ಮತ್ತೆ ಹುಟ್ಟಿ ಬಾ ಬಸವಣ್ಣ

ಮತ್ತೆ ಹುಟ್ಟಿ ಬಾ ಬಸವಣ್ಣ

ಕವನ

ಜನವೆದ್ದು ಕುಳಿತಾರೋ

ತಾವು ಮಾತನಾಡಿದ್ದೇ ವೇದಗಳು !

ತಾವು ಹೇಳಿದ್ದೇ ನೀತಿ ಶಾಸ್ತ್ರಗಳು!

ನಾವು ಸಾಗಿದ್ದೇ ದಾರಿಗಳು!

ಬದುಕೇ ವಿಚಿತ್ರ ಆಗ್ಯಾವು,

ನೀ ಮತ್ತೆ ಹುಟ್ಟಿ ಬಾ,

ಅಣ್ಣಾ ಬಸವಣ್ಣ!

 

ಬಹಳ ಜನಕ ಪ್ರಜಾಪ್ರಭುತ್ವದಾಗ

ನಂಬಿಕೆನೇ ಹೊರಟು ಹೋಗೈತಿ

ಖೂಳರ,ಕಳ್ಳರ ಸಂತಿ ಆಗೈತಿ

ಉಂಡವನೇ ಜಾಣ ಆಗ್ಯಾರ

ಬಡವ ,ಹಿಂದುಳಿದವಾ

ಮಸಣದ ದಾರಿ ತುಳಿದ್ಯಾನ

ನಮಗೆ ದಾರಿ ತೋರ್ಸೋ ಜನ

ಮನ್ಯಾಗ ಕುಂತಾರ, ಏನಾದ್ರಾಗ್ಲಿ

ನೀ ಮತ್ತೆ ಹುಟ್ಟಿ ಬಾ ,ಅಣ್ಣಾ ಬಸವಣ್ಣ!

 

ಮನ ಮನೆಯೆಲ್ಲವೂ

ಮುರುಕಲು ಗುಡಿಸಲು ಆಗ್ಯಾವು! 

ಭಾಷೆಗಳೆಲ್ಲವೂ ಹೊಲಸು ಮೆದ್ಯಾವು ! 

ಬರಹದಲೆಲ್ಲಾ ವಿಷವೇ ತುಂಬ್ಯಾವು!

ಯಾರ ನೋಡಿರೂ ,ಯಾರಿಗೂ ಊಟಾನೇ ಸೇರುವಲ್ದು !

ಹಿಂಗಾರೇ ಹೇಂಗೆ ಜಗದಗಲ ಸಾಮಾನ್ಯ ಜನ ಬದ್ಕತ್ತಾರೆ ಹೇಳು ?

ನೀ ಮತ್ತೆ ಹುಟ್ಟಿ ಬಾ , ಅಣ್ಣಾ ಬಸವಣ್ಣ!

 

ಮೂಢ ನಂಬಿಕೆ ಗಹಗಹಿಸಿ ನಗ್ತಾವ

ಚಿತ್ತದ ಚಿತ್ತಾರ ಕಳಚಿ ಬಿದ್ದಾವ

ಜ್ಞಾನದ ದೇಗುಲ ಕುಸಿದು ಹೋಗೈತೆ

ನಾಯಕನಿಲ್ಲದ ದೋಣಿ ನೀರಾಗ ತೇಲೈತಿ

ಹೀಂಗಾದ್ರೇ ಬದುಕು, ಬದುಕಿಂದ

ಬಾಳು ಹೇಂಗೆ ಹೇಳಣ್ಣಾ ?

ನೀ ಮತ್ತೆ ಹುಟ್ಟಿ ಬಾ ,ಅಣ್ಣಾ ಬಸವಣ್ಣ!

 

ರಚನೆ : ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್