ಮತ್ತು

ಮತ್ತು

ಬರಹ

ಮುತ್ತು' ಎಂದೋದಿದಿರ? ಸಾರಿ
ಮುತ್ತು ಅಲ್ಲ ವಿಷಯ 'ಮತ್ತು'
ಅದೇ ಸರಿ

ಒಡನೆ, ಜೊತೆಗೆ ಸಹಜಾರ್ಥ
ಗುಂಡಿನ ಮತ್ತು ಮಾದಕಾರ್ಥ
ಮತ್ತು ಇಲ್ಲದಿರೆ ಆದೀತು ಅನರ್ಥ
ಅಲ್ಲಗಳೆಯದಿರಿ ಮತ್ತುವಿನ 'ಪರಮಾರ್ಥ'

ಮತ್ತು ಶಬ್ದಕುಂಟು ಗತ್ತು
ಮತ್ತು ಇಲ್ಲದಿರೆ ಸಾಹಿತ್ಯದಿ ಕುತ್ತು
ಮತ್ತು ಸೇರಿದರೆ ಹೆಚ್ಚೀತು ಕಿಮ್ಮತ್ತು
'ಮತ್ತು' ಇಂದಲೆ ಗುಂಪಿಗೆ ತಾಕತ್ತು

ಪದ, ಸಾಲುಗಳ ಸೇತುವೆ ಮತ್ತು
ಮುತ್ತಾದ ಎರಡಕ್ಷರಗಳ ಪದ ಮತ್ತು
ಸರಿಯಾದ ಸ್ಥಳದಿ ಪ್ರಯೋಗವಾದರೆ ಇದೇ ಮುತ್ತು
ಕಾಗುಣಿತದಿ ಕೊಂಚ ಎಡವಿದರೆ ಮತ್ತಾದೀತು ಮುತ್ತು

ನಾನು ಮತ್ತು ನನ್ನಮ್ಮ
ನಾನು ಮತ್ತು ನನ್ನ ತಂಗಿ
ನಾನು ಮತ್ತು ನನ್ನವಳು
ಸುಂದರ ಸಂಬಂಧಗಳ ಜೋಡಕ ಮತ್ತು

ಗುಂಡಿನ ಮತ್ತು
ಪ್ರಣಯದ ಮತ್ತು
ಅಧಿಕಾರದ ಮತ್ತು
ಐಶ್ವರ್ಯದ ಮತ್ತು
ತರುವವು ಆಪತ್ತು

ಮತ್ತು ಏರಿದಾಗ ಇರುವಲ್ಲೇ ಜನ್ನತ್ತು
ಅತಿಯಾದಾಗ ಖಚಿತ ಆಪತ್ತು
ಕೊಚ್ಚಿ ಹೋದೀತು ಸಂಪತ್ತು
ನಾಶವಾದೀತು ದವಲತ್ತು

ಬೇಡ ನಮಗೆ ಮಾದಕಾರ್ಥದ ಮತ್ತು
ನಮ್ಮದಾಗಲಿ ಸಹಜಾರ್ಥ ಮತ್ತು
ಮನದಟ್ಟಾಯಿತೇ 'ಮತ್ತು' ಶಬ್ದದ ಗಮ್ಮತ್ತು
-ಗುವಿಚರಾ