ಮಗು

ಮಗು

ಬರಹ

ಮಗು

ಕಣ್ತೆರೆದ ಕ್ಷಣದಿ ಕಥೆ
ಸಾವಿರ ಹೇಳುವ,
ಕಾತರತೆಯ ಮನೆ ಮಾಡಿಹ
ಮತ್ತೆ ಮಿಟುಕಿಸುವ ಕಣ್ಗಳು,
ಅರಳಿದ ತುಟಿಗಳು,
ಸಂಚಲನಗೊಳ್ಳುವ ಚಿಗುರುಗೆನ್ನೆ,
ಕಾಗುಣಿತ ಬರೆವ ಕೆಂಪಾದ
ಹಸಿ ಬೆರಳುಗಳು

ಕಾಡಿ, ಬೇಡಿ, ಅತ್ತು ಅಳಿಸುವ
ಮುಗ್ಧತೆಯ ಮಹಪೂರ
ಎದೆಯ ಭಾವನೆಗಳು ತೊದಲು
ಮಾತಾಗಿ, ಮಾ, ಅಮ್ಮಾ ಅನಿಸಿದ್ದು
ಮತ್ತೆ ನೆನಪಿಸುವುದು
ಅಂಬೆಗಾಲಿಕ್ಕುವ ಆ ದಿನಗಳು
ಸೋಲೊಪ್ಪದ ಭಗಿರಥ!

ಪುಟ್ಟ ತೋಳುಗಳ ಹಿಡಿದೆತ್ತಿ
ಎದೆಗವುಚಿಕೊಂಡರೆ
ಬೇಕಿಲ್ಲ ಮತ್ತೊಂದು ಸ್ವರ್ಗ!
"ಮಗು", ತಾಯ್ತನಕ್ಕೆ ಬೇಕಿನ್ನೇನು
ಸಾರ್ಥಕತೆ?