ಮಕ್ಕಳ ಗೋಳು

ಮಕ್ಕಳ ಗೋಳು

ಕವನ


ಮಕ್ಕಳ ಗೋಳು

ನಮ್ಮನ್ನರ್ಥಮಾಡ್ಕೊ
ಳ್ಳೋರು ಇಲ್ಲವೇ ಇಲ್ಲವಲ್ಲ
ಏನ್ಮಾಡೋದು ಹೇಳು
ಅಣ್ಣಾ  ಬೇಜಾರಿಲ್ಲ ಬೇಸರಿಲ್ಲ ||ಪ||

ಏಳು ಬೇಗ ಸ್ನಾನ ಮಾಡು ಶಾಲೆಗೇ ನೀನು ಹೋಗ್ಬೇಕು
ಹಲ್ಲುಜ್ಜಿಲ್ಲ ಮೈತಿಕ್ಕಿಲ್ಲ ಎಂಬ ಬೈಗುಳ ನಿತ್ಯದ ಗೋಳು
ಬಾಕಿಯಿದ್ದ ಹೋಂ ವರ್ಕ್ ಎಲ್ಲಾ ಸರಸರ
ಸರಸರ ಗೀಚಬೇಕು
ತಪ್ಪಿಸಿ ಬಿಟ್ರೆ ಶಾಲೆಯಲ್ಲಿ ಮೇಡಂ ಹೊಡ್ತ ತಿನ್ನಬೇಕು ||೧||

ನಮ್ಮನ್ನರ್ಥಮಾಡ್ಕೊಳ್ಳೋರು ಇಲ್ಲವೇ ಇಲ್ಲವಲ್ಲ
ಏನ್ಮಾಡೋದು ಹೇಳು
ಅಣ್ಣಾ  ಬೇಜಾರಿಲ್ಲ ಬೇಸರಿಲ್ಲ ||ಪ||

ತರಗತಿಯಲ್ಲಿ ಮಾತಾಡೋದೇ ? ನ
ಗೋಂಗೆ ಇಲ್ಲ ಕಾಣ್ರೀ
ಬೆಪ್ಪನಂಗೆ ಕೂತಕೊಂಡಿದ್ರೆ ಅಣಕಿಸ್ತಾರೆ ನೋಡ್ರೀ 
ಮಗ್ಗಿ ಲೆಕ್ಕ ಭಾಗಾಕಾರ ನಮ್ಮ ತಲೆಯ ಕೆಡ್ಸಿ
ಮೊಸರು ಗಡಿಗೆ ಆಗೋಗಿದೆ ಏನ್ಮಾಡೋದು ಹೇಳ್ರೀ
||೨||

ನಮ್ಮನ್ನರ್ಥಮಾಡ್ಕೊಳ್ಳೋರು ಇಲ್ಲವೇ ಇಲ್ಲವಲ್ಲ
ಏನ್ಮಾಡೋದು ಹೇಳು
ಅಣ್ಣಾ  ಬೇಜಾರಿಲ್ಲ ಬೇಸರಿಲ್ಲ ||ಪ||

ಈಜೋಮೀನು ಹಾರೋಹಕ್ಕಿ ಗೆಳೆತನ ಸಿಕ್ಕೋದಿಲ್ಲ
ಬಟ್ಟೆ ಕೊಳಕು ಆಗುತ್ತೇಂತ ಮಣ್ಣನು ಮು
ಟ್ಟೋ0ಗಿಲ್ಲ 
ಆಟ ಕೂಡ ಹೇಳಿದಂ
ಗೇ ಆಡ್ಬೇಕಂತಾರಲ್ಲ
ಯಾವ್ದೂ ಬೇಡ ಅಂತ ಟೀ. ವಿ. ಮುಂದೂ
ಕೂರಂಗಿಲ್ಲ ||೩||

ನಮ್ಮನ್ನರ್ಥಮಾಡ್ಕೊಳ್ಳೋರು ಇಲ್ಲವೇ ಇಲ್ಲವಲ್ಲ
ಏನ್ಮಾಡೋದು ಹೇಳು
ಅಣ್ಣಾ  ಬೇಜಾರಿಲ್ಲ ಬೇಸರಿಲ್ಲ ||ಪ||

ಆಟ ಬೇಕು ಊಟ ಬೇಕು ಓದು ಬರೆಹ ಎಲ್ಲ ಬೇಕು
ನಮ್ಮ ಸುತ್ತ ಮುತ್ತ ಇರುವ ಜಗವ ತಿಳ್ಕೊಳ್ಬೇಕು 
ನಮ್ಮನ್ನರ್ಥ ಮಾಡ್ಕೊಂಡಂತ ಪ್ರೀತಿ ನಮಗೆ ಸಿಗಬೇಕು
ಏನೇ ಬರಲಿ ಬೇಜಾರಿಲ್ದೆ  ನಾವು ನಗ್ತಾ ಇರಬೇಕು ||೪||

ನಮ್ಮನ್ನರ್ಥಮಾಡ್ಕೊಳ್ಳೋರು ಇಲ್ಲವೇ ಇಲ್ಲವಲ್ಲ
ಏನ್ಮಾಡೋದು ಹೇಳು
ಅಣ್ಣಾ  ಬೇಜಾರಿಲ್ಲ ಬೇಸರಿಲ್ಲ ||ಪ||


                                                                                        - ಸದಾನಂದ  

Comments