ಮಗ್ಗಿಗಳ ನೇಕಾರ: ಮೌನೇಶ ಸುತಾರ್
ಮಗ್ಗಿಗಳ ನೇಕಾರ: ಮೌನೇಶ ಸುತಾರ್
‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎನ್ನುವಂತೆ, ಒಂದನೇ ತರಗತಿಯಲ್ಲಿರುವಾಗಲೇ ಗಣಿತದಲ್ಲಿನ ತನ್ನ ಅಗಾಧ ಪ್ರತಿಭೆಯನ್ನು ಹೊರಗೆಡವಿದ ಗದಗ ಜಿಲ್ಲೆ ಶಿರಹಟ್ಟಿ ತಾಲೂಕು ಲಕ್ಷ್ಮೇಶ್ವರದ ಬಾಲಕ ಮೌನೇಶ ಸುತಾರ್.
ಈಗ ೮ನೇ ತರಗತಿಯಲ್ಲಿ ಓದುತ್ತಿರುವ ಈತನ ಪ್ರತಿಭೆಯನ್ನು ಚಿಕ್ಕಂದಿನಲ್ಲೇ ಗುರುತಿಸಿ ಅದನ್ನು ಪೋಷಿಸುತ್ತಿರುವವರು ಇಂಜಿನಿಯರ್ ಪದವೀಧರರಾಗಿದ್ದು ಕೃಷಿಕರಾಗಿರುವ ತಂದೆ ನಾರಾಯಣ, ಬಿಎಸ್ಸಿ ಪದವೀಧರೆಯಾಗಿರುವ ತಾಯಿ ವಿಜಯಾ.
ಗಣಿತ ವಿಷಯವೆಂದರೆ ಹೆದರುವ ಮಕ್ಕಳ ಮಧ್ಯದಲ್ಲಿ ಗಣಿತವನ್ನು ಅಗಾಧವಾಗಿ ಪ್ರೀತಿಸುವ, ಹಗಲು ರಾತ್ರಿ ಅದರಲ್ಲೇ ಮುಳುಗಿರುವ, ಮುಂದೆ ಉನ್ನತ ಸಾಧನೆ ಮಾಡುವ ಕನಸು ಹೊತ್ತ ಈ ಬಾಲಕ ಮಾತೆತ್ತಿದರೆ, ಲೆಕ್ಕ ಮಗ್ಗಿಗಳ ಬಗ್ಗೆ ಹರಳು ಹುರಿದಂತೆ ಮಾತನಾಡುತ್ತಾನೆ.
ಅವನು ಚಿಕ್ಕವನಿರುವಾಗ ಅವನ ಗಣಿತದ ಒಲವನ್ನು ಗುರುತಿಸಿದ ತಾಯಿ ಅವನಿಗೆ ಕೆಲವೊಂದು ಗಣಿತದ ಪುಸ್ತಕಗಳನ್ನು ತಂದು ಕೊಟ್ಟಿದ್ದು ಬಿಟ್ಟರೇ, ಇದಕ್ಕೆಂದೇ ವಿಶೇಷ ತರಬೇತಿಯನ್ನು ನೀಡಿಲ್ಲ. ಆದರೆ ಇವನ ಆಲೋಚನೆಯಲ್ಲಾ ಗಣಿತದ ಸುತ್ತ ಸುತ್ತುತ್ತಿರುತ್ತದೆ.
ಸಾವಿರ ಮಗ್ಗಿಗಳ ಸರದಾರನಾದ ಮೌನೇಶ ತನ್ನದೇ ಆದ ವಿಧಾನಗಳನ್ನು ಬಳಸಿ ಅನೇಕ ರೀತಿಯ ಲೆಕ್ಕಗಳನ್ನು ಸುಲಭವಾಗಿ ಮಾಡಿ ತೋರಿಸುತ್ತಾನೆ. ದೊಡ್ಡವರೇ ಮಾಡಲು ಪರದಾಡುವ ಕೆಲವೊಂದು ಲೆಕ್ಕಗಳನ್ನು ಕ್ಷಣ ಮಾತ್ರದಲ್ಲಿ ಮಾಡಿ ಮುಗಿಸುತ್ತಾನೆ. ಶಾಲೆಯಲ್ಲೂ ಸಹ ಶಿಕ್ಷಕರು ಇವನ ಪ್ರತಿಭೆಯನ್ನು ಗುರುತಿಸಿ ಇವನ ಸುಲಭ ವಿಧಾನಗಳನ್ನು ಕಂಡು ಬೆನ್ನುತಟ್ಟಿದ್ದಾರೆ.
ಗಣಿತ ಕಷ್ಟವಲ್ಲ, ಅದು ಅತೀ ಸುಲಭವೆಂದು ಹಿರಿಯರಂತೆ ಲೆಕ್ಕ ಮಾಡಿ ತೋರಿಸುವ ಈ ಪೋರ ಒಂದು, ಒಂದೂವರೆ, ಎರಡೂವರೆ, ಎರಡುಕಾಲು, ನೂರುಕಾಲು ಹೀಗೆ ಮಗ್ಗಿಯ ಇಂಚಿಂಚೂ ಬರೆಯುವ ಈತ ಅವುಗಳನ್ನು ಉಲ್ಟಾ ಸೀದಾ ಗುಣಿಸಿ ಒಂದೇ ಉತ್ತರ ಬರುವ ಹಾಗೇ ಮಾಡುತ್ತಾನೆ. ಅದೇ ರೀತಿ ಹಲವಾರು ಮಗ್ಗಿಗಳಿಗೆ ಒಂದೇ ಉತ್ತರ ನೀಡುವ ಜಾಣ್ಮೆ ಈತನದು.
ಮೂರನೇ ತರಗತಿಯಲ್ಲಿರುವಾಗ, 2x1/4, 2x1/2, 2x3/4, ಹೀಗೆ ಸಣ್ಣ ವಗ೯ ಸಂಖ್ಯೆಗಳ ಮಗ್ಗಿ ಹೇಳುತ್ತಿದ್ದ, ಆದರೀಗ 2x1/8, 2(1/4+1/8), 2(3/4+1/8), 2x3/4 ಹೀಗೆ ಸಂಕೀಣ೯ ವಗ೯ಗಳ ಮಗ್ಗಿಗಳನ್ನು ಸಲೀಸಾಗಿ ಮಾಡುತ್ತಾನೆ.
ಸಾಮ್ಯತೆಯಿರುವ ಮಗ್ಗಿಗಳನ್ನು ಪಟ್ಟಿ ಮಾಡುತ್ತಾನೆ. ಉದಾ:
12x1=12, 24x1/2=12, 6x2=12,
12x2=24, 24x1=24, 6x4=24,
12x4=48, 24x2=48, 6x8=48.......
ಹೀಗೆ ಅನೇಕ ಮಗ್ಗಿಗಳನ್ನು ಬರೆಯುವುದರೊಂದಿಗೆ, ಬೇರೆ ಬೇರೆ ಮಗ್ಗಿಗಳನ್ನು ಬಳಸಿ ಒಂದೇ ಗುಣಲಬ್ಧ ಪಡೆಯುವ ಲೆಕ್ಕಗಳನ್ನು ಮಾಡುತ್ತಾನೆ. ಉದಾ:
10.5x2=21 84x1=84 4x10.5=42 3/4x64=48
3.5x6=21 2x42=84 6x7=42 1/4x192=48
6x3.5=21 42x2=84 7x6=42 1/8x384=48
1.6, 0.16, 1.25, 1.5, 1.75, 2.25, 2.5, 1/4, 1/2 ಮಗ್ಗಿಗಳನ್ನು ಬರೆಯುತ್ತಾನೆ. x4 ಮಾಡಿ ಸರಣಿ ಸಂಖ್ಯೆ ಕಂಡು ಹಿಡಿಯುತ್ತಾನೆ. ಉದಾ: 1x4=4, 1.25x4=5, 1.5x4=6, 1.75x4=7....... ಅದೇ ರೀತಿ x8 ಮಾಡಿ ಸರಣಿ ಸಂಖ್ಯೆ ಮತ್ತು ದಶಮಾಂಶ ಸಂಖ್ಯೆಗಳನ್ನು ಕಂಡು ಹಿಡಿಯುತ್ತಾನೆ. ತಿರುವು ಮುರುವು ಅಂಕಿ ಬರೆದು ಮತ್ತೊಂದು ಮಗ್ಗಿ ಈ ರೀತಿಯಾಗಿದೆ.
16.5x2=33 11x2=22
27.5x2=55 22x2=44
38.5x2=77 33x2=66
49.5x2=99 44x2=88.........280 ಅಂಕೆಯನ್ನು 100ರವರೆಗೆ ಗುಣಿಸಿ 800 ಸಾಲುಗಳ ಮಗ್ಗಿಯನ್ನು ಬರೆದಿದ್ದಾನೆ. ಉದಾ: 280x1/8=35, 280x1/4=70, 280x993/4=27930, 280x100=28000.
ಹೀಗೆ ಅಗಾಧವಾದ ಪ್ರತಿಭೆಯನ್ನು ಹೊಂದಿರುವ ಈತನು ಇಂಗ್ಲೆಂಡ್ ಕೆಂಬ್ರಿಡ್ಜ ವಿಶ್ವವಿದ್ಯಾಲಯದಲ್ಲಿ ಪ್ಲುಯಿಡ್ ಮೆಕಾನಿಕ್ ನಲ್ಲಿ ಪ್ರಾಧ್ಯಾಪಕರಾಗಿರುವ ಪ್ರೋ. ಟಿ.ಜೆ ಪೆಡ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರೋ. ಭೂಸನೂರಮಠ ಹಾಗೂ ಅನೇಕ ಗಣ್ಯರ ಮೆಚ್ಚಿಗೆಗೆ ಪಾತ್ರನಾಗಿದ್ದಾನೆ. ಹಲವಾರು ಸ್ವಧೆ೯ಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದು, ಜಿಲ್ಲಾ ಶಿಕ್ಷಣ ಉಪನಿರ್ದೇಶಕರಿಂದ ‘ಗಣಿತ ಲೋಕದ ಧ್ರುವತಾರೆ’ ಎಂಬ ಬಿರುದು ಪಡೆದಿರುವ ಬಾಲಕನ ಉನ್ನತ ಮಟ್ಟದ ಸಾಧನೆಗೆ ಇನ್ನೂ ಹೆಚ್ಚಿನ ತರಬೇತಿ ಮತ್ತು ಸರ್ಕಾರದ ಪೋತ್ಸಾಹ ಅಗತ್ಯವಾಗಿದೆ.