ಮತ್ತಷ್ಟು ಹನಿಗಳು !

ಮತ್ತಷ್ಟು ಹನಿಗಳು !

ಕವನ

ತಂಗಾಳಿ-ಬಿರುಗಾಳಿ 

ಮರ್ಯಾದೆ

ಗೌರವ

ಸನ್ಮಾನಗಳು

ತಾವಾಗಿಯೇ

ಬಂದರೆ

ತಂಗಾಳಿ...

 

ಸ್ವಾಭಿಮಾನ ಬಿಟ್ಟು

ನಾವಾಗಿಯೇ

ಪಡೆಯಲು

ಮುಂದಾಗಿ

ಹೋದರೆ

ಬಿರುಗಾಳಿ!

***

ಅ-ಸಮಾನತೆ...! 

ಗಂಡ ಹೆಂಡಿರು

ಸಮಾನರೆಂದರು-

ಮನೆಯಲಿ

ಇಲ್ಲಸಲ್ಲದ 

ತಿಕ್ಕಾಟ-ಜಗಳ

ಆರಂಭವಾಯ್ತು...

 

ಗಂಡ ಸೋತು

ತಲೆಬಾಗಿ ನಡೆದ;

ಹೆಂಡತಿ ತಲೆ ಎತ್ತಿ

ಗರ್ವ ಪಟ್ಟಳು-

ಸುಂದರ ಸಂಸಾರ 

ಉಗಮವಾಯ್ತು!

***

ವೀಕ್ಷಕ ಮಣಿಗಳು 

ಆಗೆಲ್ಲಾ

ತ್ರಿವೇಣಿ ; ವಾಣಿ

ಇಂದಿರಾ;ಗೌರಮ್ಮ...

ಮಹಾನ್

ಲೇಖಕಿಯರು

ಬರೆಯುತ್ತಿದ್ದರಲ್ಲಾ...

 

ಈಗ ಬರೆಯುವವರು

ಬಲು ಕಡಿಮೆ;

ಓದುವವರೂ ಇಲ್ಲ... 

ದೂರದರ್ಶನದ

ಧಾರೆಯ ಧಾರಾವಾಹಿಗಳ

ವೀಕ್ಷಕ ಮಣಿಗಳೇ ಎಲ್ಲಾ!

***

ಕಮಿಷನ್ 

ನಾಚಿಕೆ ಇಲ್ಲದ

ಜನ-

ರಾಜಕೀಯಕ್ಕೆ

ಬಂದು ಆಗುವರು

ಕಮಿಷನ್

ಬೇಡುವ ಜೋಗಿ...

 

ಆದರೆ

ಜನ ಮಹಾಶಯರೇ-

ಮೊದಲು ನೀವು

ಈ ವಿಷವರ್ತುಲದಿಂದ

ಹೊರಬಂದು

ಆಗಿ ಬಿಡಿ ಯೋಗಿ!

***

ಸ್ಟ್ರಾಂಗ್ ಟೀಚರ್ಸ್ 

ನಿಮಗೆ ಗೊತ್ತೇ?

ಜಗತ್ತಿನ

ಅದ್ಭುತ-

ಮದುವೆಯಾದ

ಸ್ತ್ರೀಯರೇ

ಸ್ಟ್ರಾಂಗ್ ಟೀಚರ್ಸ್...

 

ಅವರು

ಎಂತೆಂತಹ

ಚಿತ್ರ-ವಿಚಿತ್ರ

ಗಂಡಸರನು

ದಾರಿಗೆ ತಂದಿಹರು-

ಗ್ರೇಟ್ ಅಚೀವರ್ಸ್!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್