ಮತ್ತೆ ಮತ್ತೆ ಕಾಡುವ ಶಂಕರ್‌‌ನಾಗ್ ನೆನಪು :ಪ್ರೀತಿಯಿಂದ ಪ್ರೀತಿಗಾಗಿ -ಜಿ.ವಿಜಯ್ ಹೆಮ್ಮರಗಾಲ.

ಮತ್ತೆ ಮತ್ತೆ ಕಾಡುವ ಶಂಕರ್‌‌ನಾಗ್ ನೆನಪು :ಪ್ರೀತಿಯಿಂದ ಪ್ರೀತಿಗಾಗಿ -ಜಿ.ವಿಜಯ್ ಹೆಮ್ಮರಗಾಲ.

ಬರಹ

ಇದ್ದಿದ್ದು ಕೆಲವೇ ವರ್ಷ. ಸಾಧಿಸಿದ್ದು ಅಪಾರ, ಗಳಿಸಿದ ಪ್ರೀತಿ ಅಪರಿಮಿತ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಒಬ್ಬ ಅಪರೂಪದ ವ್ಯಕ್ತಿ ಕಂಡು ಬರುತ್ತಾರೆ ಆ ವ್ಯಕ್ತಿ ಇಂದು ಇಲ್ಲವಾದರೂ, ಆ ವ್ಯಕ್ತಿಯ ಹೆಸರು ಕೇಳಿರದ ಕನ್ನಡಿಗ ಯಾರು ಇಲ್ಲಾ ಎಂದೇ ಹೇಳಬಹುದು. ಈತ ಕಿರುತೆರೆಯಲ್ಲಿ ಕನ್ನಡವನ್ನು ಸಾರಿ ವಿಶ್ವದಾದ್ಯಂತ ಮನೆಮಾತದ ವ್ಯಕ್ತಿ ಬೇರೆ ಯಾರು ಅಲ್ಲಾ. ನಟ - ನಿರ್ದೇಶಕ - ಶಂಕರ್ ನಾಗ್. ಇದು ಶಂಕರ್‌ನಾಗ್ ಕುರಿತು ಯಾರೇ ಆದರೂ ಹೇಳುವ ಎರಡು ಸಾಲಿನ ವ್ಯಕ್ತಿ ಪರಿಚಯ.
ಆರ್.ಕೆ. ನಾರಾಯಣ್ ಅವರ ಮಾಲ್ಗುಡಿ ಡೇಸ್ ಎಂಬ ಕಾದಂಬರಿ ಆಧರಿಸಿ ನಿರ್ಮಿಸಿದ ಧಾರವಾಹಿಯಿಂದ ಮನೆ- ಮಾತಾದರು ಇವರು "ಒಂದಾನೊಂದು ಕಾಲದಲ್ಲಿ " ಚಿತ್ರದ ಮುಲಕ ಚಿತ್ರರಂಗ ಪ್ರವೇಶಿಸಿದರು .
ಹೌದು. ಶಂಕರ್‌‌ನಾಗ್ ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ. ಕ್ರಿಯಾಶೀಲತೆಗೆ ಪರ್ಯಾಯ ಪದವೇ ಅಗಿಹೋಗಿದ್ದ ಶಂಕರ್ ಗತಿಸಿ ಸಾಕಷ್ಟು ವರ್ಷಗಳಾಗಿವೆ. ಆದರೆ ಅವರ ನೆನಪು ಮರೆಯಾಗಿಲ್ಲ. ತೀರ ಎರಡು ತಿಂಗಳ ಹಿಂದೆ ಖರೀದಿಯಾದ ಆಟೋರಿಕ್ಷಾವೊಂದರ ಮೇಲೂ ಕಡ್ಡಾಯ ಎಂಬಷ್ಟರ ಮಟ್ಟಿಗೆ ಅವರ ಭಾವಚಿತ್ರ ಇರುತ್ತದೆಯೆಂದರೆ ಅವರ ಗಟ್ಟಿತನ ಎಷ್ಟಿತ್ತು ಎಂಬುದು ಅರಿವಾಗದಿರದು.
ಬೆಂಗಳೂರಿನಲ್ಲಿ ಸೀಮೆ ಹಸುಗಳನ್ನು ಕಟ್ಟಿ ಹಾಲು ಕರೆಯುವುದಿರಲಿ, ಈಗಿನ ಬೆಂಗಳೂರಿನ ಕನಸನ್ನು ಕಟ್ಟಿದವರು ಈತ ,ಬೆಂಗಳೂರಿಗೆ ಮೆಟ್ರೋಯೋಜನೆ ತರುವ ಬಗ್ಗೆ , ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ, ಪ್ಲೈ-ಓವರ್ ಬಗ್ಗೆ, ಕುಡಿಯುವ ನೀರಿನ ಬಗ್ಗೆ, ಯೋಚಿಸಿದ್ದರು. ಕಂಟ್ರಿಕ್ಲಬ್-ಸಂಕೇತ್ ಸ್ಡುಡಿಯೋವನ್ನು ಕಟ್ಟುವುದಿರಲಿ ಅಥವಾ ನಂದಿಬೆಟ್ಟಕ್ಕೆ ರೋಪ್‌‌ವೇ ಹಾಕುವ ಕನಸೇ ಇರಲಿ ಎಲ್ಲದರಲ್ಲೂ ಶಂಕರ್‌‌ನಾಗ್ ಅವರಿಗೆ ಸ್ಪಷ್ಟತೆಯಿತ್ತು. ಅವರ ಗೀತಾ, ಜನ್ಮ ಜನ್ಮದ ಅನುಬಂಧ, ಆಕ್ಸಿಡೆಂಟ್, ನೋಡಿ ಸ್ವಾಮಿ ನಾವಿರೋದೆ ಹೀಗೆ, ಒಂದು ಮುತ್ತಿನ ಕಥೆ ಚಿತ್ರಗಳು ಹಾಗೂ ಅದರ ಹಾಡುಗಳನ್ನು ಮರೆಯಲಿಕ್ಕೆ ಸಾಧ್ಯವೇ?
ಶಂಕರ್‌‌ನಾಗ್ ಅಭಿರುಚಿ ಹಾಗೂ ಸಾಮರ್ಥ್ಯವನ್ನು ಸಂಗೀತ ನಿರ್ದೇಶಕ ಇಳಯರಾಜಾ ಚೆನ್ನಾಗಿ ಅರಿತಿದ್ದರು. ಆದ್ದರಿಂದಲೇ ಶಂಕರ್‌‌ನಾಗ್ ಹೊಸತೊಂದು ಚಿತ್ರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆಂದು ಗೊತ್ತಾಗುತ್ತಿದ್ದಂತೆಯೇ ಚೆನ್ನೈಯಲ್ಲಿ ಗೀತೆಯ ಟ್ಯೂನ್, ವಾದ್ಯಸಂಗೀತ ಎಲ್ಲವನ್ನೂ ಸಿದ್ಧಪಡಿಸಿಕೊಂಡು ನಾನು ಸಿದ್ಧ, ಯಾವಾಗ ಬರುತ್ತೀರಿ ಎಂದು ಕೇಳುತ್ತಿದ್ದರಂತೆ ಇಳಯರಾಜಾ. ಇದು ಶಂಕರ್‌‌ನಾಗ್ ತಾಕತ್ತು.
ಶಂಕರ್ ನಾಗ್ ಎಂದಾಕ್ಷಣ ಜ್ಞಾಪಕ ಬರುವುದು ಪೋಲೀಸ್ ಪಾತ್ರಧಾರಿಯಾದ ಎಸ್. ಪಿ. ಸಾಂಗ್ಲೀಯಾನ. ಮತ್ತು ಸಿ.ಬಿ.ಐ. ಶಂಕರ್,
ಇಂತಹ ಮಹಾ ಮಹತ್ವಕಾಂಕ್ಷಿಯೊಬ್ಬನ ಬದುಕು ಆಕ್ಸಿಡೆಂಟ್ ಮೂಲಕ ಚಿತ್ರರಂಗದ ಮಹಾನ್ ತಾರೆಯೊಂದು ನಂದಿಹೊಯಿತು.
ಇಂತಿ , ಪ್ರೀತಿಯಿಂದ ಪ್ರೀತಿಗಾಗಿ
ಜಿ.ವಿಜಯ್ ಹೆಮ್ಮರಗಾಲ.

ದುರದೃಷ್ಟವಶಾತ್ ವಿಧಿ ಶಂಕರ್‌ನಾಗ್ ಆಕಸ್ಮಿಕವಾಗಿ ಸಾವನ್ನಪ್ಪಿದ್ದು,ಕನ್ನಡಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ.