ಮಂಥನ

ಮಂಥನ

ಕವನ

 ಹುದುಗದಿರು ಸಂಪ್ರೀತಿ

ಮರುಕಳಿಸದ ನೆನಪಲ್ಲಿ |

ನಗ್ನತಾರೆಯ ರೀತಿ

ಭಾಸಿಸುವ ನೆಪದಲ್ಲಿ ||

 

ಮತ್ತೆ ಕಾಡಲದೆ ಹಳತು

ಭಾವ ದುಸ್ತರದ ಮೆಲುಕು ||

ಮೂಡಿ ಚೇತನದ ಹೊಸತು

ಅಂತರಂಗದ ಬೆಳಕು ||

 

ಸರಿಯದಿರು ನನ್ನೊಲವೆ

ತೊರೆದು ಜಾರುತ ಮರೆಗೆ |

ಗತದಿ ಮರಳುತ ಮಡಿವೆ

ಮುರಿದು ಬೀಳಲು ಬೆಸುಗೆ ||

Comments