ಭಾವಯಾನ...

ಭಾವಯಾನ...

ಕವನ

ಬರುತಿರಲು ನೀನು ಮುಂಗಾರಂತೆ

ತರುತಿರಲು ಕಾಂತಿ ಮಳೆಬಿಲ್ಲಿನಂತೆ

ಬೆರೆತಿರಲು ನೋಟ ಸೇತುವೆಯಂತೆ

ಗುರುತಿರಲು ಹನಿಯು ಮುತ್ತಿನಂತೆ.

 

ಒಲವಿನ ಹರಿವಿಗೆ ಹಾದಿಯ ಅರಿವಿಲ್ಲ

ಗೆಲುವಿನ ಓಟದ ಆತುರ ಇದಕಿಲ್ಲ

ಚೆಲುವಿನ ಸಂಗಮ ಕಾಲದಿ ಹುದುಗಿದೆ

ನಲಿವಿನ ನಾಳೆಗೆ ಹಗಲು ಕಾದಿದೆ.

 

ಕಡಲಂತೆ ನೀನೇ ನನ್ನ ಸುತ್ತಲೂ

ಹಡಗಂತೆ ನಾ ನಿನ್ನಯ ನೆರಳು

ಬೆಡಗಂತೆ ನಮ್ಮ ಈ ಬಂಧ

ಮುಡಿಪಂತೆ ನಿನ್ನದೇ ಭಾವ ತೀರ.

-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್