ಮತ್ತೆ ಶಿಲೆಯಾಯ್ತು!

ಮತ್ತೆ ಶಿಲೆಯಾಯ್ತು!

ಕವನ

ನೀ ನಡೆದ ದಾರಿಯದು
    ಗಿಡಗಂಟಿಗಳಿಂದ ಮರೆಯಾಯ್ತು
ನೆಲ ಸವರಿ ಸೋತರೂ
    ಬೇರಾಗದಷ್ಟು ಸೇರಿಹೋಯ್ತು

    ಆ ನನ್ನ ಹೂನಗು
        ಸಮಯವಾದಂತೆ ಬಾಡಿಹೋಯ್ತು
    ನೀರೆರಚಿ ಕಾದರೂ
        ಮರುಮೂಡದೇ ಕೊಳೆತುಹೋಯ್ತು

ನೀನಿತ್ತ ಸವಿಮುತ್ತು
    ಇದ್ದಲ್ಲಿಯೇ ಕಹಿಯಾಯ್ತು
ಸಕ್ಕರೆಯ ತುಟಿಗಳ
    ಸಿಹಿತನವೇ ಕಳೆದುಹೋಯ್ತು

    ನೀಕೊಟ್ಟ ಉಳಿಪೆಟ್ಟು
        ತಪ್ಪಾದ ಗುರಿಯಾಯ್ತು
    ಶಿಲ್ಪವಾದ ಕಲೆಯು
        ಮತ್ತೆ ಶಿಲೆಯಾಗಿಹೋಯ್ತು!

                        -ಉಷಾ