ಮಕ್ಕಳಿಗೆ ಹಿತ ನುಡಿ

ಮಕ್ಕಳಿಗೆ ಹಿತ ನುಡಿ

ಕವನ

ಬೇಗನೆದ್ದು ಮುಖವ ತೊಳೆದು

ಮಾಗಿದಂಥ ಹಿರಿಯರನ್ನು|

ಬಾಗಿ ನಮಿಸಿ ಹರಕೆ ಪಡೆದು ಪಾಠ ಕಲಿತುಕೋ

ಕೂಗಿ ರಂಪ ಮಾಡಬೇಡ

ತೂಗಿ ಬಂದೆ ತೊಟ್ಟಿಲನ್ನು

ಹೀಗೆ ಮಲಗಿ ನಿದ್ದೆ ಹೋದ ಮುದ್ದು ಕಂದನು||

 

ಬುದ್ಧಿ ನಿನಗೆ ಹೇಳುತಿರುವೆ

ಸದ್ದುಮಾಡ ಬೇಡಮಗನೆ

ಕದ್ದು ಕದ್ದು ನೋಡುತವನ ಮೆಲ್ಲನೆಬ್ಬಿಸಿ

ಬಿದ್ದು ಹೋದ ಹಲ್ಲ|ನೆಡೆಯ

ಗೆದ್ದು ಬೀರ್ವ ನಗುವು ಚೆಂದ

ಮುದ್ದು ಮುಖದ ಕುಡಿಯು ನೀನು ಬಹಳ ತುಂಟನೇ||

***

*ಬಸವ-ಬೆಳಕು*

ಬಸವ ಜನಿಸಿ ಜಗದ ತಮವು

ವಸುಧೆ ತಳಕೆ ತಲೆಯ ಮರೆಸಿ

ಕಸುವು ಬೆಳೆದು ಜನರು ನಗುತ ದಿನವ ಕಳೆವರು

ಮುಸುಕು ಸರಿದು ಕೊಳೆಯು ತೊಳೆದು

ಹಸನು ಮಾಡಿ ಬೆಳೆಯು ಬೆಳೆದು

ಕೆಸರು ಕೊಸರಿ ವಚನ ಬೆಳಕು ಮೂಡಿ ನಲಿವರು.

 

ಶರಣ ಮನದ ಮೂಲ ತಿಳಿದು

ಕರಣ ಹಸನುಗೊಳಿಸಿ ಕಸವು

ಕರಗಿ ತನುವು ಬೆಲೆಯ ಪಡೆದು ಜೀವ ಬೆಳೆಯಿತು

ಮರಣ ಮಸಣ ಹೆದರಿ ದೂರ

ಸರಿದು ಬಾಳು ಚಂದ ಕಂಡು

ಜರಿದ ಜನರು ಸನಿಹ ಕರೆದು ಮುದವು ದೊರೆಯಿತು.

(ಭೋಗ ಷಟ್ಪದಿ)

-*ಈಶ್ವರ ಜಿ ಸಂಪಗಾವಿ*

 

ಚಿತ್ರ್