ಮಗು ಮುತ್ತು

ಮಗು ಮುತ್ತು

ಕವನ

ನೀನೊಂದು ಮುತ್ತು

ನಿನ್ನ ನಗುವೊಂದು ಮುತ್ತು

ಅದರ ನೆನಪು ಹತ್ತು

 

ಆ ನಿನ್ನ ಮುತ್ತು

ಈ ಭಾವ ಹೊತ್ತು

ತನ್ನಲ್ಲೆ ಕೂಡಿಸಿತ್ತು

 

ಒಂದೊಂದು ಮುತ್ತು

ಒಲಿದು ನೀನಿತ್ತು

ಎಂದೆಂದು ಮಾಸದಿತ್ತು

 

ಆ ಎಳೆಯ ಮುತ್ತು

ಮಾಲೆಯೊಳಗಿತ್ತು

ಅದು ನಿನ್ನ ಕೊರಳಿಗಿತ್ತು

 

ನೋಡಿದೆನು ಮುತ್ತು

ಅದು ಹೊಳೆಯುತ್ತಿತ್ತು

ಚಂದ್ರಿಕೆಯ ಹೋಲುತ್ತಿತ್ತು

 

ಮುಖವು ಅರಳಿತ್ತು

ನಗೆಯು ಸೂಸಿತ್ತು

ಸೌಂದರ್ಯ ವರ್ಧಿಸಿತ್ತು.

- ದಿ. ಕೆ. ಸುಶೀಲಾ ಬಾಯಿ ಮರಾಠೆ, ಈದು - ಕಾರ್ಕಳ.

(ಸಂಗ್ರಹ: ಶ್ರೀರಾಮ ದಿವಾಣ) ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್