ಮತ್ತಷ್ಟು ಗಾದೆಗಳು - ೭

ಮತ್ತಷ್ಟು ಗಾದೆಗಳು - ೭

ಬರಹ

೧. ಸಾಲ ಮಾಡಿದವನು ತೀರಿಸಿ ಸಾಯಲ್ಲಿಲ್ಲ, ಮೂಲ ಮಾಡಿದವನು ತಿಂದು ಸಾಯಲ್ಲಿಲ್ಲ.
೨. ಹುಟ್ಟಿದ ಲಾಗಾಯ್ತೂ ಯಜ್ಞಕಾರ್ಯ ಮಾಡದಿದ್ದವನು ಗಡ್ಡಕ್ಕೆ ಬೆಂಕಿ ಹಚ್ಚಿಕೊಂಡನಂತೆ.
೩. ಬಳಸದೇ ಬಾವಿ ಕೆಟ್ಟಿತು, ಹೋಗದೇ ನೆಂಟಸ್ತನ ಕೆಟ್ಟಿತು.
೪. ಮನೆಗೊಬ್ಬ ಅಜ್ಜಿ, ಒಲೆಗೊಂದು ಕುಂಟೆ.
೫. ಚೇಳಿನ ಮಂತ್ರವೂ ಗೊತ್ತಿಲ್ಲ, ಹಾವಿನ ಬುಟ್ಟಿಗೆ ಕೈ ಹಾಕಿದಂತೆ.
೬. ಲಂಕೆ ಸುಟ್ಟರೂ ಹನುಮಂತ ಹೊರಗೆ.
೭. ತಲೆ ಬೋಳಿಸಿದರೆ ಸುಳಿ ಹೋಗುತ್ತದೆಯೆ?
೮. ದಿವಾಳಿ ತೆಗೆಯುವವನ ವ್ಯಾಪಾರ ಹೆಚ್ಚಂತೆ, ಆಚಾರ ಕೆಟ್ಟವನ ಪೂಜೆ ಹೆಚ್ಚಂತೆ.
೯. ಇಪ್ಪತ್ತಕ್ಕೆ ಯಜಮಾನಿಕೆ, ಎಪ್ಪತ್ತಕ್ಕೆ ಅತಿಸಾರ ಬರಬಾರದು.
೧೦.ಮಾಡುವವರಿದ್ದರೆ ನೋಡು ನನ್ನ ವೈಭೋಗ.