ಭಾವುಕ ಮನ ತಾ ಪಾಡಿತು
ಕವನ
ಸಾಗುತಲಿರೆ ಪೂದೋಟದೊಳರುಣೋದಯ ಸಮಯಾ I
ಮೂಗರಳುತೆ ಕಣ್ಕಾಣುತೆ ಮನಪಾಡಿತು ಮುದದೀI
ಈ ಪರಿಮಳವೀ ಬಣ್ಣವನೆರಚೀ ತನುಗಳಿಗೇI
ಕಾರ್ನಿಶೆಯೊಳು ಪೂರಾಜಿಯ ಸಲೆಪೋಣಿಸಿದವನಾ IIಸಾಗುತII
ನಾ ಗಗನವನೇ ನೋಡಲು ಬೆರಗೇರಿತು ಮನದೀI
ಕೋಗಿಲೆಗಿಳಿಯಾಲಾಪನೆಯನುರಾಗದ ಸುಧೆಗೇI
ಆ ಗಡಣಗಳೀ ಕ೦ಠದಿ ಸಿರಿವ೦ತಿಗೆ ಮೆರೆದೂI
ಪೂಗಳ ಶರವೇ ಹಾರಿದವೊಲು ಚಿಮ್ಮಲು ನಭಕೇ IIಸಾಗುತII
ಕಾರ್ಮುಗಿಲುಗಳೇದ್ದೆಳುತಲಿರೆ ಪಶ್ಚಿಮ ಪೊಳೆಯೇI
ತಾ ಮಿರುಗುತಲಾ ಮಿ೦ಚನು ಮಸೆಯುತ್ತಿಹ ಭರಕೇI
ಹೋ ಮೆರೆಯುತಲೋಲಾಡುತಲಿರೆ ಲಾಸ್ಯದ ಬೆಡಗೇI
ಮೈಮರೆಸುವ ಘ೦ಟಾರವ ಮೊರೆಯುತ್ತಿದೆ ಲಯದೇ IIಸಾಗುತII
ನೀರಿನಸೆಲೆ ಮೈದೋರುತೆ ಹರಿಯುತ್ತಿರೆ ಭರದೀI
ಭೂರುಹಗಳಿಗಾಹಾರದ ಸವಿಯೂಡುತ ಮುದದೀI
ನೀರಜವನ ರಾರಾಜಿಸುತಿರೆ ತ೦ಬೆಲರಲೆಪೇI
ಸಾರುತಲಿದೆಯಾ ದೇವನ ಘನಸಾರದ ಪದಕೇ IIಸಾಗುತII
ಪೂವಸೆಯೊಲು ಹೂಹಾಸಿದೊ ಭುವನ೦ಗಣದಿರಲೂI
ಗಾವರಿಸುತ ಪೂದೋಟದೆ ರಸಹೀರ್ವಳಿ ರವಕೇI
ಭಾವುಕ ಮನ ತಾ ಪಾಡುತೆ ಜಗದೋಜನ ಪದವಾI
ಪಾವನ ಜಗ ರೂವಾರಿಗೆ ತನುವಾಯಿತು ವಶವೂ IIಸಾಗುತII
ಚಿತ್ರ್
Comments
ಸರ್ ++++++++++
ಸರ್ ++++++++++
In reply to ಸರ್ ++++++++++ by srimiyar
ಧನಾತ್ಮಕ ಪ್ರೋತ್ಸಾಹಕ್ಕೆ
ಧನಾತ್ಮಕ ಪ್ರೋತ್ಸಾಹಕ್ಕೆ ಧನ್ಯವಾದ ಶ್ರೀನಿವಾಸರೇ.
>> ಪಾವನ ಜಗ ರೂವಾರಿಗೆ ತನುವಾಯಿತು
>> ಪಾವನ ಜಗ ರೂವಾರಿಗೆ ತನುವಾಯಿತು ವಶವೂ
ನಮ್ಮ ಮನಗಳು ನಿಮ್ಮ ಪದಗಳ ನರ್ತನಕ್ಕೆ ವಶವಾದವು
ನಿಮ್ಮ ಷಟ್ಪದಿಗಳನ್ನು ನಮಗೆ ಷಟ್ಮನಗಳು ಬೇಕಾಗಿದೆ
In reply to >> ಪಾವನ ಜಗ ರೂವಾರಿಗೆ ತನುವಾಯಿತು by partha1059
ಧನ್ಯವಾದ ಪಾರ್ಥ.ಷಟ್ಪದಿಯಲ್ಲಾ
ಧನ್ಯವಾದ ಪಾರ್ಥ.ಷಟ್ಪದಿಯಲ್ಲಾ ಇದು ಚೌಪದಿ ! ಆದಿಪ್ರಾಸವಿಲ್ಲದ ಲೋಪವೂ ಇದೆ.
In reply to ಧನ್ಯವಾದ ಪಾರ್ಥ.ಷಟ್ಪದಿಯಲ್ಲಾ by raghumuliya
ಹೌದಲ್ಲವೆ ಅದೇನೊ ರಘು ಅ0ದರೆ
ಹೌದಲ್ಲವೆ ಅದೇನೊ ರಘು ಅ0ದರೆ ಷಟ್ಪದಿ ಎ0ದು ಮನದಲ್ಲಿ ಅಚ್ಚು ಒತ್ತಿದೆ ಹಾಗಾಗಿ ಪ್ರತಿಕ್ರಿಯೆಯಲ್ಲಿ ದೋಷ !!
ಪ್ರಕೃತಿಯೇ ಪದಗಳಾಗಿ ಮೂಡಿ ಬಂದು
ಪ್ರಕೃತಿಯೇ ಪದಗಳಾಗಿ ಮೂಡಿ ಬಂದು ಕಣ್ಣೆದುರು ಕಾಣಿಸುತ್ತಿದೆ..
ಷಟ್ಪದಿಗಳ ಬಗ್ಗೆ ಏನೂ ಗೊತ್ತಿಲ್ಲ, ಆದ್ರೆ ಈ ಬರಹದ ಹಲವು ಸಾಲುಗಳು ಪ್ರಕೃತಿ ದರ್ಶನ ಮಾಡಿಸಿದವು..
ಸುಂದರ ಕವನ.
ಶುಭವಾಗಲಿ..
\|
In reply to ಪ್ರಕೃತಿಯೇ ಪದಗಳಾಗಿ ಮೂಡಿ ಬಂದು by venkatb83
ಗಮನವಿಟ್ಟು ಓದಿ ಆಸ್ವಾದಿಸಿದ
ಗಮನವಿಟ್ಟು ಓದಿ ಆಸ್ವಾದಿಸಿದ ನಿಮಗೆ ಧನ್ಯವಾದ ವೆ0ಕಟೇಶರೇ.