ಭೀತಿಯಲ್ಲಿನ ಆಚರಣೆ

ಭೀತಿಯಲ್ಲಿನ ಆಚರಣೆ

ಟಿಪ್ಪು ಜಯಂತಿಯ ವಿಷಯದಲ್ಲಿ ಇವತ್ತು ರಾಜ್ಯಾದ್ಯಂತ ವ್ಯಾಪಕವಾಗಿ ಚರ್ಚೆಗಳು ನಡೆಯುತ್ತಿವೆ. ಟಿಪ್ಪುವಿನ ಪರಾಕ್ರಮ ಗಳು ಕೇವಲ 'ಟಿಪ್ಪು ಜಯಂತಿ'ಗಷ್ಟೇ ಸೀಮಿತವೇ ? ಎಂಬುವುದರ ಬಗ್ಗೆ ಪರಾಮರ್ಶೆ ನಡೆಸುವ ಅಗತ್ಯವಿದೆ. ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ‌ಮಾಡಿದ ಒಬ್ಬ ರಾಜನ ಆಚರಣೆ ಯನ್ನು ‌ಮಾಡುವುದರಲ್ಲಿ‌ ತಪ್ಪೇನಿದೆ ? ಎಂಬ ನಿಲುವು ನನ್ನದು. ಅದಕ್ಕಾಗಿ ಒಂದು ಲೇಖನವನ್ನು ಬರೆಯುವ ಇಚ್ಚೆಯಿದೆ. ನಾನು ಇಚ್ಚಿಸುವ 'ಶಹೀದೇ ಟಿಪ್ಪು'ವಿನ ಜೀವನ ಎಲ್ಲಾ ಗಳಿಗೆಗಳಿಗೂ ನನಗೆ ಪ್ರೇರಣೆಯಾಗಬೇಕು. ವ್ಯಕ್ತಿಗತವಾಗಿ ಯಾರನ್ನು ಹೊಗಳಿಕೊಳ್ಳಲೂ , ವಿರೋಧಿಸಲೂ ನಾನು ಬಯಸುವುದಿಲ್ಲ. ಜನರಿಗೆ ಇಂತಹಾ ಹೋರಾಟಗಾರರ ಜೀವನ ಶೈಲಿಯನ್ನು ತಮ್ಮಲ್ಲಿ ಅಳವಡಿಸಿಕೊಳ್ಳಲು ನಾವೇಕೆ ಪ್ರೇರಣೆ ನೀಡಬಾರದು ?... ಇದರ ಬೆನ್ನಿಗೇ ಸ್ವಾತಂತ್ರ್ಯ ದಿನಾಚರಣೆ ಬರಲಿದ್ದು ಟಿಪ್ಪುವಿನಂತಹ ಸ್ವಾತಂತ್ರ್ಯ ಪ್ರೇಮಿಗಳ‌ ನೆನಪುಗಳನ್ನು ಹಂಚಿಕೊಳ್ಳಲು ನಮಗೆ ಅವಕಾಶಗಳನ್ನು ನೀಡುತ್ತದೆ.

ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಹೊಸತೊಂದು ಟ್ವಿಸ್ಟ್ ಪಡೆದುಕೊಳ್ಳುವ ‌ಸಾಧ್ಯತೆಗಳು‌ ಹೆಚ್ಚಾಗಿದೆ. 'ಕಾಶ್ಮೀರ' ದ ವಿಷಯ ಎಲ್ಲರಿಗೂ ಗೊತ್ತೇ ಇದೆ. ಊಹಿಸಲು ನಮ್ಮಲ್ಲಿ ಅವಕಾಶಗಳಿಲ್ಲ. ನೆತ್ತರ ಬಿಂದುಗಳ ಮೇಲೆ ಮಹಡಿಯನ್ನು ಕಟ್ಟಲು ಅದು ಆತುರವಾಗಿದೆ. ಇನ್ನೊಂದೆಡೆ ಕರ್ನಾಟಕ ದಲ್ಲಿ‌ ಪ್ರವಾಹದಿಂದಾಗಿ ‌ಜನರ ಜೀವನ ಅಸ್ತವ್ಯಸ್ತವಾಗಿದೆ. ರೂಪಾಯಿ ಮೌಲ್ಯ ಡಾಲರ್ ಮುಂದೆ ಬಹಳಾ ಪಾತಾಳಕ್ಕೆ ಬಂದಿದೆ. GDP ಅತೀ ಕೆಳಮಟ್ಟದ ನಿರ್ವಹಣೆ ಕಂಡಿದೆ. ಕಂಪೆನಿಗಳು ಮುಚ್ಚಿ ಕೊಳ್ಳುತ್ತಿವೆ. ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ಪ್ರತೀ ದಿನ‌ ಹೆಚ್ಚುತ್ತಲೇ ಇದೆ. ಆಹಾರಗಳೂ ಕೋಮು‌ಪ್ರಚೋದಕವಾಗುತ್ತಿದೆ. ಧಾರ್ಮಿಕ ಭಾವನೆಗಳಿಗೆ ವಿಷವನ್ನು ಬೆರೆಸಿಕೊಂಡು ಜನರನ್ನು ಬಹಳಾ ಸರಳವಾಗಿ ಕೊಲ್ಲಲಾಗುತ್ತಿದೆ. ಜನರ ಹಕ್ಕುಗಳನ್ನು ಕಸಿಯಲಾಗುತ್ತಿದೆ. ತೆರಿಗೆಗಳ ಹೇರಿಕೆಯು ಎಲ್ಲಾ ವರ್ಗದ ವರನ್ನೂ ಸಂಕಷ್ಟ ಕ್ಕೆ ಈಡು ಮಾಡಿದೆ. ಜನರು ಅಸಹನೆಯನ್ನು ಹೊರ ಹಾಕುತ್ತಿದ್ದಾರೆ. ಇವೆಲ್ಲದರ ನಡುವೆ ಸ್ವಾತಂತ್ರ್ಯ ಆಚರಣೆ ಯಾವ ರೀತಿಯಲ್ಲಿ ಅರ್ಥಪೂರ್ಣ ವಾಗುತ್ತದೆ ಎಂಬುವುದನ್ನು ತಾಳ್ಮೆಯಿಂದಲೇ ನೋಡಬೇಕಾಗಿದೆ.