ಭೂಮಿ ಮೇಲೆ ಬ್ಲ್ಯಾಕ್ ಹೋಲ್

ಭೂಮಿ ಮೇಲೆ ಬ್ಲ್ಯಾಕ್ ಹೋಲ್

ಬರಹ

ಚಿತ್ರ: LHC ಇಂದ ಅಣುಗಳ ಹೊರಹೊಮ್ಮುವಿಕೆ

"ಅಣ್ಣ ಇವತ್ತು ಭೂಮಿಯಲ್ಲಿ ಬ್ಲ್ಯ್ಯಾಕ್ ಹೋಲ್ ಆಗತ್ತಂತೆ!"

ಹೀಗೆ ನನ್ನ ತಂಗಿ ನನಗೆ ಹೇಳಿದಾಗ ಅಚ್ಚರಿಯಾಯಿತು! "ಯಾರು ನಿಂಗೆ ಈ ರೀತಿ ತಪ್ಪು ಇನ್ಫೊರ್ಮೇಶನ್ ಕೊಟ್ಟಿದ್ದು? ಬ್ಲ್ಯಾಕ್ ಆಗೋದು

ನಕ್ಷತ್ರಗಳು ಮಾತ್ರ. ಭೂಮಿ ಮೇಲೆ ಅದನ್ನು ಮಾಡಬೇಕಂದ್ರೆ ದೊಡ್ಡ ಸಾಹಸವೇ ಮಾಡಬೇಕಾಗತ್ತೆ, ಮಾಡಿದ್ರೂ ಸಣ್ಣ ಪ್ರಮಾಣದಲ್ಲಿ

ಮಾಡಬಹುದು" ಅಂದೆ.

"ಏನೋಪಾ ಯಾರೋ ಹೇಳ್ತಾ ಇದ್ರು! ನಂಗೊತ್ತಿಲ್ಲ", ಅಂದಳು ನನ್ ತಂಗಿ

"ಅಯ್ಯೋ! ಹೀಗೆ ಯಾರೋ ಹೇಳೊ ಮಾತಿಗೆ ತುಂಬಾ ಕಿವಿಕೊಡ್ತಾರೆ ನಂ ಜನ". ಹಾಗೆ ಹೇಳಿ ಅಂತರಿಕ್ಷದ ಬಗ್ಗೆ ನನಗಿರುವ ಇಂಟರೆಸ್ಟಿಂದ ಅಂತರ್ಜಾಲದಲ್ಲಿ ಏನಿದು ಹೊಸ ನಿವ್ಸು ಅಂತ ಗೂಗಲ್ ಮಾಡಿದೆ. ಆಗ ತಿಳಿದದ್ದು ಜೆನೀವಾದಲ್ಲಿ ನಡೆಯುತ್ತಿರುವ ಪರೀಕ್ಷೆ ಬಗ್ಗೆ.

ಜೆನೀವಾದಲ್ಲಿ ನಡೆಯುತ್ತಿರೋದು ಒಂದು ಅದ್ಭುತ ಪರೀಕ್ಷೆ, ಇಡೀ ಬ್ರಹ್ಮಾಂಡದ ಜನನದ ಬಗ್ಗೆ ಮಾಹಿತಿ ಪಡೆಯಲು ದಶಕಗಳಿಂದ ನಡೆಯುತ್ತಿರುವ ಪ್ರಯತ್ನಗಳಿಗೆ ಹೊಸ ಪುಟ ಬರೆಯಲಿದೆ. ೨೭ ಕಿ.ಮೀ ಉದ್ದದ ಟನಲ್ನಲ್ಲಿ, ೭ Tev ಪ್ರೋಟೊನ್ಗಳನ್ನು -೨೭೧ ಡಿಗ್ರೀಸ್ ಸೆಲ್ಶಿಯಸ್ನಲ್ಲಿ ಆಕ್ಸ್ಲಲರೇಟ್ ಮಾಡಿ ಒಂದೊಕ್ಕೊಂದನ್ನು ಡಿಕ್ಕಿ ಹೊಡೆಸಿ ಅದರಿಂದಾಗುವ ಧಮಾಕೆಯಿಂದ ಮೂಡಿ ಬರುವ sub-automic particleಗಳಿಂದ ಅವುಗಳ ಬಗ್ಗೆ ಹೆಚ್ಚು ಮಾಹಿತಿ ಪಡೆದು ಬ್ರಹ್ಮಾಂಡ ಸೃಷ್ಟಿಯಾದಾಗಿನಂತೆ ಹೊರಹೊಮ್ಮುವ ಕಿರಣಗಳನ್ನು ಪರೀಕ್ಷಿಸಿ ಅದರಲ್ಲಿ ಇರಬಹುದಕ್ಕಂತಹ dark particles ಅನ್ನು ಅನಲೈಸಿಸ್ಗೆ ಒಳಪಡಿಸುವಲ್ಲಿ ೮೫ ದೇಶಗಳಿಂದ ಬಂದ ಸೈಂಟಿಸ್ಟ್ ಗಳು ಶ್ರಮ ಒಟ್ಟುಗೂಡಿಸಿದ್ದಾರೆ.

ಹೈಡ್ರೋಜನ್ ಅಣುಗಳನ್ನು absolute zero ಟೆಮ್ಪೆರೇಚರ್ನಲ್ಲಿ ಪ್ರೋಟೊನ್ಗಳನ್ನು ಹೊರಪಡಿಸಿ ಅವನ್ನು ವೇಗವಾಗಿ ಆಕ್ಸಿಲರೇಟ್ ಮಾಡಿ, ೩ ಸಣ್ಣದಿಂದ ೨೭ ಕಿ.ಮೀ. ಉದ್ದದ ಸರ್ಕುಲರ್ ಟನ್ನಲ್ನ್ಲ್ಲಿ ಎಲೆಕ್ಟ್ರೋಮ್ಯಾಗ್ನಟಿಸಂಗೆ ಒಳಪಡಿಸಿ ಪ್ರೋಟೊನ್ಗಳು ಒಂದೊಂಕ್ಕೊಂದು ಡಿಕ್ಕಿ ಹೊಡೆಸಲು ಅನುವು ಮಾಡಿಕೊಡಲಾಗುತ್ತದೆ. ಈ ಡಿಕ್ಕಿಯಿಂದ ಬಹಳಷ್ಟು ಪ್ರಮಾಣದ ಶಕ್ತಿ ಹೊರಹೊಮ್ಮುತ್ತದೆ, ಇದರ ಶಾಖ ಸೂರ್ಯನ ಶಾಖಕ್ಕಿಂತ ೧ ಲಕ್ಷ ಪಟ್ಟು ಹೆಚ್ಚು ಇರುತ್ತದೆ. ಇದರಿಂದ ಹೊರಹೊಮ್ಮುವ dark particleಗಳು ಪ್ರೊಟೊನ್ ಭಾರಕ್ಕಿಂತ ೧೦೦ ಪಟ್ಟು ಹೆಚ್ಚಿರುತ್ತದೆ. ಕಾಣದೆ ಇರುವಂಥದ್ದು ಇಷ್ಟು ಭಾರವಾಗಿರಬಹುದೆ? ನಂಬೊ ಮಾತೆ? ಎನ್ನಬೇಡಿ, ಕಾಣದೆ ಇರೋ ದೇವರು ದೊಡ್ಡವನು ಅನ್ನ್ಲಲ್ವೆ? ಅದೆ ರೀತಿ ಇದು, ಪ್ರಕೃತಿಯಲ್ಲಿ ಇಂಥವು ನಮಗರ್ಥವಾಗದವು ಬಹಳಷ್ಟಿವೆ!. ಇಷ್ಟು ಘನವಾದ ಅಣುಗಳು ಬಹಳ ಸಣ್ಣ ಪ್ರಮಾಣದ ಬ್ಲ್ಯಾಕ್ ಹೋಲ್ ನಿರ್ಮಾಣಕ್ಕೆ ಅಣುವಾಗಬಹುದು. ಅದರ ಜೊತೆ "god particle" ಒಂದು ಹೈಪೊಥೆಟಿಕಲ್ ಅಣುವಿನ ಬಗ್ಗೆ ಪ್ರ್ಯಾಕ್ಟಿಕಲ್ ಮಾಹಿತಿ ಸಿಗಬಹುದು. ಹೆದರಬೇಡಿ ಈ ಸಣ್ಣ ಪ್ರಮಾಣದ ಬ್ಲ್ಯಾಕ್ ಹೋಲ್ ಕೆಲವು ಮೈಕ್ರೊ ಸೆಕೆಂಡುಗಳಲ್ಲಿ ನಶಿಸಿಹೋಗುತ್ತದೆ. ನಿಜವೆಂದರೆ ದಿನವೂ ಇಂಥ ಎಷ್ಟೋ ಕಾಸ್ಮ್ಮಿಕ್ ಕಿರಣಗಳು ದಿನಕ್ಕೆ ಭೂಮಿಯ ಆವರಣದಲ್ಲಿ ಬಂದು ನಶಿಸಿ ಹೋಗುತ್ತವೆ! ಖ್ಹ್ಯಾತ ಫಿಜಿಸಿಸ್ಟ್ ಹಾಕಿಂಗ್ಸ್ರವರ ಪರೀಕ್ಷೆಗಳ ಆಧಾರದ ಮೇಲೆ ಹೀಗೆ ಮೈಕ್ರೊ ಬ್ಲ್ಯಾಕ್ ಹೋಲ್ಗಳು ಗಾಮ್ಮಾ ಕಿರಣಗಳ ಎದುರು ಆವಿಯಾಗಿ ಹೋಗುತ್ತವೆ! ಇದಕ್ಕೆ ಹಾಕಿಂಗ್ಸ್ ಎಫೆಕ್ಟ್ ಅಂತಾರೆ.

೧೪ ವರ್ಷಗಳಿಂದ ನಡೆಯುತ್ತಿರುವ ಈ ಮಹಾ ಪರೀಕ್ಷೆಗೆ ೧೦ ಬಿಲ್ಯನ್ ವೆಚ್ಚವಾಗಿದೆ, ಇದರಿಂದ ಹೊರಬರುವ ಡೇಟಾ ಎಷ್ಟೆಂದರೆ ೨೦೦೦ ಮಿಲ್ಯನ್ ಡಿವಿಡಿಗಳು ಬೇಕಾಗುತ್ತವೆ, ಇದಕ್ಕಾಗಿ ಒಂದು ಹೊಸ world wide networkಅನ್ನೆ ನಿರ್ಮಾಣ ಮಾಡಲಾಗಿದೆ, ಜಹತ್ತಿನ ವಿವಿದೆಡೆಯಿಂದ ೬೦,೦೦೦ ಕಂಪ್ಯೂಟರುಗಳು ಈ ಡೆಟಾ ಪ್ರೊಸೆಸ್ ಮಾಡ್ಲಿವೆ. ಇಷ್ಟು ಕಷ್ಟ ಪಟ್ಟು ಮಾಡಿ ಏನು ಪ್ರಯೋಜನ ಅಂತೀರಾ? ಬ್ರಹ್ಮಾಂಡದ ಸೃಷ್ಟಿಯ ಬಗ್ಗೆ ಹೆಚ್ಚಿನ ಅರಿವು, ನಮ್ಮ ಇಷ್ಟು ವರ್ಷ್ಗಗಳ ರಿಸರ್ಚಿನಿಂದ ನಮಗೆ ಬ್ರಹ್ಮಾಂಡದ ಕೇವಲ ೪ ಪರ್ಸೆಂಟ್ ಬಗ್ಗೆ ಮಾತ್ರ ಮಾಹಿತಿ ಇರುವುದು. ಈ ಪರೀಕ್ಷೆ ಮುಂದಾಗುವ ಎಲ್ಲಾ ಪರೀಕ್ಷೆಗಳಿಗೆ ಬಹಳಷ್ಟು ಮಾಹಿತಿ ಒದಗಿಸುವುದು. ಇಷ್ಟೆಲ್ಲಾ ಒಳ್ಳ್ಯೆಯ ಪ್ರಯೊಜನವಿರುವ ಈ ಪರೀಕ್ಷೆಯನ್ನು ನಾವು ತಂತ್ರಾಂಶದ ಬೆಳವಣಿಗೆಯ ದ್ರುಷ್ಟಿಯಿಂದ ನೋಡಬೇಕೆ ಹೊರತು ಯಾರೋ ಹೇಳಿದ ಮಾತಿಗೆ ಕಿವಿ ಕೊಟ್ಟು ಇದೆ ಪ್ರಳಯ ಭೂಮಿಯ ಅಂತ ಎಂದೆಲ್ಲಾ ಮೂಢಾಂಧರಾಗಿ ತಿಳುವಳಕೆ ಕಳೆದುಕೊಳ್ಳಬಾರದು. ನೆನಪಿರಲಿ, ನಮ್ಮ ಜನ ಗಜಾನನಿಗೆ ಹಾಲು ಕುಡಿಸಿದವರು, ಗಣಪನಿಗೆ ಸಂತೋಷವಾಯಿತೋ ಇಲ್ಲವೋ ಹಾಲು ಮಾರುವವರಿಗೆ ಖಂಡಿತವಾಗಿ ಆಯಿತು, ಹಾಗೆಯೆ ಸುಳ್ಳು ಪಳ್ಳು ಹೇಳಿ ದುಡ್ಡು ಮಾಡುವ ಜನರಿಗೆ ಮೋಸಹೋಗಬೇಡಿ. ವಿಗ್ನಾನದಲ್ಲಿ ನಂಬಿಕೆಯಿಡಿ!

ಯಾರೋ ಒಬ್ಬರು ಚೆನ್ನಾಗಿ ಹೇಳಿದ್ದಾರೆ : "Science wouldn't lie just to make you more comfortable. That's religion's job."

ಹಚ್ಚಿನ ಮಾಹಿತಿಗೆ ಕೆಲವು ಲಿಂಕ್ಸ್ ಹೀಗಿವೆ:
೧. http://en.wikipedia.org/wiki/Higgs_boson
೨. http://en.wikipedia.org/wiki/Large_Hadron_Collider
೩. http://space.newscientist.com/article/dn14696-is-dark-matter-a-wimp-or-a-champ.html