ಮತಾಂತರ ಹೇಗೆ? ಏನು? ಏಕೆ? ಮತ್ತು ಅದಕ್ಕೆ ಪರಿಹಾರ.

ಮತಾಂತರ ಹೇಗೆ? ಏನು? ಏಕೆ? ಮತ್ತು ಅದಕ್ಕೆ ಪರಿಹಾರ.

Comments

ಬರಹ

ಪ್ರಿಯ ಸ್ನೇಹಿತ -ಸ್ನೇಹಿತೆಯರೇ

ಯಾರೇ ಕೂಗಾಡಲಿ ಯಾರೇ/ಊರೇ ಹೋರಾಡಲಿ ನನ್ನ ನೆಮ್ಮದಿಗೆ ಭಂಗವಿಲ್ಲ, .......... ಅಂತ ನಾವೆಲ್ಲಾ ಹಿಂದೂಗಳು ಮಲಗುವ ಹಾಗಿಲ್ಲ, ಅಪಾಯದ ಘಂಟೆ ಮೊಳಗುತ್ತಿದೆ ಏಳಿ ಎದ್ದೇಳಿ, ಜಾಗೃತರಾಗಿ.

ಈಗೀಗ ಮತಾಂತರ ಜಾಸ್ತಿಯಾಗುತ್ತಿದೆ, ಅಸಂಖ್ಯಾತ ಹಿಂದೂಗಳು, ಮುಸ್ಲಿಮರೂ ಸಹಾ, ಬುಡಕಟ್ಟು , ಹರಿಜನ,ಗಿರಿಜನ ಹೀಗೆ ಎಲ್ಲರೂ ಕ್ರಿಸ್ತಿಯನ್ ಮತ ಪ್ರಚಾರಕರ ಮಾತು-ಮೋಡಿ, ಆಮಿಷಗಳಿಗೆ ಒಳಗಾಗಿ ಸ್ವ ಧರ್ಮ ಬಿಟ್ಟು ಕ್ರಿಶ್ಚಿಯನ್ ಆಗುತ್ತಿದ್ದರೆ, ಹೀಗಾದ್ರೆ ನಮ್ಮ ಮುಂದಿನ ಹಿಂದೂ ಪೀಳಿಗೆಯ ಗತಿ ಏನು? ಹಿಂದೂ ಧರ್ಮ ಅವನತಿ ಅಂಚಿಗೆ ಬರುತ್ತಿದೆ, ಹಿಂದುಗಳೆಲ್ಲ ಜಾಗೃತರಾಗಬೇಕು, ಹಾಗೆ ಹೀಗೆ ಅಂತೆಲ್ಲ ಈ ಮೇಲಿನ ರೀತಿಯ ಸುದ್ಧಿ ದಿನ ನಿತ್ಯ ಪತ್ರಿಕೆ, ದೃಶ್ಯ ಮಾಧ್ಯಮದಲ್ಲಿ ಖಂಡಿತ ನಾವೆಲ್ಲಾ ನೋಡಿ, ಕೇಳಿರುತ್ತೇವೆ.

ಹೌದಲ್ಲ ಇದೆಲ್ಲ ನಿಜ , ಇದು ದಿನ ನಿತ್ಯ ಅಲ್ಲಿ- ಇಲ್ಲಿ ನಡೆಯುತ್ತಿದೆ, ಅಯ್ಯೋ ಹೀಗಾಗಬಾರದು , ಹೀಗಾದರೆ ಹಿಂದೂ ಧರ್ಮದ ಕಥೆ ಏನು , ಯಾರು ಹಿಂದೂ ಧರ್ಮ ಉಳಿಸಬೇಕು, ಯಾರೋ ಒಬ್ಬರು ವಿವೇಕಾನಂದ ತರಹದ ವ್ಯಕ್ತಿಗಳು ಜನ್ಮ ತಾಳಿ ಮತ್ತೆ ಹಿಂದೂ ಧರ್ಮ ಪತಾಕೆ ಆರಿಸುತ್ತಾರೆ, ಅದು ನಮ್ಮ ಕೆಲಸ ಲ್ಲ, ನಾನೊಬ್ಬನೇ ಏನು ಮಾಡಲು ಆಗಲ್ಲ, ಇತ್ತ್ಯಾದಿ , ಇತ್ತ್ಯಾದಿ,ಯೋಚಿಸಿ ನಾವೆಲ್ಲಾ (ಹಿಂದೂಗಳು)ಸುಮ್ಮನಾಗಿಬಿಡುತ್ತೇವೆ.
ಹಾಗಾದರೆ ಇದಕೆಲ್ಲ(ಮತಾಂತರ) ಕಾರಣವೇನು? ಇದಕ್ಕೆ ನಮ್ಮ, ಮಠ, ಮಂದಿರ,ಶಾಲೆ, ಊರಿನ ಸಿರಿವಂತ ಜನರು, ಮೇಲ್ಜಾತಿಯವರು, ಹೀಗೆ ಯಾರ್ಯಾರೋ ಕರಣ ಅಂತ ಅವರನ್ನೆಲ್ಲ ಹೀಯಾಳಿಸಿ, ದೂಷಿಸಿ ಬರೆದು ಮುಗಿಸಿಯಾಯ್ತು. ಹಾಗಾದರೆ ಈ ಮತಾನ್ತರಕ್ಕೆಲ ಇವರೇ ಕಾರಣರೇ?....

ಹೌದು ಖಂಡಿತ ಹೌದು ಅಂತ ಹೇಳಬಹುದು..
ಒಂದು ಹಳ್ಳಿಯ ಜೀವನ ಕ್ರಮದಿಂದಲೇ ಇದನ್ನು ಶುರು ಮಾಡುವುದಾದರೆ,
ತಾತ ಮುತ್ತರ ಕಾಲದಿಂದಲೂ ವರ್ಣಾಶ್ರಮದ ಪ್ರಕಾರ ಅವರವರ ಜಾತಿಗನುಗುಣವಾಗಿ ಒಂದೊಂದು ಕುಲ ಕಸುಬು ಮಾಡುತ್ತಾ ಮೇಲ್ವರ್ಗದವರ ಸೇವೆ ಮಾಡುತ್ತಿದ್ದ ಕೆಳ ಜಾತಿಗಳವರು, ಎಸ್ಟೋ ಮೂಲ ಸೌಲಭ್ಯಗಳಿಂದ ವಂಚಿತರಾಗಿ, ಬದುಕುತ್ತಿದ್ದುದು ಸತ್ಯ.

ಇನ್ನು ಅವರಿಗೆ(ಕೆಳ ಜಾತಿಯವರಿಗೆ) ಮಠ, ಮಂದಿರ, ಹಬ್ಬ ಜಾತ್ರೆ, ಒಳ್ಳೇದು ಕೆಟ್ಟದ್ದು , ಶಾಲೆ, ಊರು ಕೇರಿಯಿಂದ , ದೂರವಿತ್ತು ಅವರು ಕತ್ತಲೆಯಲ್ಲೇ ಇರುವಂತೆ ಮಾಡಿದ್ದು ಸಹಾ ಉಂಟು.
ಎಲ್ಲೋ ಒಬ್ಬರು ಅಲ್ಪ ಸ್ವಲ್ಪ ವಿದ್ಯೆ ಕಲಿತು ಬುದ್ಧಿವಂತರು ಆಗಹೊರಟರೂ ಸಹಜವಾಗಿ ಬಂದ ಬಡತನ ಕಾರಣದಿಂದ ವಿದ್ಯೆಗೆ ಗುಡ್ ಬೈ ಹೇಳಿ ತಮ್ಮ ತಮ್ಮ ಕುಲ ಕಸುಬನ್ನೇ ಅವಲಂಬಿಸಬೇಕಾಯ್ತು..
ಹೀಗೆ ಸಹಸ್ರಾರು ವರ್ಷಗಳಿಂದ ಮೇಲ್ವರ್ಗದವರ ದಬ್ಬಾಳಿಕೆಯನ್ನು ಮತ್ತು ಸಮಾಜಿಕ , ಶೈಕ್ಚನಿಕವಾಗಿ ನಿರಶ್ರೀತ್ರಾಗಿದ್ದ ಹಾಗೂ ತಮ್ಮ ಹೀನ ಬದುಕಿನ ಬಗ್ಗೆ , ಮೇಲ್ವರ್ಗದವರ ಬಗ್ಗೆ ರೋಸಿ ಹೋಗಿದ್ದ ,ಕೆಳ ವರ್ಗದ ಕೆಲ ಜನರಿಗೆ ,ಜಗತ್ತಿನಲ್ಲೇ ಶ್ರೇಷ್ಠ ಧರ್ಮ ಕ್ರೈಸ್ತ ಧರ್ಮ, ಇಲ್ಲಿ ಯಾರು ಮೇಲಲ್ಲ ಯಾರು ಕೀಳಲ್ಲ ಎಲ್ಲರೂ ಸಮಾನರೂ ಎಂದು ಹೇಳಿ, ವಿದ್ಯೆ, ಉದ್ಯೋಗ, ಸಮಾನತೆ, ಕೊಡುವ ಭರವಸೆ ನೀಡುವ, ಕೊನೆಗೆ ಮತಾನ್ತರವನ್ನೇ ಮಾಡಿಸುವ ಕ್ರೈಸ್ತ ಮೆಸಿನರಿಗಳ, ಪಾದ್ರಿಗಳ, ಪ್ರಚಾರಕರ ಮರುಳು ಮಾತುಗಳು 'ಅಪ್ಯಾಯ ಮಾನವಾಗಿ' ಕಂಡದ್ದರಲ್ಲಿ ಅಚ್ಚರಿಯೇನಿಲ್ಲ.

ಇನ್ನು ಬ್ರಿಟಿಷರ /ರಾಜರ ಆಳ್ವಿಕೆಯ ಕಾಲದಲ್ಲೇ ಹೊರ ದೇಶದಿಂದ ಬಂದು ರಾಜನ ಆಶ್ರಯದಲ್ಲಿ ವ್ಯಾಪಾರ, ನಂತರ ಶಾಲೆ, ಚರ್ಚ್,ಆಸ್ಪತ್ರೆ ಶುರು ಮಾಡಿ ಅಲ್ಲಿ ಕೆಲವರಿಗೆ ಶಿಕ್ಷಣ ನೀಡಿ, ಆರೈಕೆ ಮಾಡಿ ನೆಲೆಯೂರಿದ ಕ್ರೈಸ್ತ ಮೆಸಿನರಿಗಳು, ಕೊನೆಗೆ ದೇಶವ್ಯಾಪಿ ವ್ಯಾಪಿಸಿ ಸುತ್ತ ಮುತ್ತಲ ಜನರಿಗೆ ಶಿಕ್ಷಣ , ಅರೋಗ್ಯ ಆರೈಕೆಯನ್ನು, ಅವರಿಗಾಗಿ ಪ್ರಾರ್ಥನೆಯನ್ನು ಏರ್ಪಡಿಸಿ, ಧರ್ಮ ಬೊದನೆ ಮಾಡುತ್ತಾ ಸಹಜವಾಗಿದ್ದರೂ, ಕಾಲಕ್ರಮೇಣ, ಇಲ್ಲಿಯ ಹಿಂದೂ ಧರ್ಮವನೆ ತೆಗಳುತ್ತ, ಕೆಳ ವರ್ಗದ ಮೇಲುವರ್ಗದ ಜನರ ಬಗೆಗಿನ ದ್ವೇಷ, ರೋಷ, ಅಸಹಾಯಕತೆಯನ್ನೇ ದುರುಪಯೋಗಮಾಡಿಕೊಂಡು, ಬಲವಂತವಾಗಿ, ಸಹಾ ಕ್ರೈಸ್ತೀಕರಣ್ ಮಾಡಲಾರಂಬಿಸಿದರು, ಇದಕ್ಕೆ ಬ್ರಿಟಿಷರ ಕಾಲದಲ್ಲಂತೂ ಯಾರ ತಡೆಯೂ ಇರಲಿಲ್ಲ, ಹಿಂದುಗಳಲ್ಲಿನ ಸಹಜ ಒಡಕಿನ ಲಾಭ ಪಡೆದು, ಕ್ರೈಸ್ತ ಧರ್ಮವನ್ನು ಬಲವಾಗಿ ಹರಡಿ ಬಿಟ್ಟರು.

ಈಗಾಗಿ ದೇಶವ್ಯಾಪಿ, ಹಳ್ಳಿ, ಹಾಲಲ್ಲಿ, ಕ್ಯಾಂಪ್ ಹೀಎಗೆ ಎಲ್ಲಿ ನೋಡಿದರು ೨-೩ ಚುರ್ಚ್ಗಳು, ಶಾಲೆಗಳು ತೆರೆಯಲ್ಪತ್ತು, ಅಕ್ಕ-ಪಕ್ಕದ ಬಡ, ಕೆಳ ವರ್ಗದ ಜನರನ್ನು ಗುರುತಿಸಿ ಅವರನು ಕ್ರೈಸ್ತರನಾಗಿ ಮಾಡಲು ಶುರು ಹಚ್ಚಿಕೊಂಡರು.

ಮೊದ ಮೊದಲು, ಇವರ ಬಡವರ ಬಗೆಗಿನ ಕಾಳಜಿ, ಆರೈಕೆ ಸಹಾಯ, ಮೆಚ್ಚುವನ್ತದ್ದಾಗಿದ್ದರೂ ಕಾಲ ಕ್ರಮೇಣ ಯಾವುದೋ ರಹಸ್ಯ ಕಾರ್ಯ ಸೂಚಿ ಪ್ರೆರಿತರಾದವರಂತೆ, ಈ ಆರೈಕೆ, ಶೈಕ್ಷಣಿಕ ಪ್ರಸಾರಕ್ಕಿಂತ 'ಧರ್ಮ ಪ್ರಚಾರವನ್ನೆ' ತೀವ್ರ ಗತಿಯಲ್ಲಿ, ಶೀಘ್ರವಾಗಿ ಹರಡಲು ಶುರು ಮಾಡಿದ್ರು. ಇದಕ್ಕೆ ಕೆಲ ಬಂದ ಸರಕಾರಗಳ, ಅಧಿಕಾರಿಗಳ, ಸಹಾಯವೂ ದೊರಕುತ್ತಿತ್ತು. ಇನ್ನು ವೋಟು ಬ್ಯಾಂಕ್ ಪಾಲಿಸಿ ಇಲ್ಲಿಗೂ ತಲೆ ಹಾಕಿ ಒಬ್ಬರು ಇವರಿಗೆ ಬೆಂಬಲಿಸಿದರೆ, ಇನ್ನೋಬರು ವಿರುಧದವರಿಗೆ ಬೆಂಬಲಿಸಿ ವಿಷಯವನ್ನು ಇನ್ನಸ್ಟು ಜಟಿಲ ಮಾಡುತ್ತಿದ್ದಾರೆ.

ಆಗೀಗ, ಕೆಲ ಮಠದೀಶರೂ, ಸಾಧು ಸಂತರು, ರಾಜಕಾರಣಿಗಳು ಜನರೂ 'ಮತಾಂತರದ' ಬಗ್ಗೆ ಗೊಣಗಾಡಿ , ಮಾತಾಡಿ ನಂತರ ಅದು ನಮಗೆ ಸಂಬಂದಿಸಿದ್ದಲ್ಲ ಎನ್ನುವಂತೆ ಮರೆಯಾಗಿಬಿಡುತಾರೆ.
ಅಂಬೇಡ್ಕರ್ ಸಹಾ ಈ ಜಾತಿ ಪದ್ಧತಿ ಬಗ್ಗೆ ರೋಸಿ ಹೋಗಿ ಕೊನೆಗೆ ಎಸ್ಟೆಲ್ಲ ಯೋಚಿಸಿಯೂ ಅಪ್ಪಿಕೊಂದದ್ದು, ಶಾಂತ ಧರ್ಮ ಎಂಬ ಹೆಸರುಳ್ಳ ಬೌದ್ಧ ಧರ್ಮವನ್ನೆ ಹೊರತು ಕ್ರೈಸ್ತ ಧರ್ಮ ಅಲ್ಲ. ಇದನ್ನು ಈಗ ಹಿಂದೆ ಕ್ರೈಸ್ತ ಧರ್ಮಕ್ಕೆ ಸೇರಿದ್ದ/ಸೇರುತಿರುವ ಕೆಳ ವರ್ಗದ ಜನ ಅರ್ಥ ಮಾಡಿಕೊಳ್ಳಬೇಕು.

ಇನ್ನು ಈ ವರ್ಗದ ಜನರಲ್ಲೂ ಮೆಳಕೆತ್ತಲು, ಅವರ ಪರ ಹೋರಾಡಲು ಶುರು ಗೊಂಡ ಕೆಲ ಸಂಘಟನೆಗಳು ಸಹಾ ಈ ಕ್ರೈಸ್ತ ಮತಾಂತರವನ್ನು ಸಪೋರ್ಟ್ ಮಾಡುತ್ತಾ, ಹಿಂದೂ ಧರ್ಮವನ್ನು ತೆಗಳುತ್ತ, ವರ್ಷ ವರ್ಷವೂ ಬೌದ್ಧ ದರ್ಮಾಂತರ ಕ್ಕೆ ಸಹಾ ಪ್ರೋತ್ಸಾಹಿಸುತ್ತಿದ್ದಾರೆ.
ಇಲ್ಲಿ ಒಂದು ಮುಖ್ಯವಾದ ವಿಚಾರ: ಈಗಲೂ ಎಸ್ಟೊಂದು ಕ್ರೈಸ್ತ ಶಾಲೆ ಆಸ್ಪತ್ರೆಗಳು ಬಡ ಬಗ್ಗರಿಗೆ, ಸಿರಿವನ್ತರಿಗೂ ಅತ್ತ್ಯುತ್ತಮವಾದ ಶಿಕ್ಷಣ , ಆರೋಗ್ಯ ಸೇವೆ ಕೊಟ್ಟು ಗಣನೀಯ ಸೇವೆ ಸಲ್ಲಿಸುತ್ತಿವೆ. ಅಲ್ಲಿ ಓದಿದ, ಎಸ್ಟೋ ಜನ ಅತ್ತ್ಯುನ್ನತ ಸ್ಥಾನಗಳನ್ನು ಸಹಾ ಅಲಂಕರಿಸಿದ್ದಾರೆ. ಹೀಗಾಗಿ ಈ ಬರವಣಿಗೆಯಲ್ಲಿ ಪ್ರಸ್ತಾಪಿಸಿದ ಎಲ್ಲವೂ ಈ ಶಾಲೆ ಆಸ್ಪತ್ರೆಗಳಿಗೆ ಅನ್ವಯವಾಗಲಿಕ್ಕಿಲ್ಲ.
ಇನ್ನು ಕ್ರೈಸ್ತರ ಜನಸಂಖ್ಯೆ ಹೇಗೆ ಬೆಳೆಯುತ್ತಾ ಹೋಗಿರಬಹುದು?

ಅದು ಹೀಗೆ , ಮೊದಲು ಬ್ರಿಟಿಷರ ಕಾಲದಲ್ಲಿ ಕೆಲವೇ ಜನರ ಈ ಕ್ರಿಸ್ತೀಕರಣ ನಂತರದ ವರ್ಷಗಳಲ್ಲಿ ಗುಡ್ಡಗಾಡು, ಬುದಕತು ಜನರನ್ನು ಒಲೈಸಿಕೊಳ್ಳುವುದರ ಮೂಲಕ ಶುರುವಾಯಿತು. ಅನಕ್ಷರಸ್ತರಾದ ಸಮಾಜದ ಕತ್ತೆ ಕಡೆಯವರಂತೆ ಬದುಕುತ್ತಿದ್ದ ಅವರಿಗೆ ಈ ಕ್ರೈಸ್ತ ಮತ ಪ್ರಚಾರಕರ ಬೋಧನೆ ಅಪ್ಯಯಮಾನವಾಗಿದ್ದರಲ್ಲಿ ಅಚ್ಚರಿಯೇನಿಲ್ಲ. ಹೀಗೆ ಒಬ್ಬ, ನಂತರ ಅವನ ಮನೆಯ ಪಕ್ಕದವನು, ಅವನ ಸ್ನೇಹಿತ, ಸಂಬಂದಿ, ಹೇಗೆ ಒಬ್ಬರಿಂದೊಬ್ಬರು ಕ್ರೈಸ್ತೇಕರನಗೊನ್ದು, ಇನ್ನಿತರರನ್ನು ಸಹಾ ಸೇರಿಸುತ್ತ, ಸರ್ವ್ಯಪಿಯಾದ್ರು .

ಇನ್ನು ಈ ಕ್ರೈಸ್ತ ಧರ್ಮಕ್ಕೆ ಮುಖ್ಯವಾಗಿ ಸೇರಿದವರು/ಸೇರುತ್ತಿರುವವರು, ಮೇಲು ವರ್ಗದ ಜನ ಅಲ್ಲಾ, ಹಾಗೆಯೇ ಬರೀ ಕೆಳವರ್ಗದ ಅಜನರೂ ಅಲ್ಲ, ಕೆಲವರ್ಗದವರಲಿಯು ಎಲ್ಲರೂ ಬೀಡು ಬೀಸಾಗಿ ಕ್ರೈಸ್ತರಾಗುತ್ತಿಲ್ಲ.

ನನಗೇ ಗೊತ್ತಿರುವ ಹಾಗೆ ಹರಿಜನರೇ ಈ ಧರ್ಮಕ್ಕೆ ಸೇರುತ್ತಿರುವವರಲ್ಲಿ ಪ್ರಮುಖರು, ಸಮಾಜದಲ್ಲಿ ಇಸ್ಟೆಲ್ಲಾ ಮುಂದುವರೆದ ಯುಗದಲ್ಲೂ ಇನ್ನು ಇವರಿಗೆ ಅವರಿಗೆ ಸಿಗಬೇಕಾದ ಯಾವುದೂ ಸಿಗದೇ ಮೇಲು ವರ್ಗದ ಅಸಮಾನತೆ ಹಾಗೆ ಮುಂದುವರಿದೆ ಇದೆ. ಇದಕ್ಕೆ ಸರಿಯಾಗಿ ಅವರು ಇವರ ಸಹವಾಸವೇ ಬೇಡ ಅಂತ ಕ್ರೈಸ್ತರಾಗಿ ಸಂತೋಷವಾಗಿ ಇದ್ದಾರೆ. ಹೇಗಾಗಿ ನಮ್ಮ ಮಾರೆಮ್ಮ, ದೇವಮ್ಮ,ಮಲ್ಲಮ್ಮ, ಕಾಲೆಮ್ಮ ಅಂತೆಲ್ಲ ದೇವರನ್ನು ಪೂಜಿಸುತ್ತಿದ್ದ ಅವರು ಈಗ ಯೇಸು ಗುಣಗಾನದಲ್ಲಿ ತೊಡಗಿದ್ದಾರೆ.

ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ?

ಹಿಂದೂ ಧರ್ಮ ನಶಿಸುತಿರುವುದು ನೋಡಿಯೂ ನಾವೆಲ್ಲಾ ಹೀಗೆ ಕಣ್ಣು ಮುಚ್ಚಿ ಕುಳಿತಿರಬೇಕೆ?
ಮುಂದೇನು?

ಪರಿಹಾರ ಇದೆ

ಕೆಲ ವರ್ಗದ ಬಗೆಗಿನ /ಎಡೆಗಿನ ನಮ್ಮ ಮೇಲು ವರ್ಗದ ಜನರ ದೃಷ್ಟಿ ಕೋನ ಚೇಂಜ್ ಆಗಬೇಕು, ಕೆಳ ವರ್ಗದ ಅವರ ಸೌಲಭ್ಯ, ಸವಲತ್ತುಗಳು ಅವರಿಗೆ ದೊರಕಬೇಕು. ಇನ್ನು ಮಠ , ಮಂದಿರ, ಜಾತ್ರೆ , ಎಲ್ಲರ ಸಮಾಗಮವಾಗಬೇಕು, ಇವೆಲ್ಲದರಿಂದ ಅವರನ್ನು ದೂರವಿಟ್ಟು ಮತಾಂತರ ವಿರುದ್ಧ ಗುಡುಗಿದರೆ ನಯಾ ಪೈಸೆ ಪ್ರಯೋಜನವಿಲ್ಲ, ಇದ್ದ ಧರ್ಮದಲೇ ಖುಷಿಯಾಗಿರದವ್ರು , ಉದ್ಧರವಾಗದಿದ್ದವರು ಕ್ರೈಸ್ತ್ರಾದರೆ ಮಾತ್ರ ಖುಷಿಯಾಗಿ, ಇಲ್ಲ ಉದ್ಧಾರವಾಗುವುದೋ ಸಾಧ್ಯವಿಲ್ಲ.

ಇದೆ ಕಾರಣಕ್ಕಾಗಿ ಈಗ ನಡೆಯುತ್ತಿರುವ ತಿಕ್ಕಾಟಗಳು, ಅದರಿಂದಾಗುತ್ತಿರುವ ಸಾವು ನೋವು ನೋಡಿದ ಮೇಲೆ ನಾವು ಇಲ್ಲಿ ಭೊಮಿ ಮೇಲೆ ಬದುಕುವುದಕ್ಕೆ ಬಂದ ಉದ್ದೇಶವೇ ಬೇರೆ ಈಗ ಮಾಡುತ್ತಿರುವುದೇ ಬೇರೆ ಎಂಬಂತೆ ಅನ್ನಿಸುತ್ತಿಲ್ಲವೇ. ಎಲ್ಲ ಧರ್ಮದ ಸಾರ ಒಂದೇ ಅದು ಶಾಂತಿ, ಸಹಬಾಳ್ವೆ, ಸಹಕಾರ,

ಈ ವಿಷಯದ ಬಗ್ಗೆ ಎಲ್ಲ ಮಠಾಧಿಪತಿಗಳು ಸಾಧು ಸಂತರೂ, ರಾಜಕಾರಣಿಗಳು, ಮುಖ್ಯವಾಗಿ ನಾವು ಜನರು ಅರ್ಥ ಮಾಡಿಕೊಂಡು ಮತಾಂತರ ತಡೆಯಲು ಶ್ರಮಿಸಬೇಕು.

ಇದು ನನ್ನ ಬಹಿಪ್ರಾಯ ನಿಮ್ಮ ಅಭಿಪ್ರಾಯ ಏನು? ಮತಾಂತರಕ್ಕೆ ಬೇರೆ ಏನು ಕಾರಣ ಇದೆ? ಎಲ್ಲಿ ಹೇಗೆ ನಡೆಯುತ್ತಿದೆ? ನಿಮ್ಮ ದೃಷ್ಟಿ ಕೋನ ಏನು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet