ಮಜ್ಜಿಗೆ ದೋಸೆ

ಮಜ್ಜಿಗೆ ದೋಸೆ

ಬೇಕಿರುವ ಸಾಮಗ್ರಿ

ಬೆಳ್ತಿಗೆ ಅಕ್ಕಿ ೪ ಕಪ್, ಅವಲಕ್ಕಿ ೧ ಕಪ್, ಬೆಳ್ತಿಗೆ ಅಕ್ಕಿನ ಅನ್ನ ಅರ್ಧ ಕಪ್, ಮಜ್ಜಿಗೆ ೨ ಕಪ್, ರುಚಿಗೆ ತಕ್ಕಷ್ಟು ಉಪ್ಪು. ಸ್ವಲ್ಪ ಎಣ್ಣೆ.

 

ತಯಾರಿಸುವ ವಿಧಾನ

ಬೆಳ್ತಿಗೆ ಅಕ್ಕಿ ನೆನೆಸಿದ್ದು, ಅವಲಕ್ಕಿ, ಬೆಳ್ತಿಗೆ ಅಕ್ಕಿಯ ಅನ್ನ ನಯವಾಗಿ ರುಬ್ಬಿ, ಅದಕ್ಕೆ ಮಜ್ಜಿಗೆ, ಉಪ್ಪು ಸೇರಿಸಿ ಮುನ್ನಾ ದಿನವೇ ಇಡಬೇಕು.  ಬೆಳಿಗ್ಗೆ ಚೆನ್ನಾಗಿ ಮಿಶ್ರ ಮಾಡಿ ಕಾದ ಕಾವಲಿ ಅಥವಾ ತವಾದಲ್ಲಿ ಎರೆದು, ಬೆಂದಾಗ, ಬೇಕಾದರೆ ಕವುಚಿ ಹಾಕಿ ಬೇಯಿಸಬೇಕು. ತುಪ್ಪ, ಬೆಣ್ಣೆ, ತೆಂಗಿನೆಣ್ಣೆ ಹಾಕಿ ತಿನ್ನಲು ಬಹಳ ರುಚಿ. ಸಾಂಬಾರ್, ಪಲ್ಯ, ಚಟ್ನಿ ಜೊತೆಗೂ ಉಪಯೋಗಿಸಬಹುದು.

-ರತ್ನಾ. ಕೆ.ಭಟ್, ತಲಂಜೇರಿ