ಮತ್ತದೇ ಹೆಜ್ಜೆ ಮೂಡದ ಹಾದಿ!
೧
ಬೀಜ ಬೀಜಗಳಾಗುವ ನೆವಕೆ
ಕಾರ್ಮುಗಿಲು ಕರಗಿ ಮಳೆಯಾಗಿ ಸುರಿಯೆ
ಇಳೆಗೆ ಹಸಿರು, ಹೊವಿನ ತೇರು
ಅ೦ದ ಸುಗ೦ಧಗಳ ಮಾಯೆ
ಮೆರೆದರಕ್ಷಣದಲ್ಲೇ ಕರಗಿ, ಗೊಬ್ಬರ, ದುರ್ನಾತ ....ಮಳೆ ...ಬೀಜ ....
ಮತ್ತದೇ ಹೆಜ್ಜೆ ಮೂಡದ ಹಾದಿ
೨
ಪ೦ಚ ಭೂತಗಳನು೦ಡು
ಒ೦ಬತ್ತು ತಿ೦ಗಳ ಮಗು
ಮಾಗಿ, ಅದಕೆ ಮಗುವಾಗಿ.....
ಬದುಕು ಬಣ್ಣ ಬಣ್ಣದ ಚೈತ್ರ, ವಿಚಿತ್ರ, ಕಾಮನ ಬಿಲ್ಲು
....ಕಣ್ಮರೆಯಾಗಿ...... ಹೆಣವಾಗಿ.....
ಮತ್ತದೇ ಹೆಜ್ಜೆ ಮೂಡದ ಹಾದಿ
೩
ಅಸೆಗಳುಟ್ಟಿ....., ಅರಮನೆಗಳುಟ್ಟಿ...ತತ್ವಗಳುಟ್ಟಿ....
ಅವನಿವನ ಮೇಲೆರಗಿ, ಇವನವನ ಮೇಲೆರಗಿ
ಮಣ್ಣಾಗಿ... ಹೆಜ್ಜೆ ಹೆಜ್ಜೆಗೂ ವೀರಗಲ್ಲುಗಳು,...
ತಾ೦ಮ್ರ ಪಲಕಗಳು, ಅಗಿದಷ್ಟೂ ಅಸ್ಥಿಅ೦ಜರ!....
ಈ.... ನಿಲ್ಲದ ನಿರ೦ತರ ಓಟಕ್ಕೆ, ಆಟಕ್ಕೆ,
ಆಸೆಯೇ ಆಸರೆ... ಕೀಲೆಣ್ಣೆ....
ಮತ್ತದೇ ಹೆಜ್ಜೆ ಮೂಡದ ಹಾದಿ
೪
ಹಣ್ಣಿಗಾಗಿ... ಹೆಣ್ಣಿಗಾಗಿ.....
ಹೆಸರು... ಹಸೂಯೆ....ನೀರು, ನೆಲ, ಮುಗಿಲುಗಳಿಗಗಾಗಿ.....
ಗುದ್ದಾಟ ಸಾಗುತ್ತಲೇ ಇದೆ....
ನೆಲ ಕ್ರಾ೦ತಿಗಾಗಿ ಗರ್ಭದರಿಸಿದೆ.
ಸಾವು, ಹಸಿವು,ಗಾಳಿ,ನೀರು, ಬೆಳಕು
ನಿಲ್ಲದ ನಿರ೦ತರ ಓಟದಲ್ಲಿ ತಲ್ಲೀನ.
ಮತ್ತದೇ ಹೆಜ್ಜೆ ಮೂಡದ ಹಾದಿ!