ಭುವಿಯೇ ಸ್ವರ್ಗ

ಭುವಿಯೇ ಸ್ವರ್ಗ

ಕವನ

ಬೆಳಗು ಮೂಡಲು ಬೆಳಕು ಆಗಲು

ಇಳೆಗೆ ಸ್ವರ್ಗ ಕಳೆ ಬರುವುದು...  Iಪl 

 

ಬಾನಲಿ ರವಿ ಮೂಡುತಿರಲು 

ಭುವಿಯಲಿ ಬೆಳ್ಳಿ ಬೆಳಕಾಗಲು

ಲತೆಯಲಿ ಹೂವು ಅರಳುವುದು

ಹೂವು ಪರಿಮಳವ ಬೀರುತಿರಲು

ದುಂಬಿಯ ಪ್ರೀತಿಯಲಿ ಸೆಳೆಯಲು 

ನೇಸರು ಪ್ರೇಮದೂಟ ಸವಿಯುವುದು

 

ನಸುಕಿನಲಿ ಬೆಳಗಾಗುತಿರಲು

ಹಕ್ಕಿಗಳ ಗಾನಸುಧೆ ನಡೆಯಲು 

ನೇಸರ ಕಣಕಣದಲು ನಲಿವಾಗುವುದು

ಮುಂಜಾನೆ ಮಂಜು ಮೂಡಲು 

ಹಿಮದ ರಾಶಿ ಎಲ್ಲೆಡೆ ಚಿಮ್ಮಲು 

ಇಬ್ಬನಿಯು ಮುತ್ತಿನಹನಿಯಾಗುವುದು 

 

ಗಿರಿಶಿಖರವು ಮಂಜು ಮೇಯಲು

ತಂಪಲಿ ಹಸಿರು ವನ ನಲಿಯಲು

ಎಲ್ಲರ ಹೃದಯ ತುಂಬಿ ಬರುವುದು

ಹೊತ್ತು ಮೂಡುತಾ ಬೆಳಕಾಗಲು

ರವಿ ಹೊಂಗಿರಣ ಎಲ್ಲೆಡೆ ಚೆಲ್ಲಲು

ಧರೆಯು ಸ್ವರ್ಗಕಳೆ ತುಂಬಿಕೊಳುವುದು

 

-ಬಂದ್ರಳ್ಳಿ ಚಂದ್ರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್