ಮಣ್ಣ ಮಡಿಲಲ್ಲಿ

ಮಣ್ಣ ಮಡಿಲಲ್ಲಿ

ಪುಸ್ತಕದ ಲೇಖಕ/ಕವಿಯ ಹೆಸರು
ಕೆ.ಸಿ.ಶಶಿಧರ್
ಪ್ರಕಾಶಕರು
ಅರೀಡ್ಸ್, ಶರಾವತಿ ನಗರ, ಶಿವಮೊಗ್ಗ.(ಮುದ್ರಣ: ೨೦೧೭)
ಪುಸ್ತಕದ ಬೆಲೆ
Rs. 200.00

ಡಾ.ಕೆ.ಸಿ.ಶಶಿಧರ್ ಇವರು ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ , ಶಿವಮೊಗ್ಗ ಇಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಶಿವಮೊಗ್ಗ ವಿಶ್ವ ವಿದ್ಯಾಲಯವು ನೇಗಿಲ ಮಿಡಿತ ಎನ್ನುವ ಕೃಷಿ ಮಾಸ ಪತ್ರಿಕೆಯನ್ನು ಹೊರ ತಂದಾಗ ಪ್ರಥಮ ಸಂಪಾದಕರಾಗಿದ್ದರು. ‘ಮಣ್ಣ ಮಡಿಲಲ್ಲಿ' ಎನ್ನುವ ಅಂಕಣವನ್ನು ಬಹುಕಾಲ ಕೆ.ಸಿ.ಶಶಿಧರ್ ಇವರು ಬರೆಯುತ್ತಾ ಬಂದರು. ಇದು ಬಹಳಷ್ಟು ಕೃಷಿಕರ ಆಸಕ್ತಿಯನ್ನೂ ಕುದುರಿಸಿತ್ತು. 

ಸುಮಾರು ೨೫ ಲೇಖನಗಳನ್ನು ಈ ಪುಸ್ತಕವು ಅಡಕ ಗೊಂಡಿದೆ. ಪೂರ್ತಿ ಪುಸ್ತಕವು ಹೊಳಪಿನ ಕಾಗದದೊಂದಿಗೆ ಛಾಯಾಚಿತ್ರಗಳೊಂದಿಗೆ ವರ್ಣರಂಜಿತವಾಗಿದೆ. ಸನ್ನಿ ಡಿ'ಸೋಜಾ, ಅವಿನಾಶ್, ಮಹದೇವ ಸ್ವಾಮಿಯವರಂಥಹ ಹಲವಾರು ಉತ್ಸಾಹಿ ಕೃಷಿಕರ ಪರಿಚಯ, ಹಲವಾರು ಬೆಳೆಗಳ ಮಾಹಿತಿ, ಸೋಲಾರ್, ಎಲ್ ಇ ಡಿ ಬಗ್ಗೆ ವಿವರವಾದ ಮಾಹಿತಿಯನ್ನು ಈ ಪುಸ್ತಕ ಹೊಂದಿದೆ. ಲೇಖನದ ಸತ್ಯಕ್ಕೆ ಅಪಚಾರವಾಗದಂತೆ ಇವರೇ ಸ್ವತಃ ಸಂಬಂಧ ಪಟ್ಟ ಕ್ಷೇತ್ರಗಳಿಗೆ ಭೇಟಿ ನೀಡಿ, ರೈತರನ್ನು ಸಂದರ್ಶಿಸಿ ಲೇಖನವನ್ನು ತಯಾರಿಸುತ್ತಿದ್ದರು.

ಡಾ.ಕೆ.ಸಿ.ಶಶಿಧರ್ ಅವರದ್ದು ಬಹುಮುಖ ವ್ಯಕ್ತಿತ್ವ. ಒಣ ಬೇಸಾಯ, ಮಾನವ ಸಂಪನ್ಮೂಲ, ಕೃಷಿ ಯಾಂತ್ರೀಕರಣ , ನೀರಾವರಿ ತಂತ್ರಜ್ಞಾನದ ಬಗ್ಗೆ ಸ್ವತಃ ಪರಿಣತಿಯನ್ನು ಹೊಂದಿದ್ದಾರೆ. ಸುಮಾರು ೧೦೦ ಪುಟಗಳನ್ನು ಹೊಂದಿರುವ ಈ ಪುಸ್ತಕಕ್ಕೆ ಕೃಷಿ ತಜ್ಞರಾದ ಕೆ.ಹೆಚ್. ರಾಘವೇಂದ್ರ ಇವರು ಮುನ್ನುಡಿಯನ್ನೂ, ಕೃಷಿ ವಿಜ್ಞಾನಿಯಾದ ಡಾ.ಎ.ಎಸ್. ಕುಮಾರ ಸ್ವಾಮಿಯವರು ಲೇಖಕರ ಬಗ್ಗೆ ಮಾಹಿತಿಯನ್ನೂ ಬರೆದಿದ್ದಾರೆ.