ಮಂಜುಗಡ್ಡೆ
ಕವನ
ಮುಂಜಾನೆ ಮಂಜುಗಡ್ಡೆ ಮಂಜುನಿಂದ ಕೂಡಿ ಕುಳಿತ್ತಿದೆ
ಬೆಳಕು ಬೆಳಗುವ ಮುನ್ನಾ ಕರಗಲು ಸಜ್ಜಾಗುತ್ತಿದೆ
ಎಲ್ಲರ ಗಮನ ಸೆಳೆದು ಮಂಜು ನಾಚಿ ನೀರಾಗುತ್ತಿದೆ
ನಾನು ಕರಗುವೆ ನಾನು ಮಂಜುಗಡ್ಡೆ ನಾನು ನೀರಾಗುವೆ
ಶೀತದಲ್ಲಿ ನಾ ಮಂಜುಗಡ್ಡೆ ಸಂಜುವಿಗೆ ಅಚ್ಚುಮೆಚ್ಚು
ಬೆಳಕಿನಲ್ಲಿ ನಾನು ನೀರು ಮೀನಿಗೆ ಅಚ್ಚುಮೆಚ್ಚು
ನನಗೆ ನನ್ನ ಸ್ವಂತಿಕೆ ಇಲ್ಲ ನಾನು ಬದಲಾಗುವೆ
ಒಮ್ಮೊಮ್ಮೆ ನಾನು ಹಗಲು ರಾತ್ರಿಗಳ ಹಾಗೆ
ದು:ಖ ಸಂತೋಷಗಳ ಹಾಗೆ ನಾನು
ನಾನಾ ರೂಪ ತಾಳುವೆ ನಾನು
ನಾನು ನಾನಲ್ಲ ನಾನು ಮಂಜುಗಡ್ಡೆ
ಮಂಜು ಕರಗಿ ನೀರಾಗುವ ಮೊದಲು.
ಹೆಚ್. ವಿರುಪಾಕ್ಷಪ್ಪ ತಾವರಗೊಂದಿ.