ಲಾ ಎಂದು ಕೊರಗಿದ್ದೆವು
ನಿನ್ನ ನೆನೆವ ಮನವ ಕೊಡು ದೇವರೇ…
ಏನು ಕಷ್ಟವೋ ನಿನಗೆ ಉಡುಪಿಯೊಡೆಯನೆ
ನನ್ನ ಮನದ ಒಳಗೆ ಬಂದು ನೆಲೆಸಲು !
ನಿನ್ನ ಮರೆತು, ಏನೇನೋ ನೆನೆದು ದಿನಗಳೆಲ್ಲವ ಹಾಳು ಮಾಡಿದೆ
ನಿನ್ನನು ನೆನೆದು ದಿನಗಳ ಕಳೆಯುವ, ಮನವ ಕೊಡು ಹರಿಯೇ
ಕಷ್ಟಗಳಿಗೆಲ್ಲಾ ನಿನ್ನನೇ ಹಣೆದೆ, ಸುಖಗಳೆಲ್ಲವು ನನ್ನಿಂದಲೇ ಎಂದೆ
ಸುಖ ದುಃಖಗಳೆಲ್ಲಾ ನಿನದೇ ದಾನವು ಎಂದು ತಿಳಿಯುವ, ಮನವ ಕೊಡು ಹರಿಯೇ
ನಿನ್ನ ಲೋಕವನು ನನ್ನದೆಂದೆನು, ನಿನ್ನ ನೆನೆವುದ ಮರೆತು ಬಿಟ್ಟೆನು
ನಿನ್ನ ನೆನೆಯುತ ಬಾಳ ಕಳೆಯುವ, ಮನವ ಕೊಡು ಹರಿಯೇ
Software Testing Course ನಲ್ಲಿ
ಟೆಸ್ಟಿಂಗ್ ಗುರು ಗಿರೀಶ್ ಬಗ್ಗೆ …
ಗುರುವೇ, ಗುರುವೇ, ಟೆಸ್ಟಿಂಗ್ ಗುರುವೇ
ಓಡೋಡಿ ನಾವು ಬಂದಾಯ್ತು
ಹೋರಾಟ ಮಾಡಿ ನಾವು ಕೂತಾಯ್ತು
ಅಲ್ಲಿ ಇಲ್ಲಿ ನೋಡುತಿರುವೆವು
ನಿಮಗಾಗಿ ಕಾಯುತಿರುವೆವು
ಹೇಳಿದ್ದು ನೀವು ೮ ಗಂಡ
ಬರುವುದು ನೀವು ೯ ಗಂಡ
ತಡವೇತಕೆ ಗುರುವೇ
ನಾವಿರುವುದು ಗೊತ್ತಿಲ್ಲವೇ
ಗುರುವೇ, ಗುರುವೇ, ಟೆಸ್ಟಿಂಗ್ ಗುರುವೇ !!!
ಪ್ರಕೃತಿಯನ್ನು ಪ್ರಕೃತಿಯಿಂದಲೇ ಸಿಂಗರಿಸುವಾಸೆ…
ಭಗವಂತನಿತ್ತ ಪ್ರಕೃತಿಯನು ರಂಜಿಸುವಾಸೆ
ರಂಜಿಸುವ ಪ್ರಕೃತಿಯನು ನೋಡುವಾಸೆ
ಆಗಸದ ರವಿಕಿರಣ ತಂತಿಯಲಿ
ಮೋಡ ಮುತ್ತುಗಳ ಪೋಣಿಸಿದ
ಸೂರ್ಯ ಪದಕವ ಜೋಡಿಸಿದ
ಮಾಲೆಯ ಭುವಿಯಬ್ಬೆಗೆ ತೊಡಿಸುವಾಸೆ
ಜಗದ ನದಿಗಳ ಮಿಲನ ತಂತಿಯಲಿ
ಪರ್ವತ ಮುತ್ತುಗಳ ಪೋಣಿಸಿದ
ಹಿಮ ಪರ್ವತಗಳ ತಿಲಕವ ಜೋಡಿಸಿದ
ಮಾಲೆಯ ಭುವಿಯಬ್ಬೆಗೆ ತೊಡಿಸುವಾಸೆ
ಸಾಗರದುದ್ದದ ಜಲತಂತಿಯಲಿ
ಸಾಗರ ಗರ್ಭದ ಮುತ್ತುಗಳ ಪೋಣಿಸಿದ
ಬೃಹತ್ ಅಲೆಗಳ ತಿಲಕವ ಜೋಡಿಸಿದ
ಮಾಲೆಯ ಭುವಿಯಬ್ಬೆಗೆ ತೊಡಿಸುವಾಸೆ
ಹಣ-ಹಗರಣ-ರಾಜಕಾರಣ
ಇವುಗಳ ನಡುವಣ ಸಂಬಂಧ…
ಹಣ-ಹಗರಣ-ರಾಜಕಾರಣ
ಇವುಗಳ ನಡುವಣ
ಸಂಬಂಧದೆದುರು
ದೇಶದ ಹಿತ ನಗಣ್ಯ
ಹಣಕ್ಕಾಗಿ ಬಿದ್ದರೂ ಚೆನ್ನ ಹೆಣ
ಎಣಿಕೆಗೆ ಕೈಯಲ್ಲಿ ಇದ್ದರೆ ಹಣ
ನಾ ಮಾಡುವುದು ರಾಜಕಾರಣ
ಇರದಿದ್ದರಾದೀತೇ ಹಗರಣ
ಇದಾದರೇನೇ ಬರುವುದು ಹಣ
ಇದು ಮಂತ್ರಿಯ ಅಂಬೋಣ
ನಾ ಮಾಡುವುದು ಮತದಾನವೆಂಬ ಕರ್ಮ
ರಾಜಕಾರಣಿಗಳರಿಯರು ಇದರ ಮರ್ಮ
ಪ್ರತಿಯೊಂದು ಮತಕೂ ಕಟ್ಟುವರು ಬೆಲೆ
ದೋಚುವರೆಲ್ಲವನೂ ಸಿಕ್ಕಿದರೆ ಕೊಂಚ ಸೆಲೆ
ನಂತರ ತನಗೆಲ್ಲಿಯೂ ಇಲ್ಲ ನೆಲೆ
ಇದು ಮತದಾರನ ಅಂಬೋಣ
ಅದಿಕಾರ-ಚುನಾವಣೆ-ರಾಜಕಾರಣ
ಇವುಗಳ ನಡುವಣ
ಸಂಬಂಧದೆದುರು
ಸಾಮಾನ್ಯರ ಹಿತ ನಗಣ್ಯ
ದೇವರ ದೇವನೇ ನೀನಿರುವುದು ಸತ್ಯವೇ…
ದೇವರ ದೇವನೇ ನೀನಿರುವುದು ಸತ್ಯವೇ
ಕೇಳಿದ್ದು ಕೊಡಲಿಲ್ಲ
ಕೊಟ್ಟದ್ದು ದಕ್ಕಲಿಲ್ಲ
ದಕ್ಕಿದ್ದು ಸರಿಹೋಗಲಿಲ್ಲ ||
ದೇವರ ದೇವನೇ ನೀನಿರುವುದು ಸತ್ಯವೇ
ದೊಪ್ಪ ದೊಪ್ಪನೆ ಆಟವಾಡಿಸಿದೆ
ಪಟ ಪಟನೆ ಕೆಳಗುರುಳಿಸಿದೆ
ಸರಸರನೆ ಎಂದು ಎಬ್ಬಿಸುವೆ ||
ದೇವರ ದೇವನೇ ನೀನಿರುವುದು ಸತ್ಯವೇ
ಎಲ್ಲೆಲ್ಲೋ ಬಿದ್ದೆ
ಕಷ್ಟಗಳಿಂದಾದೆ ಒದ್ದೆ
ದೇವರ ದೇವನೇ ನೀನಿರುವುದು ಸತ್ಯವೇ ||
ಬಯಸಿದ್ದೇ ಮಾಡಿದೆನು, ಮಾಡಿದ್ದೇ ನಂಬಿದೆನು…
ಮನದಲಿ ಆಸೆಗಳ ತುಂಬಿ
ಕಣ್ಣಲಿ ಕನಸುಗಳ ತುಂಬಿ
ಹೊರಟಿರುವೆ ಗುರಿಯೆಡೆಗೆ
ಗುರಿಯಿರುವ ದಡದೆಡೆಗೆ
ನಾನೇನೋ ಬಯಸಿದೆನು
ಸಿಗದೇ ಒದ್ದಾಡಿದೆನು
ನಾನೇನೋ ಮಾಡಿದೆನು
ಆಗದೇ ಬಳಲಿದೆನು
ಸೋತೆನು, ಸೋತು ಸಣ್ಣಗಾದೆನು
ಸೋಲಲಿ ಪಡೆದ ನಿರಾಸೆ, ತಂದಿತು
ಗೆಲ್ಲಲು ಬೇಕಾದ ಹುಮ್ಮಸ್ಸು
ಗೆದ್ದೆನು, ಗೆದ್ದು ಹಿಗ್ಗಿದೆನು
ಜಯದಲಿ ಪಡೆದ ಯಶಸ್ಸು, ತಂದಿತು
ಬದುಕಲು ಬೇಕಾದ ಹುಮ್ಮಸ್ಸು
ನಾನೇನೋ ಬಯಸಿದೆನು
ಬಯಸಿದ್ದೇ ಮಾಡಿದೆನು
ನಾನೇನೋ ಮಾಡಿದೆನು
ಮಾಡಿದ್ದೇ ನಂಬಿದೆನು
ಜಗಕೆ ನಾನೇನು ಕೊಟ್ಟೆ…
ಓ ಮೇಣವೇ ಓ ಮೇಣವೇ
ಉರಿದುರಿದು ಬತ್ತಿದೆ
ಉರಿದು ಜಗಕೆಲ್ಲ ಬೆಳಕನು ಕೊಟ್ಟೆ
ಜಗಕೆ ನಾನೇನು ಕೊಟ್ಟೆ
ಓ ಮೋಡವೇ ಓ ಮೋಡವೇ
ಕರಕರಗಿ ನೀರಾದೆ
ಕರಗಿ ಜಗಕೆಲ್ಲ ನೀರನು ಕೊಟ್ಟೆ
ಜಗಕೆ ನಾನೇನು ಕೊಟ್ಟೆ
ಓ ಗುಲಾಬಿಯೇ ಓ ಗುಲಾಬಿಯೇ
ಅರಅರಳಿ ಬಾಡಿದೆ
ಅರಳಿ ಜಗಕೆಲ್ಲ ಸೌಂದರ್ಯವನು ಕೊಟ್ಟೆ
ಜಗಕೆ ನಾನೇನು ಕೊಟ್ಟೆ
ಬೆಳಕನೂ ನಾ ಪಡೆದೆ
ನೀರನೂ ನಾ ಪಡೆದೆ
ಸೌಂದರ್ಯವನೂ ನಾ ಪಡೆದೆ
ಜಗಕೆ ನಾನೇನು ಕೊಟ್ಟೆ
ಅವರಿವರ ಕೈಯಲ್ಲಿ ದೇಶವು ಸಿಕ್ಕುತಿದೆ…
ಅನಿವಾಸೀ ಭಾರತೀಯ ನಾನು
ನಿವಾಸಿಗಳು ಮರೆತರು ದೇಶವನು
ಸೋನಿಯಾ ಆಳುವಳು ದೇಶವನು
ಮಲ್ಯ ಆಳುವನು ರಾಜ್ಯವನು
ದೇಶವೇನಾದೀತು
ರಾಜ್ಯವೇನಾದೀತು
ಅನಿವಾಸಿಗಳಿಂದ ನಿವಾಸ ಬರಡಾಗಿದೆ
ಅವರಿವರ ಕೈಯಲ್ಲಿ ದೇಶವು ಸಿಕ್ಕಿದೆ
ಏಳಲಾರದೇ ಬಳಲುತಿದೆ, ಒದ್ದಾಡುತಿದೆ