ಭೂತ...
ಕಪ್ಪಡರಿದ ಕಾನನಕ್ಕೆ ಇನ್ಯಾರ ಭಯವಿಲ್ಲ...
ಗ೦ಟಲಲ್ಲಿ ಆರಿಹೋಗಿದೆ ಕೂಗು, ಸಹಾಯ ಹುಡುಕಿ ಹೊರಟ ಕರೆಗೆ ಸದ್ದಿಲ್ಲ...
ಕಾದಿದೆಯೋ ಸದಿಲ್ಲದೆ ಇನ್ನೇಕೆ, ಈಗ ಬ೦ದಿದೆ ಕತ್ತಲ ಸಮಯ...
ಮುಚ್ಚಿದ ಕ೦ಗಳ ಮು೦ದೆ ನಿ೦ತ ಮುಖದಲ್ಲಿದೆ ಸಾವಿರ ಲೋಕದ ಪ್ರಳಯ...
ಕರುಣೆಯಿಲ್ಲದ ಕೈಗಳ ನಡುವೆ ಹರಿದ ಕಾಗದದ೦ತ ಕ್ರೂರ ನಗು...
ಕೈ ಸಿಕ್ಕ ಅವಕಾಶಗಳೆಲ್ಲ ಅಳಿಸಿ ಹಾಕಿದೆ ಹರಿತ ಕತ್ತಿಯ ಅಲಗು...
ದಿಕ್ಕೆಟ್ಟೋಡಿದೆ ಗಾಳಿಯು ಇನ್ನು ಯಾರ ಉಸಿರಾಟಕ್ಕು ಸಿಗದೆ...
ಹೆಸರಿಲ್ಲದ ಪಾತ್ರದಾರಿಯ ಬೀಭತ್ಸ ನಾಟಕಕ್ಕೆ ಬೇರ್ಪಟ್ಟಿದೆ ಪರದೆ...
ಯಾವ ದಿಕ್ಕಿನಲ್ಲಿ ನೋಡಿದರೂ ಕಣ್ಣ೦ಚ ನೋಟದಲ್ಲಿ ಇಣುಕಿದೆಯೋ ಆ ಆಕೃತಿ...
ಭೂತಾಯಿಯ ಮೇಲಿನ ಭಾರ ಕರಗಲು ಎಲ್ಲವೂ ಆಗಿದೆ ಆಹುತಿ...
ನಿನ್ನ ನೆರಳ ನ೦ಬುವೆಯೇನೋ ನೀನು...
ನಿನ್ನ ನೆರಳ ಹೃದಯ ಕತ್ತಲು...
ಕತ್ತಲಲ್ಲಿ ಅಡಗಿದೆಯೋ ಬಣ್ಣವಿಲ್ಲದ ರಕ್ತ...
ಅಡಗಿಸಿಟ್ಟ ವಿಕೃತಿಗಳೆಲ್ಲವೂ ಆಗಿದೆ ಅಲ್ಲಿ ಬೆತ್ತಲು...
ಕಾರಣವಿಲ್ಲದೆ ಕತ್ತಲು ಕವಿದಿಲ್ಲ ಅದರ ಬಸಿರಲ್ಲಿದೆ ಬೆಳಕ ನಡುಗಿಸೋ ಉದ್ದೇಶ...
ತಲೆ ಬಾಗದ ತಪ್ಪಿಗೆ ತಲೆ ಎತ್ತಿ ಮೆರೆದಿದೆ ದೈವದ ದ್ವೇಷ...