ಭಾವನೆ By girish.shetty on Tue, 11/27/2007 - 15:49 ಬರಹ ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡುತಿರೆ ಹರಿಯುತಿವೆ ಭಾವನೆಗಳ ಮಹಾಪೂರ ಬಿದಿಗೆ ಚಂದ್ರನ ನೋಡಿ ಹುಟ್ಟಿದಂತೆ ಕಡಲಲಿ ಉಬ್ಬರ ಉಕ್ಕಿ ಬರುತಿಹ ಭಾವನೆಗಳ ಕಟ್ಟಿ ಹಾಕುವ ಆತುರ ನಿಲ್ಲುವುದೆಂತು? ಕಟ್ಟೆಯೊಡೆದು ನುಗ್ಗುತಿವೆ ಅವಳೆಡೆಗೆ ನದಿಯು ಹುಡುಕುವಂತೆ ಸಾಗರ