ಮಣ್ಣಿನಲಿ ಮಣ್ಣಾಗಿ ಹುಟ್ಟಿದವರು

ಮಣ್ಣಿನಲಿ ಮಣ್ಣಾಗಿ ಹುಟ್ಟಿದವರು

ಕವನ

 

ನಾವು ಮಣ್ಣಿನಲಿ ಮಣ್ಣಾಗಿ

ಹುಟ್ಟಿದವರು

ಅವರಿವರಿಂದ ತುಳಿಸಿಕೊಂಡು

ಥೂ ಅನಿಸಿಕೊಂಡು

ಹೊಟ್ಟೆಕಿಚ್ಚನು ಜಗಕೆ ಹಚ್ಚುವತೆರದಲಿ

ನೋಡು ನೋಡುತ್ತಲೇ

ಮೇಲೆದ್ದು ಬಂದವರು

 

ಎಲ್ಲ ಮೇರೆಗಳನ್ನು ಮೀರಿ

ಬಿಗಿಹಿಡಿದು ಕೆಳಸೆಳೆವ

ಎಲ್ಲ ಬಂಧಗಳನ್ನು ತೂರಿ

ಬದುಕು ಕಟ್ಟಿಕೊಂಡವರು

ಬಾನಿನೆತ್ತರಕೆ ಬೆಳೆಯ

ಹೊರಟವರು.

 

ನಾವು ಮಣ್ಣಿನಲಿ ಮಣ್ಣಾಗಿ

ಹುಟ್ಟಿದವರು

ಅವರಿವರು ಉಂಡು ಹುಟ್ಟು

ಬಿಸುಟಿದ್ದೆಲ್ಲ  ತಿಂದು ಅರಗಿಸಿಕೊಂದವರು

ಇಟ್ಟ ಎಡೆಯಲ್ಲಿರದೆ, ಹೋರಾಟದ ಕಿಚ್ಚಿನಲ್ಲಿ

ನಮ್ಮ ನಾಳೆಗಳ ನಾವೇ, ನಮ್ಮ ಕೈಯಾರ

ಕೆತ್ತಿಕೊಂದವರು.

 

ಉರಿವ ಸೂರ್ಯನ  ಉರಿಯು

ಕೋರೆವ ರಾತ್ರಿಯ ಚಳಿಯು

ಭೋರ್ಗರೆವ ಮುಸಳಧಾರೆಯು

ಹೊಸಕಿ ಹಾಕದ, ಆತ್ಮಸ್ಥೈರ್ಯವ ಹೊತ್ತು

ಬಾನ ಚುಕ್ಕಿಗಳಿಗೆ ಮುತ್ತುಗರೆಯ

ಹೊರಟವರು.

 

ನಾವು ಮಣ್ಣಿನಲಿ ಮಣ್ಣಾಗಿ

ಹುಟ್ಟಿದವರು

ಮಣ್ಣಿನಲ್ಲೇ ಬೇರಿತ್ತು, ಪಾತಳಕ್ಕಿಳಿಸಿ

ಎಲ್ಲ ಸತ್ವವನು ಹೀರಿ

ವಿಶಾಲ ಹಾಲುಹಾದಿಯ ತುಂಬಾ

ತುಂಬ ಹೊರಟವರು

 

-ಜಯಪ್ರಕಾಶ್ ಶಿವಕವಿ 

Comments

Submitted by venkatb83 Tue, 12/04/2012 - 17:27

ಕವನ ಸೂಪರ್ - ನೊಂದ ಬೆಂದ ತುಳಿತಕ್ಕೊಳಗಾದ ಆಗಿದ್ಯು ಬಾಳು ಕಟ್ಟಿಕೊಂಡವರ ಜನರ ಮನದಾಳದ - ಜೀವ ಭಾವ ಅನುಭಾವ ಹೊರಹೊಮ್ಮಿದೆ...
ನನಗೆ ಸಿದ್ಧಲಿಂಗಯ್ಯ - ಕುಂ ವೀ ಅವರ ಬರಹಗಳನ್ನು ನೆನಪಿಸಿತು...

ಶುಭವಾಗಲಿ.

\|