ಮಕ್ಕಳ ಹಂತವೆ ಬಲು ಚಂದ
ಕವನ
ಶೈಶವ ಹಂತವು
ಮಾಸದ ನೆನಪದು
ಸಾಸಿರ ನಾಮದ ಗಾನದಲಿ
ಶೋಷಿತವಲ್ಲದ
ಭೂಷಿತ ಮಜಲದು
ತೋಷದಿ ಬೀಗುವ ಯಾನದಲಿ||
ಮಕ್ಕಳ ಕೂಟವು
ಪಕ್ಕನೆ ಮಿರುಗುತ
ಸಕ್ಕರೆ ಮನದಲಿ ನಲಿಯುವರು
ಅಕ್ಕರೆ ಮಾತಿನ
ಚಕ್ಕಡಿಯಲ್ಲಿಯೆ
ಚೊಕ್ಕದಿ ಕುಣಿಯುತ ಬೀಗುವರು||
ಆಟದಿ ಸ್ಫುರಿಸುತ
ಪಾಠದಿ ಕಲಿವರು
ನೋಟದಿ ನಗಿಸುತ ಬಿಂಬಿತರು
ಓಟದ ಬಯಲಲಿ
ಚಾಟಿಯ ಬೀಸುತ
ಮೀಟುವ ಹೃದಯದಿ ಶೋಭಿತರು||
ತುಂಟರು ಬಂಟರು
ಘಂಟೆಯ ಹೊಡೆಯುತ
ಚಿಂಟರ ಚೇಷ್ಟೆಯು ಬಲುಜೋರು
ಗಂಟಿಕೆಯಲ್ಲಿಯೆ
ಕಂಟಕವಿಲ್ಲದೆ
ಕುಂಟಿಕೆಯಾಗದೆ ಮೇಲೇರು||
ಬಾಲ್ಯದ ನೆನಪದು
ಕಾಲ್ಯದಿ ಬೆಳಗುತ
ಮೌಲ್ಯವ ಕಲಿಯುತ ಬೆಳೆಯುವರು
ಮಾಲ್ಯದ ಸಾಲಲಿ
ಕೌಲ್ಯವ ಗುಣವದು
ಕೂಲ್ಯದಿ ಮಾಸದ ಜೊತೆಯವರು||
ರಸಮಯ ವೇಳೆಯು
ಕಸವರದಂತೆಯೆ
ನಸುನಗು ಬೀರುತ ಗಣದೊಳಗೆ
ಹಸಿರಿನ ರೀತಿಲಿ
ಬಸಿರನು ತುಂಬುವ
ಜಶದಲಿ ಕುಣಿಯುತ ಮೆರೆಯರು||
ಅಭಿಜ್ಞಾ ಪಿ ಎಮ್ ಗೌಡ
ಚಿತ್ರ್