ಭೂಮಿಗೆ ಎರಡು ಚಂದ್ರಗಳಿರುತ್ತಿದ್ದರೆ, ಸಮುದ್ರಗಳ ಪ್ರವಾಹಗಳು ಹೇಗಿರಬಹುದಿತ್ತು?
ಚಂದ್ರನ ಗುರುತ್ವಾಕರ್ಷಣ ಬಲವು ಸಮುದ್ರಗಳ ಉಬ್ಬರಾವಿಳಿತಗಳಿಗೆ ಕಾರಣವಾಗಿದೆ. ಆದರೆ, ಕೇವಲ ಚಂದ್ರನ ಗುರುತ್ವಾಕರ್ಷಣ ಶಕ್ತಿಯೇ ನಮ್ಮ ಸಮುದ್ರಗಳ ಉಬ್ಬರವಿಳಿತಕ್ಕೆ ಪ್ರಮುಖ ಕಾರಣವಲ್ಲ ಎಂದು ನಮಗೆ ತಿಳಿದಿರುವ ವಿಷಯ!
ಒಂದು ಕಾಲ್ಪನಿಕ ಪ್ರಶ್ನೆ ಅಂದರೆ ನಮ್ಮ ಭೂಮಿಯು ಒಂದಕ್ಕಿಂತ ಹೆಚ್ಚು ಚಂದ್ರಗಳನ್ನು ಹೊಂದಿದ್ದರೆ ಸಮುದ್ರಗಳ ಉಬ್ಬರವಿಳಿತಕ್ಕೆ ಏನಾಗಬಹುದು? ಚಂದ್ರನ ಗುರುತ್ವಾಕರ್ಷಣೆಯು ಉಬ್ಬರವಿಳಿತಕ್ಕೆ ಒಂದು ಪ್ರಮುಖ ಕಾರಣವಾಗಿದ್ದರೂ, ಚಂದ್ರನ ಗುರುತ್ವಾಕರ್ಷಣೆಯೇ ಎಲ್ಲಾ ಉಬ್ಬರವಿಳಿತಗಳಿಗೆ ನೇರ ಕಾರಣವಲ್ಲ ಎಂಬುವುದು ಕಡೆಗಣಿಸಲಾಗದ ಅಂಶ. ಸಾಮಾನ್ಯವಾಗಿ, ಸಮುದ್ರಗಳ ನೀರು ಎರಡು ರೀತಿಯಲ್ಲಿ ಉಬ್ಬಿಕೊಳ್ಳುತ್ತದೆ: ಒಂದು, ಚಂದ್ರನ ಹತ್ತಿರವಿರುವ ಗ್ರಹದ ಬದಿಯ ಸಮುದ್ರ; ಮತ್ತು ಇನ್ನೊಂದು, ಭೂಮಿಯ ಚಂದ್ರದಿಂದ ದೂರದ ಬದಿಯಲ್ಲಿರುವ ಸಮುದ್ರ!
ಭೂಮಿಯು ತಿರುಗುವಾಗ, ಚಂದ್ರದ ಗುರುತ್ವಾಕರ್ಷಣ ಬಲವು ನಮ್ಮ ಭೂಮಿಯ ಮೇಲೆ ಬಹಳ ಪ್ರಭಾವ ಬೀರುತ್ತದೆ ಮತ್ತು ಈ ಪ್ರಭಾವವು ಉಬ್ಬರವಿಳಿತಗಳಿಗೆ ನೇರ ಕಾರಣವಾಗಿದೆ. ಅಂದಹಾಗೆ, ಒಂದಕ್ಕಿಂತ ಹೆಚ್ಚು ಚಂದ್ರಗಳಿದ್ದರೆ, ಉಬ್ಬರವಿಳಿತಗಳ ಉಬ್ಬುಗಳು ವಿಕೃತಗೊಲ್ಲುತ್ತವೆ. ಚಂದ್ರ ಮತ್ತು ಸೂರ್ಯದ ಗುರುತ್ವಾಕರ್ಷಣೆಯ ಬಲವು ಭೂಮಿಯ ಸುತ್ತ ವಿಭಿನ್ನ ವ್ಯವಸ್ಥೆಗಳನ್ನು ಅಳವಡಿಸಿಕೊಂಡಂತೆ, ಉಬ್ಬರವಿಳಿತಗಳೂ ಬದಲಾಗುತ್ತವೆ.
ಚಂದ್ರ ಮತ್ತು ಸೂರ್ಯ ಭೂಮಿಯ ಒಂದೇ ಅಥವಾ ವಿರುದ್ಧ ಬದಿಗಳಲ್ಲಿದ್ದಾಗ ಪ್ರಬಲ ಉಬ್ಬರವಿಳಿತಗಳು (Strong Tides) ಸಂಭವಿಸುತ್ತವೆ. ಚಂದ್ರ ಮತ್ತು ಸೂರ್ಯನು ಪರಸ್ಪರ 90°ನಲ್ಲಿದ್ದಾಗ ದುರ್ಬಲ ಉಬ್ಬರವಿಳಿತಗಳು (Weak Tides) ಸಂಭವಿಸುತ್ತವೆ. ಹೆಚ್ಚುವರಿ ಚಂದ್ರಗಳು ಬಹುಶಃ ಈ ಪರಿಸ್ಥಿತಿಯನ್ನು ಸಂಕೀರ್ಣಗೊಳಿಸಬಹುದು; ಆದ್ದರಿಂದ ಚಂದ್ರಗಳು ಭೂಮಿಯ ಸುತ್ತಲೂ ತಮ್ಮ ಸ್ಥಾನಗಳನ್ನು ಬದಲಾಯಿಸಿದಾಗ ಉಬ್ಬರವಿಳಿತದ ಶಕ್ತಿಯು ಅನಿಯಮಿತವಾಗಿ ಬದಲಾಗುವುದು.
ಇತರ ಗ್ರಹಗಳಂತೆ ನಮ್ಮ ಭೂಮಿಗೆ ಎರಡು ಅಥವಾ ಹೆಚ್ಚು ಉಪಗ್ರಹಗಳಿರುತ್ತಿದ್ದರೆ, ಅದರ ಗುರುತ್ವಾಕರ್ಷಣೆಯ ಬಲದಿಂದ ನಮ್ಮ ಸಮುದ್ರಗಳಲ್ಲಿ ಚಂಡಮಾರುತಗಳು ಉದ್ಭವಿಸಬಹುದು. ಉಬ್ಬರವಿಳಿತದ ಸಮಯವನ್ನು ಇನ್ನೂ ಮೂಲಭೂತವಾಗಿ ಭಾಗಶಃ ಭೂಮಿಯ ತಿರುಗುವಿಕೆಯಿಂದ ನಿರ್ಧರಿಸಲಾಗುತ್ತದೆಯಾದ್ದರಿಂದ, ದಿನಕ್ಕೆ ಸರಿಸುಮಾರು 2 ಗರಿಷ್ಠ ಮತ್ತು 2 ಕನಿಷ್ಠ ಉಬ್ಬರವಿಳಿತವು ಇದ್ದೆ ಇರುತ್ತದೆ!
-ಶಿಕ್ರಾನ್ ಶರ್ಫುದ್ದೀನ್ ಎಂ., ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ