ಭಾಷಾವೈವಿಧ್ಯತೆಯೆಂಬ ಹೂವಿನ ತೋಟ

ಭಾಷಾವೈವಿಧ್ಯತೆಯೆಂಬ ಹೂವಿನ ತೋಟ

ಬರಹ

ಇಂದು ಅಳ್ವಾಸ್ ನುಡಿಸಿರಿ 2008. ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಲನ. ಇಡೀ ರಾಜ್ಯದ ಜನತೆಯೇ ಹೆಮ್ಮೆ ಪಡುವಂತೆ ಇಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ. ಕೇವಲ ಸಾಹಿತ್ಯ ಮಾತ್ರವಲ್ಲ. ಸಂಗೀತ,ಹಾಡು, ನಾಟಕ, ಸಾಂಸ್ಕ್ರುತಿಕ ಕಾರ್ಯಕ್ರಮ , ಹಾಸ್ಯ ಇತ್ಯಾದಿಗಳ ಒಟ್ಟು ಸಮುಚ್ಚಾಯ. ಇಂತಾ ಸಮ್ಮೇಳನದಲ್ಲಿ ಶ್ರೀ ಚ0ದ್ರಶೇಖರ ನಂಗಲಿ ಅವರು ಮಾತಾನಾಡುತ್ತಾ ಕನ್ನಡ ಭಾಷೆಯ ಹಲವು ಪ್ರಭೇಧಗಳು ಹೇಗೆ ನಿರ್ನಾಮ ಹೊಂದಿ ಆ ಜಾಗದಲ್ಲಿ ಪ್ರಮಾಣಿತ ಭಾಷೆಯೊ0ದು ಆಕ್ರಮಿಸಿಕೊಳ್ಳುತ್ತಿರುವ ಬಗ್ಗೆ ಆತಂಕದಿಂದ ಮಾತಾನಾಡಿದರು.
ಅವರು ಮಾತಾನಾಡುತ್ತಾ ಹೇಗೆ ಭಾಷೆಯೊ0ದು ರಾಜಕೀಯ ಶಕ್ತಿಯ ಕಾರಣದಿಂದ ಪಡಕೊಳ್ಳುವ ಈ ಮಾನ್ಯತೆಗಳು ಮುಂದೆ ಬೇರೆ ಕನ್ನಡದ ಉಪಭಾಶೆಗಳನ್ನು ತನ್ನ ಆಧೀನಕ್ಕೆ ತೆಗೆದು ಕೊಲ್ಲುವ ಬಗೆಯನ್ನು ಸಾದೋಹರಣವಾಗಿ ವಿವರಿಸಿದರು.
ಹೌದಾಲ್ವಾ ಇದು ನಮ್ಮ ಸಿನೆಮಾಗಳಲ್ಲಿ ಢಾಳಾಗಿ ಕಾಣಿಸಿಕೊಳ್ಳುತ್ತದೆ. ಅಡುಗೆ ಭಟ್ಟ ಮ0ಗಳುರು ಕನ್ನಡದಲ್ಲಿ ಮಾತಾನಾಡಿದರೆ, ಅಯೋಗ್ಯ ರಾಜಕಾರಣಿ ಧಾರವಾಡ ಕನ್ನಡದಲ್ಲಿ ಮಾತಡುತ್ತಾನೆ. ಇದು ಒಂದು ಸಾಂಸ್ಕ್ರುತಿಕ ರಾಜಕಾರಣವಲ್ಲವೇ?
ಆದರೆ ನಮ್ಮ ಕನ್ನಡದಲ್ಲಿರುವ ಇಂತಹ ಭಾಷಾವೈವಿದ್ಯತೆಯೇ ಒಂದು ತೋಟದಲ್ಲಿರುವ ಹಲವು ಹೂವಿನ ಗಿಡಗಳಂತೆ ಸುಂದರವಲ್ಲವೇ? ಎಲ್ಲ ಭಾಷಾವೈವಿಧ್ಯತೆಯನ್ನು ಗೌರವಿಸೋಣ.