ಮಡದಿಯ ಮುನಿಸು

ಮಡದಿಯ ಮುನಿಸು

ಕವನ

ಒಂದೊಂದು ಬಾರಿ ಓಡುವೆ ಏಕೆ

ಮತ್ತೊಂದು  ಬಾರಿ ಮುನಿಸು ಏಕೆ

ನನ್ನಯ ಪ್ರೀತೀಲಿ  ಸಂದೇಹವೇಕೆ

ವಿರಹ ಗೀತೆ  ನಮಗೆ ಬೇಕೆ?

ಓ  ಪ್ರಿಯೆ, ನಿನಗಿದು  ಸರಿಯೇ?

 

ಒಮ್ಮೆ ತಿರುಗಿ ನೋಡು ಗೆಳತಿ

ಕಾಣುವುದು ನನ್ನೆದೆಯೊಳಗಿನ ನಿನ್ನ ಮೂರುತಿ

ಸಾವಿರ ಜನುಮಕು ನೀನೆ ಒಡತಿ

ಮನ್ನಿಸು ಮನ್ನಿಸು ಇದೊಂದು ಸರತಿ

ಓ  ಸೊಗಸು ಗಾತಿ ಹೀಗೇಕೆ ನೀ ಮಾಡುತಿ?

 

ಕಂಡೆ  ನಾನು  ಸಾವಿರ  ಕನಸು

ಒಮ್ಮೆ ನೀನು  ನನ್ನ  ಕ್ಷಮಿಸು 

ಬಣ್ಣದ  ತೊಟ್ಟಿಲು  ತೂಗುವ ಮನಸ್ಸು 

ಬಂದು  ನೀನು ನನ್ನ  ರಮಿಸು

ಓ ನಲ್ಲೆ  ನಿನಗೆ ಏಕೆ ಸಲ್ಲದ ಮುನಿಸು?

 

ಬಂದು  ಹೋಗು ಸ್ವಲ್ಪ

ಹೇಳದೆ  ಯಾವುದೇ  ನೆಪ

ನಾ ಬರಲೇಕೆ  ನಿನ್ನಾ ಆಕ್ಷೇಪ

ಬರಲು  ನಾನು  ನಿನ್ನಾ ಸಮೀಪ

ಓ ಸತಿಯೇ  ನೀ ಮಾಡುವೆ ಏಕೆ  ಕಾಲಕ್ಷೇಪ?

 

-ಎಸ್. ನಾಗರತ್ನ ಚಿತ್ರದುರ್ಗ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್