ಮತ್ತಷ್ಟು ಹನಿಗಳು...

ಮತ್ತಷ್ಟು ಹನಿಗಳು...

ಕವನ

ಕೊಡುಗೈ ದಾನಿಗಳು 

ಪಂಚ ಗ್ಯಾರಂಟಿಗಳಿಂದ

ಸ್ವಲ್ಪ ಕೊಟ್ಟು-

ಬೆಲೆಗಳನು ಏರಿಸಿ

ಮಸ್ತು ಬಾಚಿ

ಖಜಾನೆಯನು

ತುಂಬುವರಂತೆ....

 

ನಮ್ಮ ರಾಜಕೀಯ

ನಾಯಕರು-

ಬಹು ಕುಶಲೀ

ಆಧುನಿಕ

ಕೊಡುಗೈಯ

ದಾನಿಗಳಂತೆ!

***

ಚಲಾವಣೆ ಐಕಾನ್... 

ಎರಡು ಸಾವಿರ

ರೂಪಾಯಿ ನೋಟು

ಅಳುತ್ತಾ ಹೇಳ್ತಂತೆ-

ನಾನು ಶ್ರೀಮಂತರ

ಲಾಕರ್ನಲಿ ಸದಾ ಬಂಧಿ

ಕೊನೆಗೆ ಬ್ಯಾನ್....

 

ಹತ್ತು ರೂಪಾಯಿ

ನಗುತಲಿ ಹೇಳ್ತು-

ನಾನು ಸದಾ

ಬಡವರ ಬಂಧು

ಸ್ನೇಹಸಿಂಧು

ಚಲಾವಣೆ ಐಕಾನ್!

***

ಆಣೆ-ಪ್ರಮಾಣ 

ತಪ್ಪು

ಮಾಡಿಲ್ಲಾಂದ್ರೆ

ಪ್ರಮಾಣ

ಮಾಡೋದ್ರಲ್ಲಿ

ತಪ್ಪೇನಿದೆ-

ಡಿಕೆಶಿ ಕಾಲೆಳೆದ ಬಿಜೆಪಿ...

 

ಅಯ್ಯೋ...

ಈ ಆಣೆ-ಪ್ರಮಾಣಗಳು

ರಾಜಕೀಯದಲ್ಲಿ

ಸವಕಲು

ನಾಣ್ಯಗಳೋ

ಕಡು ಪಾಪೀ!

***

ದೇವತೆ-ರಾಕ್ಷಸ 

ಹೊಗಳಿದಾಗ-

ಹೊಗಳಿಸಿ 

ಕೊಂಡಾಗ

ನಾವೇ

ದೇವತೆಗಳೆಂಬ

ಸಂಭ್ರಮ...

 

ತೆಗಳಿದಾಗ-

ತೆಗಳಿಸಿ

ಕೊಂಡಾಗ

ನಾವೇ

ರಾಕ್ಷಸರೆಂಬ

ವಿಭ್ರಮ!

***

ಸತ್ಯ ಮತ್ತು ಸುಳ್ಳು 

ಗುತ್ತಿಗೇದಾರರ

40% ಆರೋಪ ಸತ್ಯ;

15% ಆರೋಪ ಸುಳ್ಳು-

ಸಚಿವ

ರಾಮಲಿಂಗಾರೆಡ್ಡಿ

ಆಕ್ಷೇಪ....

 

ಎರಡರಲ್ಲೂ-

ಪರ್ಸಂಟೇಜ್ ಇದೆ;

ಗುತ್ತಿಗೇದಾರರಿದ್ದಾರೆ...

ಇದು ಸತ್ಯ-ಸುಳ್ಳಿನ

ನಡುವಿನ

ವಿರೂಪ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್