ಮಡದಿಯು ಮುನಿದಿರೆ...
ಕವನ
ಮುನಿದು ಪತ್ನಿಯು ದೂರವುಳಿಯಲು
ಮುನಿಯ ತರಹದ ಬಾಳಿದು
ಮುನಿಸು ಕಳೆಯುವ ಚಿಂತೆ ಮನದೊಳು
ಮನಸಿಗೇತಕೊ ಹೊಳೆಯದು
ಮರಳ ಮೇಲ್ಗಡೆ ನಡೆದು ಬಳಲಲು
ಮರದ ನೆರಳಲಿ ಆಶ್ರಯ
ಮರಳಿ ಬರುತಿರೆ ಹೂವ ಪರಿಮಳ
ಮರುಳುಗೊಳಿಸುವ ವಿಸ್ಮಯ
ಮಾರುಕಟ್ಟೆಯ ಒಳಗೆ ನಡೆದಿರೆ
ಮಾರುತಿದ್ದರು ಮಲ್ಲಿಗೆ
ಮಾರುಹೋದೆನು ಕೊಂಡೆನಾಗಲೆ
ಮಾರು ಹೂವನು ಮಡದಿಗೆ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್