ಮಕ್ಕಳ ಪಾಲಿನ ದೇವರು
ಕವನ
ಕಾರಿರುಳು ಆವರಿಸಿ ಕತ್ತಲೆಯು ಮುತ್ತಿರಲು
ಜ್ಞಾನದ ಬೆಳಕನ್ನು ಮನದಲ್ಲಿ ತುಂಬಿದರು
ಗುರುವನ್ನು ಗೌರವಿಸು ತಿದ್ದುತಲಿ ಕಲಿಸುವರು
ವಾತ್ಸಲ್ಯದಲಿ ತಿಳಿಹೇಳುತ ಪ್ರೀತಿಯಲಿ ಮೆರೆಸುವರು
ಗರುವದಲಿ ಬೀಗದೆ ಬುದ್ಧಿ ಪೇಳುವರು
ಜನರೆದುರು ತಲೆಯೆತ್ತಿ ನಿಲಲು ಹೇಳುವರು
ಮಣ್ಣಿನ ಮುದ್ದೆಯನು ಶಿಲೆಯಾಗಿಸುವರು
ತನುವಲಿ ನೈತಿಕತೆಯ ಬಿಂಬಿಸುವರು
ಮನದಲಿ ಜ್ಞಾನದ ಬೀಜ ಬಿತ್ತುವರು
ಬದುಕಿನ ನಾವೆಯಲಿ ತೇಲಲು ಕಲಿಸುವರು
ಕಲಿತಷ್ಟು ಇರುವುದು ಜೀವನದಿ ಎನುವರು
ಕಲಿಸುತಲಿ ಕಲಿಯುತಲಿ ಜೀವನವ ಸವೆಸುವರು
ಅಕ್ಷರ ತಿದ್ದಿ ಬುದ್ಧಿ ಹೇಳಿದ ಮಾಂತ್ರಿಕರು
ಸಾಕ್ಷರತೆಯ ಸಾರಿ ಸಾರಿ ಸಾರಿದರು
ಜ್ಞಾನ ವಿಜ್ಞಾನ ಗಣಿತ ಭಾಷೆಗಳ ಕಲಿಸುವರು
ಮಕ್ಕಳ ಪಾಲಿನ ದೇವರಾಗಿ ಹರಸುವರು
(ಶಿಕ್ಷಕರ ದಿನದ ಶುಭಾಶಯಗಳು)*
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್