ಮಕ್ಕಳ ಆರೋಗ್ಯ - ಮಕ್ಕಳ ಆಹಾರ!
ಮಕ್ಕಳ ಆಹಾರ ಮೊದಲು ೬ ತಿಂಗಳಲ್ಲಿ ಮೊದಲು ನೋಡೋಣ...
ಮಗುವು ಹುಟ್ಟಿದ ದಿನದಿಂದ ಮೊದಲ ೬ ತಿಂಗಳು ಅದರ ಆಹಾರ: ಹಾಲು, ಹಾಲು ಮತ್ತು ಹಾಲು. ಅಂದರೆ ಮೊದಲ ೬ ತಿಂಗಳು ಮಗುವಿಗೆ ಆಹಾರ ಹಾಲಷ್ಟೇ ಸಾಕು. ಹಾಲಷ್ಟೇ ಅವಶ್ಯಕತೆಯನ್ನೂ ಶೇ ೧೦೦ ರಷ್ಟು ಪೂರೈಸುತ್ತೆ. ಹಾಲಿನಲ್ಲಿ ಮುಖ್ಯವಾಗಿ ೩ ತರಹವಿದೆ....೧. ತಾಯಿಯ ಹಾಲು, ೨. ಮಗುವಿಗೇ ಅಂತಲೇ ತಾಯಿಗೆ ಹಾಲನ್ನು ಹೋಲುವಂತೆ (ಸಾಧ್ಯವಾದಷ್ಟು) ತಯಾರಿಸಿದ ಮಿಲ್ಕ್ ಫಾರ್ಮಲಾಗಳು: ಉದಾ: ಸಿಮಿಲ್ಯಾಕ್, ಎನ್ಫಮಿಲ್, ಮುಂತಾದವು. ೩. ಮೂರನೆಯದೂ ಮತ್ತು ಕಡೆಯ ಗುಂಪಿನಲ್ಲಿ : ಹಸುವಿನ ಹಾಲು, ಎಮ್ಮೆಯ ಹಾಲು, ಸಿಂಧಿ ಹಸುವಿನ ಹಾಲು, ಕುರಿಯ ಹಾಲು ಮುಂತಾದವು.
ತಾಯಿಯ ಹಾಲು (ಬ್ರೆಸ್ಟ್ ಮಿಲ್ಕ್)
ತಾಯಿಯ ಹಾಲು ಹುಟ್ಟಿದ ಮಗುವಿಗೆ ಶ್ರೇಷ್ಠವಾದ ಹಾಲು. ೬ ತಿಂಗಳಿಂದ ೧ ವರುಷದವರೆಗೆ ಮಗುವು ತಾಯಿಯ ಹಾಲನ್ನು ಸೇವಿಸಿದರೆ ಬೆಳವಣಿಗೆ ಅತ್ಯುತ್ತಮವಾಗಿರುವುದರಲ್ಲಿ ಸಂದೇಹವೇ ಇಲ್ಲ. ಎಲ್ಲ ರೀತಿಯ ಸಂಶೋಧನೆಗಳಿಂದ ಇದು ಕಂಡು ಬಂದಿದೆ. ಮಗುವು ಕೆಲವೊಂದು ಸಲ ತುಂಬಾ ಪ್ರಿಮೆಚೂರ್ ಆಗಿ ಹುಟ್ಟಿ, ತಾಯಿಯ ಹಾಲನ್ನು ನೇರವಾಗಿ ಕುಡಿಯಲು ಅಸಾಧ್ಯವಾದಲ್ಲಿ, ಬ್ರೆಸ್ಟ್ ಪಂಪ್ ಅನ್ನು ಉಪಯೋಗಿಸಿ ಹಾಲನ್ನು ತೆಗೆದು ಸೀಸೆಯಲ್ಲಿ ತುಂಬಿ ನಿಪ್ಪಲ್ ಮೂಲಕ ಮಗುವಿಗೆ ಕುಡಿಸಲು ಕಲಿಸಬಹುದು. ಈ ತರಹ ಪ್ರಿಮೆಚೂರ್ ಮಗುವಿಗೆ ತಾಯಿಯ ಹಾಲಿಂದ ಆಗುವ ಉಪಯೋಗ, ಸಹಾಯ ಬೇರೆ ಯಾವುದೇ ಆರ್ಟಿಫಿಶಿಯಲ್ ಹಾಲಿನಿಂದ ಒದಗಿಸಲು ಸಾಧ್ಯವಿಲ್ಲ. ಸ್ವಲ್ಪ ಮಟ್ಟಿಗೆ ಪ್ರಯತ್ನ ಪಡಬಹುದು, ಆದರೆ ಶೇ ೯೦ ರಿಂದ ೧೦೦ ರಷ್ಟು ಸಾಧ್ಯವಾಗಿಲ್ಲ.
ತಾಯಿಯ ಹಾಲಿನಲ್ಲಿರುವ ಲಕ್ಷಣಗಳು:
* ಮಗು ಆರೋಗ್ಯವಾಗಿ ಬೆಳೆಯಲು ಅನುಗುಣವಾದ ಪ್ರೋಟೀನ್, ಶುಗರ್ ( ಸಕ್ಕರೆ, ಕಾರ್ಬೋಹೈಡ್ರೇಟ್ಸ್), ಫ್ಯಾಟ್ (ಕೊಬ್ಬಿನ ಅಂಶ) ಇವು ಸಂಪೂರ್ಣವಾಗಿ ಸಿಗುತ್ತದೆ.
* ಮಗುವಿನ ಇಮ್ಮೂನ್ ಸಿಸ್ಟೆಮ್ ಗೆ ಬೇಕಾದ ಆಂಟಿಬಾಡೀಸ್, ಇಮ್ಮೂನ್ ಫ್ಯಾಕ್ಟರ್ಸ್, ಎನ್ಸೈಮ್ಸ್, ಮತ್ತು ಬಿಳಿಯ ರಕ್ತ ಕಣಗಳು ( ವೈಟ್ ಬ್ಲಡ್ ಸೆಲ್ಸ್) ಸಹ ಬೇಕಾದ ಪ್ರಮಾಣದಲ್ಲಿ ದೊರೆಯುತ್ತದೆ. ಇವುಗಳು ಮಗುವಿಗೆ ಬರಬಹುದಾದ ಹಲವಾರು ಇನ್ಫ಼ೆಕ್ಶನ್ಸ್ ಅಂದರೆ, ಸಾಂಕ್ರಾಮಿಕ ರೋಗಗಳನ್ನು ಮತ್ತು ಕೆಲವು ಖಾಯಿಲೆಗಳನ್ನೂ ತಡೆಗಟ್ಟುತ್ತದೆ. ಹಾಗೂ ಈ ರಕ್ಷಣೆ ಬರೀ ತಾಯಿಯ ಹಾಲನ್ನು ಕುಡಿಯುವ ಸಮಯದಲ್ಲಿ ಮಾತ್ರ ಅಲ್ಲ, ಹಾಲು ಕುಡಿಯುವುದು ನಿಲ್ಲಿಸಿದ ನಂತರದ ಸಮಯದಲ್ಲೂ ಈ ರಕ್ಷಣೆ ನಿಲ್ಲುತ್ತದೆ (ಸುಮಾರು ತಿಂಗಳುಗಳ ಸಮಯದವರೆಗೆ). ಈ ರಕ್ಷಣೆ ಇನ್ಫ್ಯಾಂಟ್ ಫಾರ್ಮಲಾಗಳಲ್ಲಿ ದೊರೆಯುವುದಿಲ್ಲ. ಇದು ಬರೀ ತಾಯಿಯ ಹಾಲಿನಲ್ಲಷ್ಟೇ ದೊರೆಯುವ ಅಮೂಲ್ಯ ಪದಾರ್ಥಗಳು!
* ತಾಯಿಯ ಹಾಲು ಮಗುವಿನ ಕರುಳಲ್ಲಿ ಆರೋಗ್ಯವಾದ ಬ್ಯಾಕ್ಟೀರಿಯಗಳನ್ನು ಬೆಳೆಯಲು ಅನುವು ಮಾಡುತ್ತದೆ. ಇದು ಪ್ರೀಬಯಾಟಿಕ್ಸ್ ಅನ್ನೋ ತಾಯಿಯ ಹಾಲಿನಲ್ಲಿರುವ ಪದಾರ್ಥಗಳ ಮೂಲಕ ಸಾಧ್ಯವಾಗಿದೆ. ಆದ್ದರಿಂದ ಅನಾರೋಗ್ಯ ಬ್ಯಾಕ್ಟೀರಿಯಾಗಳಾದ ಈ- ಕೋಲೈ ಎಂಬ ರೋಗಾಣುಗಳಿಂದ ಮಗುವಿಗೆ ಸಾಂಕ್ರಾಮಿಕ ರೋಗ ಬರುವ ಸಾಧ್ಯತೆಯನ್ನು ತಪ್ಪಿಸುತ್ತದೆ. ವಾಂತಿ ಭೇದಿ ಗಳ ಖಾಯಿಲೆ ಮಗುವಿಗೆ ತಟ್ಟದಂತೆ ಎಚ್ಚರವಹಿಸುತ್ತದೆ.
* ತಾಯಿಯ ಹಾಲಿಂದ ಮಗುವಿಗೆ ಅಲರ್ಜಿ ಗಳು ಉಂಟಾಗುವ ಸಂಭವಗಳು ಬಹಳ ಕಡಿಮೆ, ಅಂದರೆ, ಕೋಲೈಟಿಸ್, ರಾಶಸ್(ತುರಿಕೆ) ಮುಂತಾದ ಖಾಯಿಲೆಗಳನ್ನು ತಡೆಗಟ್ಟುತ್ತದೆ. ಆಸ್ತಮಾ, ರೈನೈಟಿಸ್ ಮತ್ತಿತರ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳನ್ನೂ ನಿಲ್ಲಿಸುತ್ತದೆ.
* ತಾಯಿಯ ಹಾಲನ್ನು ಕುಡಿದ ಮಕ್ಕಳಲ್ಲಿ ಡಯಾಬಿಟೀಸ್, ಲೂಕೀಮಿಯ, ಮತ್ತು ವಿಪರೀತ ತೂಕ..ಒಬೀಸಿಟೀ ಇವುಗಳ ಸಂಭವ ಕಡಿಮೆ ಬೇರೆ ಮಕ್ಕಳಿಗೆ ಹೋಲಿಸಿದರೆ ( ಬೇರೇ ಹಾಲನ್ನು ಕುಡಿದ ಮಕ್ಕಳಿಗೆ).
ಕಡೇ ಪಕ್ಷ ೬ ತಿಂಗಳಾದರೂ ಮಕ್ಕಳಿಗೆ ತಾಯಿಯ ಹಾಲನ್ನು ಕುಡಿಸಿದರೆ ಮೇಲೆ ಹೇಳಿದ ಅನುಕೂಲತೆಗಳು ದೊರೆಯುವುದರಲ್ಲಿ ಸಂಶಯವಿಲ್ಲ. ಬೆಳವಣಿಗೆ, ಮೆದುಳು ಬೆಳವಣಿಗೆ, ಎಲ್ಲ ಉತ್ತಮವಾಗಿರುತ್ತೆ.
ತಾಯಿಯ ಹಾಲಲ್ಲಿ .......
* ೨೦ ಕಿಲೋ ಕ್ಯಾಲೊರಿಸ್ /ಒಂದು ಔನ್ಸ್ ಹಾಲಲ್ಲಿ
* ಪ್ರೋಟೀನ್ : ೧೧ ಗ್ರಾಮ್ಸ್
* ಕೊಬ್ಬು (ಫ್ಯಾಟ್): ೩೯ ಗ್ರಾಮ್ಸ್
* ಕಾರ್ಬ್ಸ್ (ಸಕ್ಕರೆ ಅಂಶ) : ೭೨ ಗ್ರಾಮ್ಸ್
* ಸೋಡಿಯಮ್ : ೮ ಮಿಲಿ ಈಕ್ವಿವೆಲೆಂಟ್
* ಪೊಟ್ಟ್ಯಾಸಿಯಮ್ : ೧೪ ಮಿಲಿ ಈಕ್ವಿವೆಲೆಂಟ್
* ಕ್ಯಾಲ್ಸಿಯಮ್ : ೨೭೯ ಮಿಲಿಗ್ರಾಮ್ಸ್
* ಫಾಸ್ಫೊರಸ್ : ೧೪೩ ಮಿಲಿಗ್ರಾಮ್ಸ್
* ಐರನ್ (ಕಬ್ಬಿಣಾಂಶ) : ೦.೩ ಮಿಲಿಗ್ರಾಮ್ ( ಮಗುವಿನ ಫಾರ್ಮಲಾಗಳಲ್ಲಿ : ಸುಮಾರು ೧೩ ಮಿಲಿಗ್ರಾಮ್ಸ್)
* ಆಸ್ಮೊಲಾಲಿಟಿ ( ನೀರನ್ನು ಹಿಡಿದಿಡುವ ಶಕ್ತಿ) : ೨೮೬
ಮೇಲೆ ಹೇಳಿದಂತೆ ತಾಯಿಯ ಹಾಲಲ್ಲಿ ಕಬ್ಬಿಣದ ಅಂಶ ಕಡಿಮೆ ಇರುತ್ತದೆ. ಬೆಳೆಯುವ ಮಗುವಿಗೆ ಹೆಚ್ಚಿನ ಕಬ್ಬಿಣದ ಅವಶ್ಯಕತೆ ಇರುವುದರಿಂದ ತಾಯಿಯ ಹಾಲನ್ನು ಕುಡಿಯುವ ಮಕ್ಕಳಿಗೆ ಐರನ್ ಡ್ರಾಪ್ಸ್ ಅನ್ನು ಸೇರಿಸಬೇಕು. ದಿನಾ ಒಂದು ಅಥವಾ ಎರಡು ಮಿಲಿಲೀಟರ್ ಐರನ್ ಡ್ರಾಪ್ಸ್ ಅನ್ನು ( ಪಾಲಿವೈಸಾಲ್ ವಿತ್ ಐರನ್ ಡ್ರಾಪ್ಸ್ ಆದರೆ) ಕೊಡಬೇಕು. ೬ ತಿಂಗಳ ಸಮಯದಲ್ಲಿ ಮಗುವಿನ ರಕ್ತ ಪರೀಕ್ಷೆ ಹೀಮೋಗ್ಲೋಬಿನ್ ಗೆ ಮಾಡಿಸಿ ಕಬ್ಬಿಣದ ಅವಶ್ಯಕತೆ ಪೂರೈಸಿದೆಯೇ ಎಂದು ಚೆಕ್ ಮಾಡಿ ಅದರಂತೆ ಮುಂದುವರೆಯಬೇಕು ( ಕಡಿಮೆ ಇದ್ದಲ್ಲಿ ಐರನ್ ಹೆಚ್ಚಿಸಿ, ಸರಿಯಾಗಿದ್ದಲ್ಲಿ ಅದೇ ಪ್ರಮಾಣದಲ್ಲಿ ಮುಂದುವರೆಸಬೇಕು, ತಾಯಿಯ ಹಾಲು ಕುಡಿಯುವ ಸಂಪೂರ್ಣ ಸಮಯದವರೆಗೆ).
ನೀವೆಲ್ಲರೂ ನಿಮಗೆ ಕಂಡಂತೆ "ತಾಯಿಯ ಹಾಲನ್ನು" ಮಗುವಿಗೆ ಕೊಡುವುದನ್ನು ಪ್ರೋತ್ಸಾಹಿಸಿ! ಇಂದಿನ ಮಕ್ಕಳು ಮುಂದಿನ ಭವ್ಯ ಪ್ರಜೆಗಳಾಗಿ ಬೆಳೆಯುವುದಕ್ಕೆ ಇದು ಅತ್ಯವಶ್ಯಕತೆ!
Comments
ಮಾಹಿತಿಪೂರ್ಣ ಲೇಖನ ಡಾಕ್ಟರ್
In reply to ಮಾಹಿತಿಪೂರ್ಣ ಲೇಖನ ಡಾಕ್ಟರ್ by hema hebbagodi
ಧನ್ಯವಾದಗಳು! ಹೇಮಾ ಅವರೆ, ಮೀನಾ
ನಮಸ್ಕಾರ ಡಾ.ಮೀನಾ ಅವರಿಗೆ,
ಧನ್ಯವಾದಗಳು ನಾಗೆಷ್ ಅವರೆ,