ಮತ್ತೇರಿಸುವ ಚೆಲುವು
ಕವನ
ಬಾನ ಚೆಂದಿರ ನೀನೆ ಸುಂದರ
ಅಂತರಂಗದ ಒಡೆಯನೆ
ಜಾಣ ಜಾಣರ ವೀರ ಶೂರನೆ
ಪಂದ್ಯ ಸೋಲದ ಚತುರನೆ||
ಸುತ್ತ ಹಳ್ಳಿಲಿ ಎಲ್ಲು ಕಾಣದ
ಚೆಲುವ ಚೆನ್ನಿಗ ರಾಯನೆ
ಮಾತು ಮಾತಲಿ ಮೋಡಿ ಮಾಡುವ
ಮೋಜುಗಾರನೆ ಇನಿಯನೆ||
ಶಿಸ್ತು ಬದ್ದದ ಚೆಂದ ಬದುಕನು
ನಡೆಸೊ ನನ್ನೆದೆ ಯೋಧನೆ
ಮಸ್ತು ಮಸ್ತಿನ ಮೈಯ ಕಟ್ಟಿನ
ಕುಸ್ತಿಯಾಡುವ ಧೀರನೆ
ಚಿತ್ತ ಚೋರನೆ ಕತ್ತು ತಿರಗಿಸಿ
ಇತ್ತ ಕೊಂಚವು ನೋಡಯ
ಮತ್ತು ಏರಿಸೊ ನಿನ್ನ ನಿಲುವನು
ಕಂಡು ಹಿಡಿದಿದೆ ಭ್ರಾಂತಿಯು||
ಪ್ರೇಮದರಮನೆ ಕದವು ತೆರೆದಿದೆ
ನಿನ್ನ ಬರುವಿಗೆ ಈ ದಿನ
ಶ್ಯಾಮನೊಲವನು ತೋರೆ ತನುವಿಗೆ
ಮಧುರ ಮೈತ್ರಿಯು ಈ ದಿನ||
-*ಶ್ರೀ ಈರಪ್ಪ ಬಿಜಲಿ*
ಚಿತ್ರ್