ಮಕ್ಕಳ ದಿನಾಚರಣೆ
ಕವನ
ಚಾಚಾ ನೆಹರೂ ಮಕ್ಕಳ ನೆಹರೂ
ರಾಷ್ಟ್ರೀಯ ನಾಯಕರಿವರು|
ಮಕ್ಕಳೆಂದರೆ ಬಲು ಪ್ರೀತಿ
ಅಕ್ಕರೆ ಸಕ್ಕರೆ ಎನುವರು||
ಗುಲಾಬಿ ಹೂವು ನೀಡಲು ಮಗುವು
ಕೋಟಿನ ಜೇಬಿಗೆ ಸಿಲುಕಿಸುವರು|
ಬರಸೆಳೆದು ಅಪ್ಪಿ ಮುದ್ದಾಡುವರು
ಹೇಗಿರುವೆ ಎಂದು ಕೇಳುವರು||
ನೆಹರೂ ತಾತನ ಹುಟ್ಟಿದ ದಿನವು
ಮಕ್ಕಳ ದಿನವೆಂದು ಘೋಷಣೆಯಾಯಿತು|
ಸಡಗರ ಸಂಭ್ರಮ ಭಾರತ ದೇಶದಿ
ಎಲ್ಲಡೆ ನಡೆಯಲು ಹರುಷದಲಿ||
ಮಕ್ಕಳೇ ಕೇಳಿರಿ ಒಳ್ಳೆಯ ಮನದಲಿ
ಆಟಪಾಠ ನೀತಿ ಕಲಿಯಿರಿ|
ತಾಯಿ ತಂದೆಯ ಗುರುಗಳ ಹಿರಿಯರ
ಪ್ರೀತಿ ಗೌರವ ಭಕ್ತಿಯಲಿ ನೋಡಿರಿ||
ಹೊತ್ತು ತುತ್ತು ನೀಡುವ ಬುವಿಯ
ಪ್ರಕೃತಿ ಮಾತೆಯ ಮರೆಯದಿರಿ|
ತಾಯ್ನಾಡ ಸೇವೆ ನಿಮ್ಮಯ ಗುರಿಯು
ಇಂದೇ ಪ್ರತಿಜ್ಞೆಯ ಮಾಡಿರಿ||
-ರತ್ನಾ ಕೆ ಭಟ್ ತಲಂಜೇರಿ
ರೂಪದರ್ಶಿಗಳು: ಆರ್ಯನ್, ಚಾಹಲ್ ಕುಂಪಲ ಮತ್ತು ಆದ್ಯ ಪ್ರಕಾಶ್ ಬೋಂದೇಲ್
ಚಿತ್ರ್