ಮಕ್ಕಳ ಕೈಯಲ್ಲಿ ಕೊಡಬೇಡಿ ಮೊಬೈಲು…

ಮಕ್ಕಳ ಕೈಯಲ್ಲಿ ಕೊಡಬೇಡಿ ಮೊಬೈಲು…

ಕವನ

ಬಳಸಬೇಡಿ ಬಳಸಬೇಡಿ ಮೊಬೈಲು

ಬಳಸಿದರು ಮಿತಿ ಇರಲಿ ಮೊಬೈಲು

ಜೀವನ ಅಂತಾರೆ ಮೊಬೈಲು

ಜೀವ ಕಳೆದುಕೊಂಡು ಬಿಡ್ತಾರೆ ಮೊಬೈಲು

 

ಮೊಬೈಲಿನಲ್ಲಿ ಹಾಯ್ ಅಂದು

ಹೊರಾಂಗಣದಲ್ಲಿ ಸೂಪರ್ ಅಂದು

ದಾರಿ ತಪ್ಪಿಸುವ ಮೊಬೈಲು

ದಿಕ್ಕು ಬದಲಿಸುವ ಮೊಬೈಲು

 

ಮನೆಯಲ್ಲಿ ಮಾತು ಬಂದಾಗಿ

ಮೊಬೈಲಿನಲ್ಲಿ ಮಾತು ಹೆಚ್ಚಾಗಿ

ಬಂಧು ಬಾಂಧವರಿಗೆ ದೂರಾಗಿ

ಹುಚ್ಚರಂತೆ ತಿರುಗಾಡಿ ಮಾತಾಡೋ ಯುವ ಪೀಳಿಗೆ 

 

ಮಕ್ಕಳ ಕೈಯಲ್ಲಿ ಕೊಡಬೇಡಿ ಮೊಬೈಲು

ಅಪಾಯ ಕಟ್ಟಿ ಕೊಡುತ್ತದೆ ಮೊಬೈಲು

ಧೀರ್ಘ ವಿಚಾರ ಸಂಕಿರಣ ಮಾಡಿ

ಮೊಬೈಲ್ ಬಳಕೆ ಕಡಿಮೆ ಮಾಡಿ

 

ನಾವು ಹಡೆದ ಮಕ್ಕಳು 

ನಮ್ಮ ಮಾತು ಕೇಳುತ್ತಿಲ್ಲ

ಪುಸ್ತಕ ಕೊಟ್ಟು ನೋಡಿ

ಮಕ್ಕಳನ್ನು ಮಸ್ತಕ ಮಾಡಿ ಬಿಡಿ.

 

-ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ, ಶಿಕ್ಷಕರು, ಸಾ ನರೇಗಲ್ಲ.

ಚಿತ್ರ್