ಮಗದಷ್ಟು ನಾನೋ ಕತೆಗಳು

ಮಗದಷ್ಟು ನಾನೋ ಕತೆಗಳು

 ಕೊರತೆ 

ಒಂದು ಕಾಲದಲ್ಲಿ ಅವರಿಬ್ಬರೂ ಕಿತ್ತು ತಿನ್ನುವ ಬಡತನದಿಂದ ಕಾಲ ಕಳೆಯಿತ್ತಿದ್ದರು.. ನಾನು ನಿನಗೆ , ನೀನು ನನಗೆ ಅಂತಿದ್ದ ಅವರ ಮನೆಯಲ್ಲಿ ಈಗ ಕೈ ಕಾಲಿಗೊಂದು ಕೆಲಸದಾಳು.. ತನ್ನ ಹಳೆಯ ನೆನಪುಗಳನ್ನೆಲ್ಲ ಮೆಲುಕು ಹಾಕಿ ಮರುಗುತ್ತಿದ್ದ ಅವನಲ್ಲಿ ಅದೊಮ್ಮೆ ಅವಳು ಕೇಳಿದಳು.. ನಿಮಗೇನಿದೆ ಇಲ್ಲಿ ಕೊರತೆ..? ಆತ ನಿಟ್ಟುಸಿರಿಡುತ್ತಾ ಉತ್ತರಿಸಿದ.. "ನಿನ್ನ ಪ್ರೀತಿ ಮತ್ತು ಅಕ್ಕರೆ" 
 
ಅಮರ
ತನ್ನಿಂದ ಎಲ್ಲವನ್ನೂ ಕಲಿತು ಇನ್ನೂ ಆಶ್ರಮದಲ್ಲೇ ಉಳಿದಿದ್ದ ಶಿಷ್ಯನಲ್ಲಿ ಗುರುಗಳೊಮ್ಮೆ ಕೇಳಿದರು..'ಶಿಷ್ಯಾ.. ನಿನಗೆ ಸಾವಿನ ನಂತರವೂ ಬದುಕಬೇಡವೇ..?' . ಆಶ್ಚರ್ಯಚಕಿತನಾದ ಶಿಷ್ಯ ಗುರುಗಳನ್ನೇ ದಿಟ್ಟಿಸುತ್ತ ಕೇಳಿದ.. "ಅದು ಹೇಗೆ ಸಾದ್ಯ ಗುರುಗಳೇ? " 
ಹೋಗಿ ನೀನು ಕಲಿತ ಪಾಠವನ್ನೆಲ್ಲ ಜನರಿಗೆ ಹಂಚು...ಅದು ನೀನು ಸತ್ತ ನಂತರವೂ ನಿನ್ನನ್ನು ಅವರೊಳಗೆ ಬದುಕಿಸುತ್ತದೆ.. ಗುರುಗಳು ಉತ್ತರಿಸಿದರು.  
 
ಅಮ್ಮ 
ಬಂಜೆಯೆಂದು ಊರವರಿಂದಲೂ ಕುಟುಂಬಿಕರಿಂದಲೂ  ತಿರಸ್ಕೃತಳಾಗಿದ್ದ  ಹೆಣ್ಣೊಬ್ಬಳು ಹೇಳಿದ ಕತೆ.. 
'ಮೂರು ವರ್ಷಗಳ ಹಿಂದೆ ಅನಾಥಶ್ರಮದಿಂದ ಮಗುವನ್ನು ದತ್ತು ತೆಗೆದುಕೊಂಡಿದ್ದೆ..ಆತ ಇಂದು ನನ್ನನ್ನು ''ಅಮ್ಮ"  ಅಂತ ಕರೆದ.
 
ಕ್ತಿ
ಮಂದಿರದ ಮುಂದಿದ್ದ ಭಿಕ್ಷುಕರ ದಯನೀಯತೆ ಕಂಡು ಏನೂ ಕೊಡಲಾಗದ ಬಡವ ಶಿಷ್ಯನೊಬ್ಬ  ತನ್ನ ಗುರುಗಳಲ್ಲಿ ತನ್ನ ಅಸಹಾಯಕತೆಯನ್ನು ತೋಡಿಕೊಂಡ..' ಗುರುಗಳೇ ಭಗವಂತ ಇಷ್ಟು ಒಳ್ಳೆ ಅರೋಗ್ಯ ಕೊಟ್ಟರೂ ನನ್ನಿಂದ ಅವರಿಗೇನು ಸಹಾಯ ಮಾಡಲಾಗಿಲ್ಲ.. .' .   'ಇರುವ ಸಾವಿರದಲ್ಲಿ ಹತ್ತನ್ನು ಭಿಕ್ಷುಕರ ತಟ್ಟೆಗೆ ಎಸೆದು ಭೀಗುವ ಭೀರುಗಳಿಗಿಂತ ಏನೂ ಕೊಡಲಾಗಲಿಲ್ಲವೆಂದು ಕೊರಗುವವನೇ ದೇವರಿಗೆ ಹೆಚ್ಚು ಇಷ್ಟ..ಚಿಂತೆ   ಮಾಡಬೇಡ ..' ಗುರುಗಳು ಅವನನ್ನು ಸಮಾಧಾನಪಡಿಸಿದರು... 
 
ವ್ಯಭಿಚಾರ
ಅವಳು ಎಂದಿನಂತೆ ಸೀರೆ ಉಟ್ಟು ಮಲ್ಲಿಗೆ ತೊಟ್ಟು ಬಸ್ ಸ್ಟ್ಯಾಂಡ್ ಬಳಿ ಗಿರಾಕಿಗಾಗಿ ಕಾಯುತ್ತಿದ್ದಳು. ‘ನನಗೆ ಅವಳನ್ನು ಅನುಭವಿಸಬೇಕು ಅನ್ನಿಸುತ್ತಿದೆ.. ಆದ್ರೆ ವ್ಯಭಿಚಾರ ತಪ್ಪು ಅಂತ ನನ್ನನ್ನು ಹತೋಟಿಗೆ ತರುತ್ತಿದ್ದೇನೆ ..’ ದೂರದಿಂದ ಅವಳನ್ನೇ ದಿಟ್ಟಿಸುತ್ತಾ ಅವನೆಂದ.. ಯಾವಾಗ ನಿನಗೆ ಅನ್ನಿಸಿತೋ ಆಗಲೇ ನೀನು ಅವಳನ್ನು ವ್ಯಭಿಚಾರ ಮಾಡಿ ಆಯಿತು.. ಪಕ್ಕದವ ಹೇಳಿದ.

Comments