ಭಾಷಾಂತರ ಎಂಬುದೊಂದು ಬದುಕಿನಂತೆ....

* ಮಾಗಿದಷ್ಟೂ ಬಗ್ಗುತ್ತಾ, ಒಗ್ಗುತ್ತಾ ಹೋಗುತ್ತದೆ.
* ಅವರವರ ಬದುಕಿನಂತೆ, ಅವರವರ ಭಾಷಾಂತರ ಅವರವರಿಗೆ ಹೆಚ್ಚು.
* ಆದರೆ ಭಾಷಾಂತರದಲ್ಲಿ, ನೂರಕ್ಕೆ ನೂರರಷ್ಟು ಪರಿಪೂರ್ಣತೆ ಸಾಧ್ಯವಿಲ್ಲ."ಥೇಟ್ ಬದುಕಿನಂತೆ..."
* ಭಾಷಾಂತರದಲ್ಲಿ ಪಕ್ವವಾದಷ್ಟೂ ಪಕ್ಕಾಗುತ್ತಾ ಹೋಗುತ್ತವೆ ಪದಗಳು, ಬದುಕಿನ ಅನುಭವಗಳಂತೆ...
* ಭಾಷಾಂತರ ಬದುಕಾಗುವುದನ್ನೂ ಮೀರಿ, ಬದುಕ ಭಾಷಾಂತರವಾಗಬೇಕು.. ಭಿನ್ನತೆಯ ಬೆಸೆಯುವ ವಿಭಿನ್ನ ಭಾವಭಿತ್ತಿಗಳಿಂದ...
* ಬದುಕ-ಭಾಷಾಂತರದಲ್ಲಿ, ಅನುವಾದದ ಆರ್ದ್ರತೆಯಿದೆ, ತರ್ಜುಮೆಯ ತನ್ಮಯತೆಯಿದೆ, ತಾಯ್ನುಡಿಯ ತಲ್ಲೀನತೆಯಿದೆ...
* ಭಾಷಾಂತರವು, ಪದ-ಭಾಷೆಗಳನ್ನೂ ದಾಟಿದ ಧನ್ಯತೆಯ ಧ್ಯಾನವಾಗಬೇಕು, ಮತ್ತೊಮ್ಮೆ ಥೇಟ್ ಬದುಕಿನಂತೆ…!
“ಸೆಪ್ಟೆಂಬರ್ ೩೦ - ಭಾಷಾಂತರ ದಿವಸದ ಸದಾಶಯಗಳು”
-ಕ.ನಾ ವಿಜಯಕುಮಾರ, ಶಿಕಾರಿಪುರ.
ಚಿತ್ರ ಕೃಪೆ: ಇಂಟರ್ನೆಟ್ ತಾಣ