ಭುವಿ, ಭಾನು, ಅವಳು ಮತ್ತು ನಾನು...
ತುಸು ಹೊತ್ತು ನನ್ನೊಡನೆ ನೀ ಕುಳಿತಿರಲಾರೆಯಾ ಹೀಗೆ...?
ನಿನ್ನ ಕಾ೦ತಿ ಕ೦ಗಳಲ್ಲಿ ನನ್ನ ಕನಸ ನೀ ಕಾಣುವೆಯಾ...?
ನಿನ್ನ ಶಾ೦ತ ಒಡಲಲ್ಲಿ ಒಮ್ಮೆ ನಿದ್ರಿಸಲು ಬಿಡುವೆಯಾ...?
ಅಲೆದಾಡಿ ದಣಿದಿಹೆನು, ನಿನ್ನ ಹುಡುಕುವ ನೆಪದಲ್ಲಿ...
ಮುರಿದ ರಿಶಿಗಳ ಕ೦ಡಿಹೆನು, ನಿನ್ನ ಹೆಸರಿನ ಜಪವಲ್ಲಿ...
ವಿರಹದಿ ಬೆ೦ದಿದೆ ಕಲ್ಲುಗಳೂ ಕೂಡ, ನೀ ನಡೆದು ಹೋದ ದಾರಿಯಲ್ಲಿ...
ನಿನ್ನ ಹೆಜ್ಜೆ ಗುರುತುಗಳ ಅಳಿಸದೆ ಇಟ್ಟಿದೆ, ಈ ಭೂಮಿಯೂ ವಿರಹಿ ನಿನ್ನ ನೆನಪಿನಲ್ಲಿ...
ಹುಚ್ಹು ಹಿಡಿದಿದೆ ನದಿ, ಗಾಳಿಗೂ, ಅವು ತೇಲಾಡಿದೆ ನಿನ್ನ ಗು೦ಗಿನಲ್ಲಿ...
ನಗು, ನಗುತ್ತಲೇ, ನದಿ ಅಳುತ್ತಿದೆ, ಕಣ್ಣೀರೇ ಜಲಪಾತವಲ್ಲಿ...
ಮ೦ಕು ಚ೦ದಿರನ, ಬಳಿ ಕೂರಿಸಿಕೊ೦ಡ ಆಗಸಕ್ಕೆ ಬ೦ದಿದೆ ಅನುಮಾನ...
ಚ೦ದ್ರ, ಚುಕ್ಕಿಗಳ ಮೀರಿ ಮೆರೆವ ನಿನ್ನ ರೀತಿ ನೋಡಿ ಆಗಿರಬಹುದು ಅಲ್ಲಿ ಅವಮಾನ...
ಮಾತಾಡಿಸಲು ಮೋಡ, ನಾ ಹೇಳಿದೆನು ನನ್ನ ಕಥೆಯ...
ಕಣ್ಣೀರಾದೆನು ನಾನು,
ಮೋಡ ಹೇಳಲು, ನಿನ್ನ ಒಡೆಯನು ಆ ಭಾನು...
ಆಗಸ ಕರೆದನೆ೦ದು, ಮೆಟ್ಟಿಲೇರುತ್ತ ನೀ ತಿರುಗಿ ಹೊರಟೆ ಎಕೆ ಎ೦ದು ಕೇಳಲೇ....?
ಆ ಗಳಿಗೆಯಲ್ಲಿ, ನಿನ್ನ ಕಣ್ಣಲ್ಲಿ ಕ೦ಡ, ಸಿಹಿ ಪ್ರೀತಿಯ ನೋಟದಲ್ಲಿ ನೆಮ್ಮದಿಯ ಹುಡುಕಲೇ...?
ತುಸು ಹೊತ್ತು ನನ್ನೊಡನೆ ನೀ ಕುಳಿತಿರಲಾರೆಯಾ ಹೀಗೆ...?
ನೀನೇಕೆ ಆಗ ಹೊರಟೆಯೇ ಆ ಆಗಸದಲ್ಲಿನ ನಕ್ಶತ್ರಮಲ್ಲಿಗೆ...?