ಭಾಸ್ಕರ ಎಂಬ ಗಝಲ್

ಭಾಸ್ಕರ ಎಂಬ ಗಝಲ್

ಕವನ

ಬೆಳಗಿನ ತಮಂದ ಸರಿಸುತ ಬಂದನು ಭಾಸ್ಕರ

ಬೆಳ್ಳಿಯ ಬೆಳಕನು ಚೆಲ್ಲುತ ನಿಂದನು ಭಾಸ್ಕರ||೨||

 

ಬೆಟ್ಟಗುಡ್ಡ ಗಿಡಮರ ಎಲ್ಲವೂ

ನವಚೈತನ್ಯ ಪಡೆದವು

ನೆಟ್ಟಿಹ ಸಸಿಯಲಿ ಮೊಳಕೆ ತಂದನು ಭಾಸ್ಕರ||೨||

 

ಜಗದ ಜನಕೆ ಜಡವನು ತೊಲಗಿಸಿ ಸಲುಹಿದ

ಜೀವಕೋಟಿಗೆ ಶಕ್ತಿಯ ನೀಡಿ

ನಿಶ್ಯಕ್ತಿ ಕೊಂದನು ಭಾಸ್ಕರ||೩||

 

ನೇಸರನ ಬಲದಿಂದ ಜೀವನಚಕ್ರ ನಿತ್ಯವು ಸಾಗಿದೆ.

ನರರಿಗೆಲ್ಲ ಸೋಮಾರಿಯಾಗದೆ

ದುಡಿಯಿರಿ ಎಂದನು ಭಾಸ್ಕರ||೪||

 

ಅರುಣನ ಮಾತಿಂದ ನಿರಾಸೆ ಮನದಿ ಬಿಜಲಿ ಮೂಡಿತು

ಕರುಣಾಕರ ಸರ್ವಜೀವಿಯ

ಹೃದಯದಿ ಮಿಂದನು ಭಾಸ್ಕರ||೫||

 

*ಶ್ರೀ ಈರಪ್ಪ ಬಿಜಲಿ* 

 

ಚಿತ್ರ್