ಮಂಗಳಮುಖಿಯರ ನಿಜವಾದ ಮುಖ

ಮಂಗಳಮುಖಿಯರ ನಿಜವಾದ ಮುಖ

ಬರೆಯಲು ಅದೆಷ್ಟೋ ವಿಷಯಗಳಿದ್ದರು ಇವರ ಬಗ್ಗೆ ಏಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟೆ,ಹೌದು ಸಮಾಜದಲ್ಲಿ ಅವರ ಬಗ್ಗೆಗಿನ ತಿರಸ್ಕಾರ ಏಕಿದೆ ಎಂದು ಹುಡುಕುತ್ತಾ ಹೋದರೆ ನನಗೆ ತಿಳಿದು ಬಂದದ್ದು ನನಗೆ ತಿಳುವಳಿಕೆಯಿಲ್ಲದಿರುವುದು.

ಅವರ ಬಗೆಗಿನ ಒಂದು ಚಿಕ್ಕ ಸಂಪುಟ, ಗೆಳೆಯರೆ ದಯವಿಟ್ಟು ವಿಶಾಲ ಮನಸ್ಸಿನಿಂದ ಸಂಪೂರ್ಣವಾಗಿ ಓದಿ.

ಇವರು ಹೇಗೆ ಜನಿಸುತ್ತಾರೆ ಅನ್ನುವುದಕ್ಕೆ ವಿಜ್ಞಾನಿಗಳು ನೇರವಾಗಿ ಬೆರಳು ತೋರುವುದು ಕ್ರೋಮೊಸೋಮ್,ಹೊರ್ಮೋನ್ ಮತ್ತು ಜೀನ್ ಗಳತ್ತ. ಮಗು ಜನಿಸುವ ಮುಂಚೆ, ತಾಯಿಯ ಗರ್ಭದಲ್ಲಿ ನಡೆಯುವ ಕುತೂಹಲವಾದ ಘಟನೆ ಇದು. ಸಾಮಾನ್ಯವಾಗಿ 4ರಿಂದ 5ನೇ ತಿಂಗಳಲ್ಲಿ ನಡೆಯುವ ಘಟನೆ. ಅದೇAndrogen receptor ಬೆಳವಣಿಗೆ, ಇದೆ ಹಾರ್ಮೊನ್ ಮಗುವು ಹೆಣ್ಣೋ ಅಥವಾ ಗಂಡೊ ಎಂದು ನಿರ್ಧರಿಸುವುದು. ಇಲ್ಲಿ ನಡೆಯುವ ಚಿಕ್ಕ ಅನಾಹುತ ಏನೆಂದರೆ, ಈ ಹಾರ್ಮೊನ್ ಹೆಣ್ಣಿನ ನಡವಳಿಕೆಯ ಹತ್ತಿರ ಬಾಗುತ್ತದೆ. ಅಂದರೆ ದೇಹವನ್ನ ಗಂಡಾಗಿ ಪರಿವರ್ತಿಸುತ್ತದೆ.

ಇಲ್ಲಿಂದ ಶುರು ನೋಡಿ, ಆ ಮಗಿವಿನಲ್ಲಿ ಬದಲಾವಣೆಗಳು ಶುರುವಾಗುತ್ತದೆ. CYP17 ಇದೇ ಆ ಜೀನ್ ನ ಹೆಸರು ಅಥವಾ ಕೊಡ್. ಆದರೆ ಮಗು ಬೆಳೆದು ಹತ್ತು ವರ್ಷಗಳಾಗುವವರೆಗೂ ಅದರ ಮೆದುಳು ತದ್ವಿರುದ್ದ ವರ್ತನೆಗೆ ಅವಕಾಶ ನೀಡುವುದಿಲ್ಲ. ಹತ್ತು ವರ್ಷದ ಬಳಿಕ ಮೆಲ್ಲನೆ ಹೆಣ್ಣಿನ ನಡವಳಿಕೆಗಳು ಶುರುವಾಗುತ್ತದೆ. Bed nucleus of the stria terminals ಎಂಬ ಮೆದುಳಿನ ಭಾಗ ಹೆಣ್ಣಿನ ಗುಣಗಳನ್ನ ಸೂಸಲು ಶುರುಮಾಡುತ್ತದೆ.

ನೀವು ಅವರು ಹೇಗೆ ಜನಿಸಿದರು ಎಂಬುದನ್ನು ಓದಿದಿರಿ. ಆದರೇ ಅವರ ಮುಂದಿನ ಕರಾಳ ಜೀವನದ ಬಗ್ಗೆ ಗೊತ್ತೆ? ಪ್ರಾಣಿಗಳನ್ನ ರಕ್ಷಿಸಲು, ನೀರು ರಕ್ಷಿಸಲು,ಭಾಷೆ ರಕ್ಷಿಸಲು ಇನ್ನೂ ಏನೇನಕ್ಕೋ ಸಂಘಟನೆಗಳು ನಮ್ಮ ಮದ್ಯೆ ಇದೆ. ಆದರೆ ನಮ್ಮಂತೆ ಹುಟ್ಟಿ, ಸ್ವಲ್ಪ ಬದಲಾವಣೆಗಳು ಕಂಡ ಈ ಮಂಗಳಮುಖಿಯರ ಬಗ್ಗೆ ಯಾರಿಗೂ ಚಿಂತೆ ಇಲ್ಲ. ಹಾಗಂತ ನೋಡಿದರೆ ಈ ಪ್ರಪಂಚದಲ್ಲಿ ಸಂಪೂರ್ಣ ಗಂಡು ಅಥವಾ ಸಂಪೂರ್ಣ ಹೆಣ್ಣು ಯಾರು ಇಲ್ಲ. ತದ್ವಿರುದ್ದ ನಡುವಳಿಕೆಗಳು ಒಂದಾದರು ಇದ್ದೆ ಇರುತ್ತದೆ ಎಂದು ವಿಜ್ಞಾನ ಹೇಳುತ್ತದೆ.

ಹತ್ತು ವರ್ಷದ ಆ ಬಾಲಕನಿಗೆ ತನ್ನ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಅರಿವೆ ಇರುವುದಿಲ್ಲ. ನಮ್ಮ ಸಮಾಜ ಹೆಣ್ಣಿಗೆ, ಗಂಡಿಗೆ ಅಂತ ಒಂದು ವೃತ್ತ ಮಾಡಿದೆ. ಅದರಂತೆಯೇ ಬಟ್ಟೆ, ಬರೇ ಎಲ್ಲ. ಹೀಗಿರುವಾಗ ಆತನಲ್ಲಿ ಮೆಲ್ಲನೆ ಹೆಣ್ಣಾಗಿ ಕಾಣುವ ಆಸೆಯಲ್ಲ ತೋರು ಪಡಿಸಲು ಅಂಜುತಾನೆ. ಆದರೂ ಆತನ ಮೆದುಳು, ಆ ಹಾಳಾದ ಜೀನ್ ಬಿಡಬೇಕಲ್ಲ. ಅವನನ್ನ ಉದ್ವೇಗಗೊಳಿಸುತ್ತದೆ. ಮನೆಯಲ್ಲಿ ಯಾರೂ ಇಲ್ಲದಾಗ ಅಮ್ಮನ, ಅಕ್ಕನ ಅಥವಾ ತಂಗಿಯ ಬಟ್ಟೆ ತೊಡುವುದು, ಮುಖಕ್ಕೆ ಅರಿಷಿಣ ಆಕುವುದು, ಕೈಗಳಿಗೆ ಬಳೆ ತೊಡುವುದು. ಅವನಿಗೆ ತಿಳಿಯದಂತೆ, ನಿಯಂತ್ರಣಕ್ಕೆ ಬಾರದೆ ಬದಲಾಗುತ್ತಾ ಹೋಗುತ್ತಾನೆ.

ಇದು ಯಾವತ್ತು ಪೋಷಕರಿಗೆ ತಿಳಿಯುತ್ತದೊ ಅಂದೆ ಆ ಮಂಗಳಮುಖಿಯರ ಜೀವನ ಬೇರೆ ದಾರಿ ಹಿಡಿಯುವುದು. ಹುಟ್ಟುವಾಗ ಅಂಗ ವಿಕಲತೆಯಿಂದ ಹುಟ್ಟುವ ಮಕ್ಕಳನ್ನೂ ಸಂತೋಷವಾಗಿ ಪೋಷಿಸುವ ಹೆತ್ತವರು. ಇವರನ್ನ ಏಕೆ ದೂರ ದೂಡುತ್ತಾರೆ?ಅವರಿಗೆ ಸಮಾಜದ ಮೇಲಿನ ಭಯ. ಹೆತ್ತವರಿಗೆ ಹೊರ ಹಾಕಲ್ಪಟ್ಟ ಇವರು ತಮ್ಮ ಶಿಕ್ಷಣಕ್ಕೂ ಮಂಗಳ ಹಾಡಬೇಕು.

ಅಂತೂ ಕೇವಲ 10-12 ವರ್ಷಗಳಿಗೆ ಅನಾಥರಾಗಿ ಬೀದಿಗೆ ಇಳಿಯುತ್ತಾರೆ. ಅವರ ಜೀವನವೇ ಇಲ್ಲಿ ಬೇರೆಯಾಗಿ ಹೋಗುತ್ತದೆ. ಅವರ ಕನಸುಗಳು ನುಚ್ಚು ನೂರಾಗುತ್ತದೆ. ಹೊಟ್ಟೆಗೆ ಕೂಳು ಸಿಕ್ಕರೆ ಸಾಕೆಂಬ ಪರಿಸ್ಥಿತಿಗೆ ದೂಕಲ್ಪಡುತ್ತಾರೆ. ಅವರಿಗೆ ಕೆಲಸಕೊಡಲು ಯಾರಾದರು ಸಿದ್ದರೆ? ಇಲ್ಲ. ಚಿಕ್ಕ ವಯಸ್ಸಿನಲ್ಲೆ ಮನೆಯಿಂದ ಹೊರ ಬಂದವರಿಗೆ ಸ್ವಂತ ವ್ಯವಹಾರ ಮಾಡಲು ಸಾಧ್ಯವೇ? ಸಾದ್ಯವಾದರು ಅದಕ್ಕೆ ಸಮಾಜದ ಪ್ರೋತ್ಸಾಹವಿದೆಯೇ? ಇಲ್ಲ. ಮತ್ತೆ ಕೊನೆಗೆ ಉಳಿದಿದ್ದು ಭಿಕ್ಷೆ. ಒಂದು ರೂಪಾಯಿ, ಎರಡು ರೂಪಾಯಿಗಳಿಗೆ ಅಂಗಡಿಯ ಮುಂದೆ ಹೋಗಿ ನಿಲ್ಲುವ ಇವರ ಮನಃ ಸ್ಥಿತಿ ಎಂದಾದರೂ ಯೋಚಿಸಿದ್ದೀರಾ?

ಉಳಿಯಲು ಅವರಿಗೆ ಮನೆ ಬಾಡಿಗೆ ಕೊಡಲು ಸಾದ್ಯವಿಲ್ಲ, ಅದಕ್ಕಾಗಿ ಸ್ಲಮ್ ಗಳಲ್ಲಿ ಉಳಿದು, ಜೀವನ ಪರ್ಯಂತ ನರಕ ಅನುಭವಿಸುತ್ತಾರೆ. ಅವರು ಎಲ್ಲಿ ಹೋದರು ತಿರಸ್ಕಾರ.
ಹಾಗಾದರೆ ಇವರು ದುಖಿಃಸುತ್ತಾ ಜೀವನ ಹೇಗೆ ಕಳೆಯುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಇವರಿಗೆ ದುಖಃವೆಂಬುದೇ ಇಲ್ಲ. ಸದಾ ಸಂತೋಷದಿಂದ,ನಗಲು ಮಾತ್ರ ಜನಿಸಿದೆವು ಎನಿಸುವಷ್ಟು ಆನಂದ. ಇವರಿಗೆ ನಾಳೆಯ ಚಿಂತೆಯಿಲ್ಲ, ಜಾತಿ-ಧರ್ಮಗಳಿಲ್ಲ,ಬೇಧ-ಭಾವ-ಮತಗಳಿಲ್ಲ, ಮುಂದಿನ ಪೀಳಿಗೆಯ ಚಿಂತೆ ಇಲ್ಲ, ದ್ವೇಷವಿಲ್ಲ, ಅಸೂಯೆ ಇಲ್ಲ, ಚಿನ್ನ-ಮನೆ ಮಾಡುವ ಆಸೆ ಇಲ್ಲ. ಇನ್ನೇನು ಬೇಕು ಸಂತೋಷವಾಗಿರಲು.

ಹಾಗಾದರೆ ಇವರಿಗೆ ಲವ್ ಸ್ಟೋರಿ ಉಂಟೆ?
ಕಂಡಿತ ಉಂಟು, ಪ್ರೀತಿ ಮಾಡದ ಮಂಗಳ ಮುಖಿಯರೆ ಇಲ್ಲ.
ಇವರ ಪ್ರೀತಿ ಬೇರೆಯವರ ಪ್ರೀತಿಯಂತೆ ಬಯಕೆಗಳ ಪ್ರೀತಿಯಲ್ಲ. ಯಾವುದೇ ರೀತಿಯ ಬಯಕೆಗಳು ಇಲ್ಲದೆ ಸ್ವಚ್ಛ ಮನಸ್ಸಿನಿಂದ ಒಬ್ಬ ಹುಡುಗನನ್ನು ಪ್ರೀತಿಸುತ್ತಾರೆ.
ಆದರೆ ಇವರಿಗೆ ಸಮಾಜದ ಸ್ಥಿತಿಗಳು ತುಂಬಾ ಚೆನ್ನಾಗಿ ತಿಳಿದಿರುತ್ತದೆ. ಅವನನ್ನ ಮದುವೆಯಾಗಲು ಪೀಡಿಸುವುದಿಲ್ಲ. ಇನ್ನೂ ಹೇಳಬೇಕಂದರೆ ಅವರ ಪ್ರಿಯಕನಿಗೆ ಇವರೇ ಬೇಗ ಬೇರೆ ಹೆಣ್ಣಿನ ಜೊತೆ ಮದುವೆಯಾಗಲು ಪೀಡಿಸುತ್ತಾರೆ. ಆ ನಾಲ್ಕು ಗೋಡೆಗಳ ಮಧ್ಯೆ ಅವರನ್ನು ಪ್ರೀತಿಸುವ ಆ ಹುಡುಗನನ್ನು ನೆನೆದು ಜೀವನ ಪರ್ಯಂತ ಸಾಗುತ್ತಾರೆ.
ಇವರಿಗೆ ಸೌಂದರ್ಯ ಪ್ರಜ್ಞೆ ಜಾಸ್ತಿ. ಹೆಣ್ಣಿನಂತೆ ಬಟ್ಟೆಗಳು ಮಾತ್ರವಲ್ಲ. ಊಟ, ತಿಂಡಿಗಳು ಹೆಣ್ಣಿನಂತೆಯೆ, ಆಟವೂ ಹೆಣ್ಣಿನದೆ, ನೋಟವೂ ಹೆಣ್ಣಿನದೆ. ಇದು ಇವರ ಪುಟ್ಟ ಬದುಕು. ಸಂತೋಷದ ಬದುಕು.

ಯೋಚಿಸಿ ಗೆಳೆಯರೇ ಇವರನ್ನ ದ್ವೇಷಿಸುವುದು ಸರಿಯೆ? ಹಾಗಂತ ಇದರಲ್ಲಿ ಇವರ ತಪ್ಪೇನು? ಅವರು ಕೂಡ ನಮ್ಮ ಹಾಗೆ ಸಾವಿರ ಕನಸು ಹೊತ್ತು ನಮ್ಮ ಹಾಗೆ ಹುಟ್ಟಿದವರು ತಾನೇ?

ಹೀಗೆ ಯೋಚಿಸುತ್ತಾ ಎದ್ದು ಹೊರಗಡೆ ಬಂದೆ. ಒಬ್ಬಳು ಮನ್ಗಲಮುಖಿ ಕೈ ಚಾಚಿ ನಿಂತಳು. 10 ರೂಪಾಯಿ ಕೊಟ್ಟು, ನೀವು ತುಂಬಾ ಚೆನ್ನಾಗಿ ಕಾಣುತ್ತ ಇದ್ದೀರ ಅಕ್ಕ ಎಂದೆ. ಸಂತೋಷದಿಂದ ನನ್ನ ಕೆನ್ನೆ ಗಿಂಡಿದಳು.

ನಾನು ನಿಮ್ಮ ಗೆಳೆಯ ಮುರಳಿ...

Comments

Submitted by venkatb83 Tue, 12/09/2014 - 16:18

ಕೋರ್ಟ್ ಆದೇಶದ ಮೇರೆಗೆ ಹಿಂದಿನ ಕೇಂದ್ರ ಸರ್ಕಾರ ಅವರ್‌ನ್ನು ತೃತೀಯ ಲಿಂಗಿಗಳು ಎಂದು ವರ್ಗೀಕರಿಸಿ ಸಮಾನ ಹಕ್ಕು ನೀಡಿದೆ..
ಅವರಿಗೂ ಮತದಾನ ಚೀಟಿ -ಆಧಾರ್ ಪತ್ರ -ರೇಷನ್ ಕಾರ್ಡ್ ದೊರಕಿದೆ.
ಸರಕಾರ ತನ್ನ ಜವಾಬ್ಧಾರಿ ನಿಭಾಯಿಸಿದೆ.
ಈಗ ಸಮಾಜದ ದೃಸ್ಟಿ ಕೋನ-ಮಾನಸಿಕ ಅಭಿಪ್ರಾಯ ಬದಲಾಗಬೇಕು...
ಅವ್ರಿಗೆ ಶುಭವಾಗಲಿ..

ನನ್ನಿ

\|/