ಭ್ರಷ್ಟಾಚಾರ ಹೇಗೆ ಬಂತು?
ಕವನ
ಮನುಷ್ಯತ್ವದ ಗೋಡೆಯನ್ನು
ಒಡೆದವರು ನಾವಲ್ಲವೆ
ಭ್ರಷ್ಟಾಚಾರದ ಮರಗಳಿಗೆ
ನೀರೆರೆದವರು ನಾವಲ್ಲವೆ
ಕಂಡೂ ಕಾಣದಂತಿದ್ದೇವೆ ಇಂದು
ಸುಲಿಗೆ ಮಾಡುವವರ ನೋಡಿ
ಕೈಯೊಡ್ಡಿದವರಿಗೆ ನಾವೇ ನೀಡುತಲಿ
ಕೆಲಸ ಮಾಡಿಸಿಕೊಳ್ಳುತ್ತೇವೆ ಬೇಡಿ
ತಪ್ಪು ಯಾರದೆಂದರೆ ನಮ್ಮದೇ ಅಲ್ಲವೆ ಮನುಜ
ತಿದ್ದಬೇಕಾದವರೇ ಪಾದವ ಹಿಡಿದರೆ ಹೇಗೆ
ನೆಲದಲ್ಲಿ ಕುಳಿತು ತಿನ್ನಬೇಕಾದವನನ್ನು
ಉಪ್ಪರಿಗೆಯಲ್ಲಿ ಕೂರಿಸಿ ತಿನ್ನಲು ಕೊಟ್ಟವರು ನಾವಲ್ಲವೆ
***
ಗಝಲ್
ಇನ್ನೊಬ್ಬರ ಬರಹಗಳಲಿ ಇಣುಕದಿರು ಕೇಡು ನಿನಗೆ
ಪ್ರತಿಯೊಬ್ಬರ ಜೀವನದಲಿ ಬಾಗದಿರು ಕೇಡು ನಿನಗೆ
ಹೊಟ್ಟೆ ಹಸಿವಾಯಿತೆಂದು ಮಣ್ಣು ತಿನ್ನುವರೆ ಹೇಳು
ಊಟವಾದ ನಂತರ ಮಲಗದಿರು ಕೇಡು ನಿನಗೆ
ನಡೆವ ದಾರಿಯನು ಗಮನಿಸದೆ ಮುಂದೆ ಹೋಗುವರೆ
ಕಲ್ಲುಮುಳ್ಳುಗಳ ನಡುವಲ್ಲಿ ನಿಲ್ಲದಿರು ಕೇಡು ನಿನಗೆ
ಸೌಂದರ್ಯ ಇದೆಯೆಂದು ಮನ ಬಂದಂತೆ ತಿರುಗುವುದೆ
ಉತ್ಸವದ ಮೂರ್ತಿಯಂತೆ ಬದುಕದಿರು ಕೇಡು ನಿನಗೆ
ಪ್ರತಿಯೊಬ್ಬರನು ಗೌರವಿಸು ಈಶ ಬರುವನು ಜೊತೆಗೆ
ಪಂಡಿತನು ನಾನೆಂದು ಸಾಗದಿರು ಕೇಡು ನಿನಗೆ
-ಹಾ ಮ ಸತೀಶ
ಚಿತ್ರ್
