ಮಗುವಾಗಿರಲೆನಗಾಸೆ....

ಮಗುವಾಗಿರಲೆನಗಾಸೆ....

ಕವನ

ಮಗುವಾಗೇ ಇರಲೆನಗೆ ನೀ ಹರಸಿಬಿಡು ತಾಯೇ

ನಿನ್ನಾ ಪ್ರೀತಿಯ ಹಂದರದಲೇ ನನ್ನನು ಕಾಯೇ!

 

ನಿಜಕೂ ಏನಗೇತಕೂ ಲೋಕದ ಚಿಂತೆಗಳೇ ಬೇಡ

ನಿನ್ನೊಲುಮೆ ಸಾಗರದಲೇ ಮುಳುಗುವೆನು ನೋಡ

ನಿನ್ನ ಸ್ವಚ್ಛ ನಿರ್ಮಲ ಪ್ರೀತಿಯ ನಾನೆಲ್ಲೂ ಕಾಣೆನು

ನಾ ತೇಲಿ ಬಿಡುವೆನು ನಿನ್ನೀ ಜತನದ ಪ್ರೀತಿಯಲೀ!

 

ತಾಯೀ ನಾನೆಂದೂ ಬೆಳೆದು ದೊಡ್ಡವನಾಗಲಾರೆ

ಬಾಲಕನ ಪಟ್ಟವನೇ ಶಾಶ್ವತವಾಗಿ ನೀಡಿಬಿಡೆನೆಗೆ

ಮಗುವಾಗಿ ಮಲಗಿ ಬಿಡುವೆ ನಿನ್ನ ಮಡಿಲಿನೊಳಗೆ

ಕಾಮನೆಗಳ ಕಾಟವಿಲ್ಲ; ಬರೀ ಪ್ರೀತಿಯೇ ಇಲ್ಲೆಲ್ಲಾ!

 

ಓದು ಮದುವೆ ಮಕ್ಕಳ ಜಂಜಾಟವೇ ಎನಗೆ ಬೇಡ

ಈ ಕಡು ಸಂಸಾರ ತಾಪತ್ರಯ ನನಗೇತಕೆ ನೋಡ?

ನಿನ್ನೀ ಅಮೃತಮಯ ಲೋಕದಿ ನಾನಿದ್ದು ಬಿಡುವೆ

ನಿನ್ನ ಕಂದನಾಗೇ ಇರಲು ವರವ ನೀಡೆನಗೆ ತಾಯೇ!

-ಕೆ ನಟರಾಜ್, ಬೆಂಗಳೂರು

ರೂಪದರ್ಶಿ ಮಗು: ಮಾಸ್ಟರ್ ಶ್ರೀಯಾಂಶ್ ಅಂಚನ್, ಬೋಂದೇಲ್

ಚಿತ್ರ್