ಮತ್ತಷ್ಟು ಹನಿಗಳು...
ಕವನ
ಸಾರವಿಲ್ಲದ
ಜನರು
ಏನು
ಹೇಳಿದರೂ ,
ನನಗೆ
ಸಾರವಿಲ್ಲ !
ಬರಿ
ದೇ
ತಾತ್ಸಾರ
ಛಲವಾದಿಯೆ !
*
ಪ್ರೀತಿಯು
ಅತಿಯಾದರೆ ,
ಪ್ರೇಮ
ವೈಫಲ್ಯ
ಕಾಣುತ್ತದೆ !
*
ಕೃಷ್ಣನ
ಕೊಳಲಿನ
ಧ್ವನಿ
ರಾಧೆಗಷ್ಟೇ
ಕೇಳುತ್ತಿತ್ತು
ಗಂಡ
ಹೆಂಡಿರ
ಸಂಬಂಧವು
ಹಾಗೇ
ಇರಲಿ !
*
ಗ್ರಹಣ
ಬೇರೆಲ್ಲೂ
ಇಲ್ಲ
ನಮ್ಮೊಳಗೇ
ಇದೆ !
*
ಹಲ
ಕೆಲವರು
ತಿನ್ನುವ
ಅನ್ನದಲ್ಲೂ
ಕಲ್ಲು
ಹುಡುಕುವವರು !
ಆದರೆ ನಿಜ
ಜೀವನದಲ್ಲಿ
ಅವರಷ್ಟು
ನೇಮ
ನಿಷ್ಠೆಯಲ್ಲಿ
ಮುಳುಗಿರುವವರು
ಬೇರೊಬ್ಬರಿರುವುದಿಲ್ಲ !!
*
ಹೊತ್ತುತಲಿವೆ
ನಾಡಿನ ಚಿತೆಗಳು
ಜನ ಸಾಯುತ
*
ಚಿರುಟುತಲಿ
ಬದುಕಿನ ಕನಸು
ನನಸಾಗದೆ
*
ಉಪವಾಸದ
ಹಿಂಗಿದ ಕಣ್ಣಲ್ಲಿದೆ
ಪ್ರೇತದ ಕಳೆ
*
ಹೀಗೆ ಆದರೆ
ಮನುಷ್ಯನ ಪಯಣ
ಗೋರಿಗಳೆಡೆ
*
ಕಸ ಕೊಳೆತು
ರಸವಾಗಿ
ಸಹ
ಕಸಗಳೊಡನೆ
ಬೆರೆತು
ಸಸಿಗೆ
ಗೊಬ್ಬರವಾಯ್ತೆ ?
ನೀನಾರಿಗಾದೆಯೋ
ಎಲೆ ಮಾನವ !
*
ಹುಷಾರು
ಸಾಹಿತ್ಯದ
ಎಡ ಬಲಗಳೇ
ಬಡವ - ಬಲ್ಲಿದ
ಇವರ ನಡುವೆ
ಮಧ್ಯಮ
ಬರಹಗಾರ
ಸಿಲುಕಿದನೋ ?
ಉಸಿರು
ನಿಲ್ಲಿಸುತ್ತಾರೆ
ನೋಡಿ !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್