ಮಕ್ಕಳ ಹನಿಗಳು

ಮಕ್ಕಳ ಹನಿಗಳು

ಕವನ

ಗಂಟೆ ಕಿಣಿ ಕಿಣಿ

ಗುಡಿಯ ಗಂಟೆ 

ಢಣ ಢಣ

ಶಾಲೆ ಗಂಟೆ

ಠಣ ಠಣ 

ನನ್ನ ಬೆಕ್ಕ

ಕೊರಳ ಗಂಟೆ

ಕಿಣಿ ಕಿಣಿ

ಕಿಣಿ ಕಿಣಿ

ಕಿಣಿ ಕಿಣಿ

***

ಬುಗರಿ

ಬುಗರಿ ಬುಗರಿ

ಬಣ್ಣದ ಬುಗರಿ

ಗಿರಿಗಿರಿ ಸುತ್ತುವುದು

ಕಾಮನ ಬಿಲ್ಲನು

ತೋರುತ ನಮಗೆ 

ಸಂತಸ ನೀಡುವುದು

***

ಕುಟುಂಬ

ತೋಟದಲ್ಲಿ ಗಿಡಗಳನ್ನು

ಅಪ್ಪ ಬೆಳೆಯುತ

ಕಾಯಿಪಲ್ಲೆ ಹೂಗಳನ್ನು

ಅಮ್ಮ ಒಯ್ಯುತ

ನಾನು ಅಣ್ಣ ಅಕ್ಕ ತಂಗಿ

ಆಟವಾಡುತ

 

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್