ಮಂಜಿಷ್ಠದ ಉಪಯೋಗಗಳು

ಮಲೆನಾಡಿನ ಮಧ್ಯಮಗಾತ್ರದ ಗಿಡಗಳ ಮಧ್ಯದಲ್ಲಿ ಸಾಕಷ್ಟು ಹಮ್ಮಿಕೊಂಡು ಇರುವ ಬಳ್ಳಿ ಮಂಜಿಷ್ಠ. ಇದರಲ್ಲಿ ಎರಡು ವಿಧ ಬಿಳಿ ಮಂಜಿಷ್ಟ ಮತ್ತು ಕೆಂಪು ಮಂಜಿಷ್ಠ. ಔಷಧೀಯ ಗುಣಗಳು ಒಂದೇ ಆದರೂ ಕೆಂಪು ಮಂಜಿಷ್ಟವನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ಇದರ ಎಲೆ ಕಾಂಡ ಬೇರುಗಳು ಔಷಧಿಗೆ ಉಪಯೋಗ. ಮಂಜಿಷ್ಟವನ್ನು ನೆರಳಿನಲ್ಲಿ ಒಣಗಿಸಿ ಪುಡಿಮಾಡಿ ಗಾಳಿ ಆಡದಂತೆ ತುಂಬಿಟ್ಟು ಕೊಳ್ಳಬೇಕು.
1) ಪುಡಿಯನ್ನು ನೀರಿನೊಂದಿಗೆ ಬೆರೆಸಿ ತಲೆಗೆ ಪ್ಯಾಕ್ ಹಾಕುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.
2) ಮಂಜಿಷ್ಟದ ಎಣ್ಣೆಯನ್ನು ತಲೆಗೆ ಹಾಕುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ.
3) ಪುಡಿಯನ್ನು ಹಸುವಿನ ಹಾಲಿನೊಂದಿಗೆ ಬೆರೆಸಿ ಕಣ್ಣಿಗೆ ಪ್ಯಾಕ್ ಹಾಕುವುದರಿಂದ ಕಣ್ಣು ತಂಪಾಗುತ್ತದೆ ಕಣ್ಣಿನ ಉರಿ ಗುಣವಾಗುತ್ತದೆ.
4) ರೋಜ್ ವಾಟರ್ ನಲ್ಲಿ ಬರೆಸಿ ಮುಖಕ್ಕೆ ಪ್ಯಾಕ್ ಹಾಕುವುದರಿಂದ ಮೊಡವೆಗಳು ಗುಣವಾಗುತ್ತದೆ.
5) ಗಾಯಕ್ಕೆ ಹಚ್ಚುವುದರಿಂದ ಗಾಯ ಗುಣವಾಗುತ್ತದೆ.
6) ಇದನ್ನು ಉಪಯೋಗಿಸಿ ತಯಾರಿಸಿದ ಔಷಧಿ ಅಪಸ್ಮಾರ ಗುಣ ಮಾಡುತ್ತದೆ.
7) ಪ್ರತಿದಿನ ನಿಯಮಿತವಾಗಿ ತೆಗೆದುಕೊಳ್ಳುವುದರಿಂದ ಯಕೃತ್ ಅನ್ನು ಸರಿ ಮಾಡುತ್ತದೆ.
8) ಹಾಲಿನೊಂದಿಗೆ ಸೇವಿಸುವುದರಿಂದ ಹೃದಯ ರೋಗಗಳು ಗುಣವಾಗುತ್ತದೆ.
9) ಹಸಿ ಎಲೆಯನ್ನು ಹಸುವಿನ ಹಾಲಿನೊಂದಿಗೆ ಸೇವಿಸುವುದರಿಂದ ಜಾಂಡಿಸ್ ಗುಣವಾಗುತ್ತದೆ.
10) ಕಾಂಡವನ್ನು ಮೇಲ್ಬಾಗದ ರೆಪ್ಪೆ ತೆಗೆದು ಒಳಭಾಗದ ಕಾಂಡವನ್ನು ಉದ್ದಿನ ಬೇಳೆ ಹಾಕಿ ರುಬ್ಬಿ ಎಳ್ಳೆಣ್ಣೆಯಲ್ಲಿ ಕರಿದ ಉದ್ದಿನ ವಡೆ ವಾತರೋಗವನ್ನು ನಿವಾರಿಸುತ್ತದೆ.
11) ಇದರ ಕಾಂಡವನ್ನು ಕುಟ್ಟಿ ಬಿಸಿ ಮಾಡಿ ಬೆಚ್ಚಗೆ ಇರುವಾಗ ಕಟ್ಟುವುದರಿಂದ ಎಲುಬು ಮುರಿದು ಬಾವುಂಟಾಗಿದ್ದರೆ ಗುಣವಾಗುತ್ತದೆ.
12) ಇದರ ಕಾಂಡದ ಸ್ವರಸವನ್ನು ಶುಂಠಿ ಸೇರಿಸಿ ಸೇವಿಸುವುದರಿಂದ ಉದರ ಶೂಲೆ ಗುಣವಾಗುತ್ತದೆ.
13) ಕಾಂಡದ ರಸವನ್ನು ಸ್ವಲ್ಪ ಬಿಸಿ ಮಾಡಿ ಬೆಚ್ಚಗಿರುವಾಗಲೇ ಕಿವಿಗೆ ಹಾಕುವುದರಿಂದ ಕರ್ಣ ಸ್ರಾವ ಗುಣವಾಗುತ್ತದೆ.
14) ಇದರ ಸ್ವರಸವನ್ನು ಸ್ವಲ್ಪ ಬೆಚ್ಚಗೆ ಮಾಡಿ ಮೂಗಿಗೆ ಹಾಕುವುದರಿಂದ ಮೂಗಿನಲ್ಲಿ ಬರುವ ರಕ್ತಸ್ರಾವ ನಿಲ್ಲುತ್ತದೆ.
15) ನಾನು ತಯಾರಿಸುವ ಚರ್ಮದ ಕಾಯಿಲೆಯ ಸೋಪಿನಲ್ಲಿ ಮಂಜಿಷ್ಠದ ಪುಡಿಯೂ ಇರುತ್ತದೆ.
16) ಬಳಕೆ ಹೆಚ್ಚಾದಾಗ ಮಲಬದ್ಧತೆ ಉಂಟಾಗುತ್ತದೆ.
ಮಂಜಿಷ್ಟವನ್ನು ತೆಗೆಯುವಾಗ ಎಚ್ಚರಿಕೆ ಇರಲಿ, ಅದರ ಚುಂಗುಗಳು ಚರ್ಮಕ್ಕೆ ತಾಗಿದರೆ ಇನ್ಫೆಕ್ಷನ್ ಆಗುವ ಸಾಧ್ಯತೆ ಇರುತ್ತದೆ.
-ಸುಮನಾ ಮಳಲಗದ್ದೆ.
ಚಿತ್ರ ಕೃಪೆ; ಇಂಟರ್ನೆಟ್ ತಾಣ