ಮಡಿಲಲ್ಲಿ ಮಗುವಾಗಿ...

ಮಡಿಲಲ್ಲಿ ಮಗುವಾಗಿ...

ಕವನ

ರಮಣಿ ಪ್ರೀತಿಯ ಸವಿಯ ಅರಿಯೆನು

ಸುಮದ ಕಂಪಿಗೆ ಸೋತಿಹೆ

ಅಮರವಾಗುತ ಜಗದ ನಡುವಲಿ

ಸಮರ ಶಾಂತಿಯ ಬಯಸಿಹೆ..

 

ಹಸಿರ ಲತೆಯದು ಸನಿಹ ಸೋಕಿದೆ 

ಉಸಿರ ಬೆಸೆದಿದೆ ಬಂಧನ 

ಒಲವ ಧಾರೆಯೆ ಬಳಿಗೆ ಕರೆಯುತ

ಸೆಳೆತ ನಿನ್ನಲಿ ಅಡಗಿದೆ..

 

ಹೂವು ನಾಚಿದೆ ಬಿರಿದು ಬಾಡಿದೆ

ನೋವು ಎಲ್ಲಿಗೊ ಸಾಗಿದೆ

ಒಡಲು ತುಂಬಿದೆ ಪ್ರೇಮ ಪ್ರಣಯವು

ಮಡಿಲು ಬಳಸುತ ಮಲಗುವೆ..

 

ಸರಿಸು ಪರದೆಯ ಶಶಿಯ ಬೆಳಕಿದೆ

ಹರಿಸು ಪ್ರೇಮದ ಸುಧೆಗಳ

ಇರಿಸು ಮುನಿಸಿನ ಮನಸ ನಡುವೆಯೆ

ಸುರಿಸು ಮುತ್ತಿನ ಮಳೆಹನಿ..

 

ತಾರೆ ಚಂದಿರ ಒಳಗೆ ಇಣುಕಲಿ

ಸೇರು ತನುಮನ ತಣಿಸಲು

ನೂರು ಚಿಂತೆಯ ಬದಿಗೆ ಸರಿಸುತ

ಬೀರು ಸುಖದಾ ಪರಿಮಳ..

 

-ಶಮೀರ್ ನಂದಿಬೆಟ್ಟ

 ಚಿತ್ರ ಕೃಪೆ: ಇಂಟರ್ನೆಟ್ ತಾಣ 

 

ಚಿತ್ರ್