ಮತ್ತಷ್ಟು ಗಾದೆಗಳು - ೨

ಮತ್ತಷ್ಟು ಗಾದೆಗಳು - ೨

ಬರಹ

೧. ನಾಯಿಗೆ ಹೇಳಿದರೆ ನಾಯಿ ತನ್ನ ಬಾಲಕ್ಕೆ ಹೇಳಿತು.

೨. ದಾನಕ್ಕೆ ಕೊಟ್ಟ ಎಮ್ಮೆಯ ಹಲ್ಲು ಎಣಿಸಿದರು.

೩. ಬಂದಷ್ಟು ಬಂತು ಬರಡೆಮ್ಮೆ ಹಾಲು.

೪. ಮೂರು ಕೋಟಿ ಜನ ಸೇರಲ್ಲಿಲ್ಲ ಮೈಲಾರಲಿಂಗನ ಜಾತ್ರೆ ನಡೀಲ್ಲಿಲ್ಲ.

೫. ಮೂರೂ ಬಿಟ್ಟವರು ಊರಿಗೆ ದೊಡ್ಡವರು.

೬. ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೀತು.

೭. ಎಮ್ಮೆ ತಪ್ಪಿದರೆ ಕಪ್ಪೆ ಹೊಂಡ.

೮. ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣಸಂಕಟ.

೯. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ.

೧೦. ಕೋತಿ ತಾನು ಕೆಡೋದಲ್ಲದೆ ವನನೆಲ್ಲ ಕೆಡಿಸಿತ್ತು.

೧೧. ಕಪ್ಪೆ ಹಿಡಿದು ಕೊಳಗಕ್ಕೆ ತುಂಬಿದ ಹಾಗೆ.

೧೨. ನೊಣ ತಿಂದು ಜಾತಿ ಕೆಡಿಸಿಕೊಂಡರು.

೧೩. ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ.

೧೪. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು.